ಸಿಟ್ಟು, ಕೋಪ ಎನ್ನುವುದು ಮನುಷ್ಯನ ಅತಿ ದೊಡ್ಡ ಶತ್ರು ಎಂದರೆ ತಪ್ಪಾಗಲಾರದು. ಸಿಟ್ಟು ಬಂದಾಗ ಕೆಲವರು ತಮ್ಮ ಸುತ್ತ ಮುತ್ತಲಿನ ವಸ್ತುಗಳನ್ನು ನಾಶಮಾಡಬಹುದು. ಇನ್ನು ಕೆಲವರು ತಮ್ಮ ಸುತ್ತಲಿನ ವ್ಯಕ್ತಿಗಳ ಮೇಲೆ ಹರಿಹಾಯಬಹುದು, ಅಥವಾ ಇನ್ನು ಕೆಲವರು ತಮಗೆ ತಾವೇ ನಕವನ್ನುಂಟು ಮಾಡಿಕೊಳ್ಳುತ್ತಾರೆ.
ತಮ್ಮ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮೌನದ ಮೊರೆ ಹೋಗುವವರು ಬೆರಳಣಿಕೆಯ ಮಂದಿ ಎಂದು ಹೇಳಬಹುದು. ಕೆಲವರು ತಮ್ಮ ರಾಶಿಚಕ್ರ ಹಾಗೂ ಗ್ರಹಗಳ ಪ್ರಭಾವದಿಂದ ಸಣ್ಣ ಪುಟ್ಟ ಸಮಸ್ಯೆಗಳಿಗೂ ಅಧಿಕ ಉದ್ವೇಗಕ್ಕೆ ಒಳಗಾಗುತ್ತಾರೆ.
ಇವರು ಸಿಟ್ಟಿನಲ್ಲಿ ಇರುವಾಗ, ಮಾತನಾಡಿಸುವಾಗ, ಸಾಕಷ್ಟು ಚಿಂತನೆ ನಡೆಸಬೇಕಾಗುವುದು. ಇವರಿಗೆ ಕೋಪ ಕಡಿಮೆಯಾದ ಬಳಿಕ ಮಾತನಾಡಬೇಕು ಅಷ್ಟೇ. ಹಾಗಾದರೆ ಅತಿಯಾದ ಸಿಟ್ಟಿನ ರಾಶಿಚಕ್ರದ ಪಟ್ಟಿಯಲ್ಲಿ ಯಾವ ರಾಶಿಚಕ್ರದವರೂ ನಿಲ್ಲುತ್ತಾರೆ? ಎನ್ನುವುದನ್ನು ತಿಳಿಯಲು ಈ ಪುಟವನ್ನು ಸಂಪೂರ್ಣವಾಗಿ ಓದಿ..
ಮೇಷ ರಾಶಿ: ಈ ರಾಶಿಯ ವ್ಯಕ್ತಿಗಳು ಹಠಾತ್ ಕೋಪಕ್ಕೆ ಒಳಗಾಗುತ್ತಾರೆ. ಇವರಲ್ಲಿ ಅಕ್ರಮಕಾರಿ ಪ್ರವೃತ್ತಿಯನ್ನು ನಾವು ಕಾಣಬಹುದು. ಸ್ಪರ್ಧಾತ್ಮಕ ಮನೋಭಾವವನ್ನು ಹೊಂದಿರುವ ಇವರು ಸುಲಭವಾಗಿ ನಿರಾಶೆಗೆ ಒಳಗಾಗುತ್ತಾರೆ. ಘರ್ಷಣೆ ಮತ್ತು ಕಿರಿಕಿರಿಗೆ ಒಳಗಾದಾಗ ಬಹುಬೇಗ ಕೋಪಗೊಳ್ಳುತ್ತಾರೆ ಎನ್ನಲಾಗುವುದು. ಇವರಲ್ಲಿ ತಾಳ್ಮೆಯ ಪ್ರಭಾವ ಕಡಿಮೆಯಿರುವುದೇ ಇದಕ್ಕೆ ಕಾರಣ ಎನ್ನಬಹುದು.
ಕರ್ಕಾಟಕ ರಾಶಿ: ಈ ರಾಶಿಯ ವ್ಯಕ್ತಿಗಳು ಭಾವನಾತ್ಮಕ ಹಾಗೂ ಸೂಕ್ಷ್ಮ ಪ್ರವೃತ್ತಿಯವರು ಎನ್ನಬಹುದು. ಇವರು ಅಸಮಾಧಾನಗೊಂಡಾಗ ಹಾಗೂ ನಿರಾಶೆಗೆ ಒಳಗಾದಾಗ, ಸಂಗಾತಿ ಅಥವಾ ಸ್ನೇಹಿತರೊಂದಿಗೆ ವಾದಕ್ಕೆ ಒಳಗಾದ ಸಂದರ್ಭದಲ್ಲಿ ಅಧಿಕ ಸಿಟ್ಟನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇವರ ಕೋಪ ಅಧಿಕವಾಗಿರುವಾಗ ಕೋಪಕ್ಕೆ ಕಾರಣವಾದವರಿಗೆ ಹೊಡೆಯುವ ಸಾಧ್ಯತೆಗಳು ಇರುತ್ತವೆ.
ಸಿಂಹ ರಾಶಿ: ಈ ರಾಶಿಯವರು ತೊಂದರೆಗೆ ಒಳಗಾದಾಗ ಸಾಕಷ್ಟು ಸಮಾಧಾನದಲ್ಲಿಯೇ ಇರುತ್ತಾರೆ. ಯಾವಾಗ ಇವರ ತಾಳ್ಮೆ ಮೀರಿ ಅತಿಯಾದ ತೊಂದರೆ ಹಾಗೂ ಅಸಮಾಧಾನಕ್ಕೆ ಒಳಗಾಗುತ್ತಾರೋ, ಆಗ ಅವರ ಸಿಟ್ಟು ನಿಯಂತ್ರಣವನ್ನು ತಪ್ಪಿರುತ್ತದೆ.
ಅಲ್ಲದೆ ಇವರ ಸ್ನೇಹಿತರು ಇವರಿಂದ ಅಂಗಿಯನ್ನು ಎರವಲು ಪಡೆದು ಮತ್ತೆ ಹಿಂತಿರುಗುಸುವಾಗ ಅದರ ಮೇಲೆ ಯಾವುದೇ ಹಾನಿ ಉಂಟಾಗಿದ್ದರೆ ದೊಡ್ಡ ಸಿಟ್ಟನ್ನು ತೋರುವರು. ಅನಿರೀಕ್ಷಿತವಾಗಿ ಉಂಟಾಗುವ ಸಮಸ್ಯೆಗಳಿಗೆ ಅಧಿಕ ಸಿಟ್ಟನ್ನು ತೋರುವರು ಎನ್ನಲಾಗುವುದು.
ವೃಶ್ಚಿಕ ರಾಶಿ: ಈ ರಾಶಿ ಚಕ್ರದವರು ಸಾಮಾನ್ಯವಾಗಿ ಸಮರ್ಥನೀಯ ಹಾಗೂ ಬೆಂಕಿಯ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ವಿಷಯವು ಇವರ ದಾರಿಯಲ್ಲಿ ಇಲ್ಲದಿದ್ದರೆ ಬಹಳ ಕೋಪವನ್ನು ತೋರುವರು. ಕೆಲವೊಮ್ಮೆ ಹಿಂಸಾತ್ಮಕ ರೂಪವನ್ನು ತಾಳುವರು. ಆಗಾಗಿ ಈ ರಾಶಿಚಕ್ರದವರು ಸಿಟ್ಟಿಗೆ ಬುದ್ದಿ ಕೊಡದೆ ಶಾಂತವಾಗಿ ಇರಬೇಕು.