ಐರಾ ಯಥರ್ವ್ ಜೊತೆ ಗಣೇಶ ಹಬ್ಬ ಆಚರಿಸಿದ ರಾಧಿಕಾ ಪಂಡಿತ್ ಹಾಗೂ ಯಶ್..ಒಮ್ಮೆ ನೋಡಿ..

ಸ್ಯಾಂಡಲವುಡ್

ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ನಟಿ ರಾಧಿಕಾ ಪಂಡಿತ್ ಹಾಗೂ ನಟ ಯಶ್ ಅವರು ನೆನ್ನೆ ತಮ್ಮ ಮಕ್ಕಳಾದ ಐರಾ ಮತ್ತು ಯಥರ್ವ್ ಜೊತೆಗೆ ಗೌರಿ ಮತ್ತು ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ನೆನ್ನೆ ಗೌರಿ ಹಬ್ಬ ಇದ್ದ ಕಾರಣ ನಟಿ ರಾಧಿಕಾ ಪಂಡಿತ್ ಪ್ರತಿ ವರ್ಷದಂತೆ ಈ ವರ್ಷ ಕೂಡ ತಮ್ಮ ತವರು ಮನೆಗೆ ಹೋಗಿ ಗೌರಿ ಹಬ್ಬವನ್ನು ಆಚರಿಸಿದ್ದರು.

ಆದರೆ ಮತ್ತೆ ನಟಿ ತಮ್ಮ ಗಂಡನ ಮನೆಗೆ ಬಂದು ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ನಟಿ ರಾಧಿಕಾ ಪಂಡಿತ್ ಅವರಿಗೆ ಈ ಸಲ ಗೌರಿ ಗಣೇಶ ಹಬ್ಬ ತುಂಬಾನೇ ವಿಶೇಷವಾಗಿದೆಯಂತೆ. ನನಗೆ ಹಬ್ಬಗಳೆಂದರೆ ತುಂಬಾನೇ ಹಚ್ಚುಮೆಚ್ಚು ಅದರಲ್ಲೂ ವರಮಹಾಲಕ್ಷ್ಮೀ ಹಾಗೂ ಗೌರಿ ಗಣೇಶ ಹಬ್ಬಗಳು ಎಂದರೆ ತುಂಬಾನೇ ವಿಶೇಷ.

ಹಿಂದಿನ ವರ್ಷ ನಾನು ಗೌರಿ ಹಬ್ಬವನ್ನು ನನ್ನ ಇಬ್ಬರೂ ಮಕ್ಕಳ ಜೊತೆಗೆ ಅಮ್ಮನ ಮನೆಯಲ್ಲಿ ಆಚರಿಸಿದೆ. ಆದರೆ ಮಕ್ಕಳಿಗೆ ಗಣೇಶ ಇಷ್ಟ, ಈಗಾಗಿ ಗಣೇಶ ಹಬ್ಬವನ್ನು ನಮ್ಮ ಮನೆಯಲ್ಲಿ ಆಚರಿಸಿದೆವು.

ಈ ವರ್ಷ ಗೌರಿ ಗಣೇಶನಿಗೆ ವಿಶೇಷ ಪೂಜೆ ಮಾಡಿ ತಮ್ಮ ಮಕ್ಕಳ ಜೀವನ ಸುಖಮಯವಾಗಿರಲಿ ಎಂದು ಪ್ರಾರ್ಥನೆ ಮಾಡು ಎಂದಿದ್ದಾರೆ. ಐರಾ ಹಾಗೂ ಯಥರ್ವ್ ಗೂ ಕೂಡ ಗೌರಿ ಗಣೇಶ ಹಬ್ಬ ಎಂದರೆ ತುಂಬಾನೇ ಭಕ್ತಿ.

ಮದುವೆಯಾದ ಪ್ರತಿಯೊಂದು ಹೆಣ್ಣು ಮಕ್ಕಳಿಗೂ ಗೌರಿ ಗಣೇಶ ಹಬ್ಬ ಎಂದರೆ ತುಂಬಾ ಸ್ಪೆಷಲ್ ಆಗಿರುತ್ತದೆ. ತಮ್ಮವರನ್ನು ನೋಡಲು ತವರು ಮನೆಗೆ ತೆರಳುತ್ತಾರೆ. ಅಲ್ಲಿ ಅಮ್ಮ ನೆಂಟರು ತಮ್ಮಂದಿರಿಗೆ ಬೆರೆಯಲು ಸಮಯ ಸಿಗುತ್ತದೆ.
ಆ ದಿನ ಸಂಭ್ರಮದಿಂದ ಖುಷಿ ಪಡುತ್ತಾರೆ.

ನಾನು ಪ್ರತಿ ವರ್ಷ ಗೌರಿ ಹಬ್ಬವನ್ನು ಆಚರಿಸಿ, ಗಂಡನ ಮನೆಯಲ್ಲಿ ಗಣೇಶ ಹಬ್ಬವನ್ನು ಆಚರಿಸಲು ಹೋಗುತ್ತೇನೆ. ಅದರಂತೆ ಇಂದು ನಮ್ಮ ಹೊಸ ಮನೆಯಲ್ಲಿ ಗಂಡ ಹಾಗೂ ಮಕ್ಕಳ ಜೊತೆ ಗೌರಿ ಗಣೇಶ ಹಬ್ಬವನ್ನು ಆಚಯಿಸುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ.

ಇನ್ನು ಗಣೇಶ ಹಬ್ಬದಲ್ಲಿ ಐರಾ ಹಾಗೂ ಯಥರ್ವ್ ಮನೆಯಲ್ಲಿ ಪುಟ್ಟ ಗಣೇಶನನ್ನು ಕೂರಿಸಿದ್ದಾರೆ. ಇಬ್ಬರೂ ಕೂಡ ಬಣ್ಣ ಬಣ್ಣದ ಬಟ್ಟೆ ತೊಟ್ಟು ಹಬ್ಬದ ದಿನ ಸಂಭ್ರಮ ಪಟ್ಟಿದ್ದಾರೆ. ನಮ್ಮ ಕುಟುಂಬದ ಪರವಾಗಿ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡು, ನಟಿ ರಾಧಿಕಾ ಪಂಡಿತ್ ಐರಾ ಹಾಗೂ ಯಥರ್ವ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಐರಾ ಹಾಗೂ ಯಥರ್ವ್ ಅವರನ್ನು ಟ್ರೇಡಿಷನಲ್ ಲುಕ್ ನಲ್ಲಿ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ನೀವು ಸಹ ಈ ಪೋಸ್ಟ್ ಗೆ ಕಾಮೆಂಟ್ ಮಾಡಿ ಯಶ್ ಹಾಗೂ ರಾಧಿಕಾ ಕುಟುಂಬಕ್ಕೆ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿ..

Leave a Reply

Your email address will not be published. Required fields are marked *