ಕನ್ನಡ ಚಿತ್ರರಂಗದ ಅದ್ಭುತ ನಟರ ಪೈಕಿ ನಟ ಜಗ್ಗೇಶ್ ಕೂಡ ಒಬ್ಬರು. ತಮ್ಮ ಹಾಸ್ಯ ಡೈಲಾಗ್ ಹಾಗೂ ಉತ್ತಮ ನಟನೆಯ ಮೂಲಕ ನಟ ಜಗ್ಗೇಶ್ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಅವರ ಡಬಲ್ ಮೀನಿಂಗ್ ಡೈಲಾಗ್ ಗಳಿಗೆ ನಟ ಜಗ್ಗೇಶ್ ತುಂಬಾ ಫ್ಹೇಮಸ್.
ಇನ್ನು ಇತ್ತೀಚೆಗೆ ಬಾರಿ ಮಳೆವ ಕಾರಣ ನಟ ಜಗ್ಗೇಶ್ ಅವರ ಮನೆಗೆ ಮಳೆ ನೀರು ನುಗ್ಗಿರುವುದರ ಬಗ್ಗೆ ನಟ ಸೋಷಿಯಲ್ ಮಿಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇನ್ನು ಇದೀಗ ಈ ಬಗ್ಗೆ ಮತ್ತೊಂದು ಟ್ವಿಟ್ ಮಾಡುವ ಮೂಲಕ ನಟ ಸುದಿಯಲ್ಲಿದ್ದಾರೆ.
ಎರಡು ದಿನಗಳ ಹಿಂದಷ್ಟೇ ತಮ್ಮ ಮನೆ ಜಲಾವೃತ್ತಗೊಂಡ ಬಗ್ಗೆ ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಟ್ವಿಟ್ ಮಾಡಿದ್ದರು. ಮಾಯಸಂದ್ರದಲ್ಲಿ ತಮ್ಮ ಮನೆಯಲ್ಲಿ ನೀರು ತುಂಬಿಕೊಂಡಿದೆ. ನೀರು ಹರಿಯುವ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂದಿದ್ದರ ಪರಿಣಾಮ 20 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ ಎಂದು ಬರೆದುಕೊಂಡಿದ್ದರು.
ಕೂಡಲೇ ಇದರ ಬಗ್ಗೆ ನಿಗಾ ವಹಿಸುವಂತೆ ನೀರಾವರಿ ಇಲಾಖೆಗೆ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದರು. ತಮ್ಮದೇ ಪಕ್ಷದ ಆಡಳಿತಾ ಸದಸ್ಯರೊಬ್ಬರು, ಈ ರೀತಿ ಮನವಿ ಮಾಡಿಕೊಂಡರೆ, ಸಾಮಾನ್ಯರ ಗತಿ ಏನು ಎಂದು ವಿರೋಧ ಪಕ್ಷಗಳು ಜಗ್ಗೇಶ್ ಟ್ವಿಟ್ ಗದ್ ಆಡಿಕೊಂಡು ನಕ್ಕಿದ್ದರು.
ಆದರೂ ಇದೀಗ ಜಗ್ಗೇಶ್ ಸಮಸ್ಯೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸ್ಪಂದಿಸಿದ್ದಾರೆ. ಆಗಿರುವ ಸಮಸ್ಯೆಯನ್ನು ಮುಖ್ಯಮಂತ್ರಿ ಅವರು ಸರಿ ಮಾಡಿದ್ದಾರೆ. ಈಗಾಗಿ ನಗ ಜಗ್ಗೇಶ್ ಟ್ವಿಟ್ ಮಾಡಿ ಮುಖ್ಯಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಜೊತೆಗೆ ನಟ ಜಗ್ಗೇಶ್ ಪ್ರಧಾನಿ ಮೋದಿ ಅವರನ್ನು ಕೂಡ ಆಡಿ ಹೋಗಳಿದ್ದಾರೆ. ಪಾಕಿಸ್ಥಾನ ಮುಳುಗಿದೆ, ಭಾರತ ಮೆಳಗೆನಲುಗಿದೆ, ಲಂಕೆ ಹಾಳಾಗಿದೆ, ಆದರೂ ಭಾರತ ಜಗ್ಗದೆ ತಲೆ ಎತ್ತಿ ನಿಂತಿದೆ. ಒಬ್ಬ ಚಿಂತಕ ನರೇಂದ್ರ ಮೋದಿ ದೂರ ದೃಷ್ಟಿಗೆ ಸಣ್ಣ ಸಮಸ್ಯೆಗೆ ನಮ್ಮ ದೊರೆ ವಿನಂತಿಸಿದೆ.
ಟ್ವಿಟರ್ ಅನಿಸಿಕೆಗೆ ಕಾಂಗ್ರೆಸ್ ಬಂಧುಗಳು ಅಣುಕಿಸಿದರು, ಗೆದ್ದಂತೆ ಬೀಗಿದರು, ನಮ್ಮ ಗಂಡು ಮಗ ಆದ ಬೊಮ್ಮಾಯಿ ಸಮಸ್ಯೆ ಭಗೆ ಹರಿಸಿದರು ಎಂದು ಜಗ್ಗೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮಾಡುವ ಮೂಲಕ ಆಡಿಕೊಂಡವರ ಬಾಯಿ ಮುಚ್ಚಿಸಿದ್ದಾರೆ.