ಸರ್ಜಾ ಕುಟುಂಬದಲ್ಲಿ ಹೊಸ ಸದಸ್ಯರ ಆಗಮನವಾಗಲಿದೆ. ಧೃವ ಸರ್ಜಾ ಪ್ರೇರಣಾ ಶಂಕರ್ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಧೃವ ಸರ್ಜಾ ಅವರು ಈ ವಿಷಯವನ್ನು ಅಧಿಕೃತ ಪಡಿಸಿದ್ದಾರೆ.
ನಾವು ಆದಷ್ಟು ಬೇಗ ನಮ್ಮ ಜೀವನದ ಹೊಸ ಅಂತಕ್ಕೆ ಕಾಲಿಡಲಿದ್ದೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಪತ್ನಿ ಪ್ರೇರಣಾ ಜೊತೆಗಿನ ವಿಶೇಷವಾದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದೀಗ ನಟಿ ಮೇಘನಾ ರಾಜ್ ಅವರು ತಮ್ಮ ಮಗ ರಾಯನ್ ಜೊತೆಗೆ ಕಾರಿನಲ್ಲಿ ಸರ್ಜಾ ಕುಟುಂಬಕ್ಕೆ ಬಂದಿದ್ದಾರೆ. ಇನ್ನು ಧೃವ ಪತ್ನಿ ಪ್ರೇರಣಾ ಅವರನ್ನು ಭೇಟಿ ಮಾಡಿ ತಾಯ್ತನದ ಕೆಲವು ಸಲಹೆಗಳನ್ನು ನೀಡಿದ್ದಾರೆ. ರಾಯನ್ ಜೊತೆಗೆ ಆಟವಾಡಲು ಪುಟ್ಟ ತಂಗಿಯೋ ತಮ್ಮನೋ ಬರುತ್ತಾನೆ.
ನಾನಂತೂ ತುಂಬಾ ಕುತೂಹಲದಿಂದ ಕಾಯುತ್ತಿದ್ದೇನೆ. ಪ್ರೇರಣಾ ಅವರಿಗೆ ನಿನ್ನ ಆರೋಗ್ಯ ಸರಿಯಾಗಿ ನೋಡಿಕೊ ಎನ್ನುವ ಮಾತು ಹೇಳಿದ್ದಾರೆ ನಟಿ ಮೇಘನಾ. ಇನ್ನು ಪೋಷಕರಾಗುತ್ತಿರುವ ನಟ ಧೃವ ಸರ್ಜಾ ಹಾಗೂ ಪ್ರೇರಣಾ ಇಬ್ಬರಿಗೂ ಸೋಷಿಯಲ್ ಮಿಡಿಯಾದ ಮುಖಾಂತರ ನಟಿ ಮೇಘನಾ ಶುಭ ಕೋರಿದ್ದಾರೆ.
ಸದ್ಯದಲ್ಲೇ ಸರ್ಜಾ ಕುಟುಂಬಕ್ಕೆ ಹೊಸ ಮಗುವಿನ ಆಗಮನ ಆಗಲಿದೆ. ಒಂದರ ಮೇಲೊಂದು ನೋವನ್ನು ಅನುಭವಿಸಿದ್ದ ಸರ್ಜಾ ಕುಟುಂಬಕ್ಕೆ ಇದೀಗ ಸಂತಸದ ಸಮಯ ಬಂದಿದೆ. 2019 ರಲ್ಲಿ ಧೃವ ಸರ್ಜಾ ಅವರು ಪ್ರೇರಣಾ ಅವರನ್ನು ಪ್ರೀತಿಸಿ ಮದುವೆಯಾದರು.
ನೆರೆ ಮನೆಯವರಾದ ಪ್ರೇರಣಾ ಹಾಗೂ ಧೃವ ಸರ್ಜಾ ಅವರು ಅನೇಕ ವರ್ಷಗಳ ಕಾಲ ಪ್ರೀತಿ ಮಾಡಿ ತಮ್ಮ ಕುಟುಂಬದವರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಇದೀಗ ಅಪ್ಪ ಆಗುತ್ತಿರುವ ಧೃವ ಹಾಗೂ ಅಮ್ಮನ ಸ್ಥಾನಕ್ಕೆ ಬರ್ತಿ ಪಡೆಯುತ್ತಿರುವ ಪ್ರೇರಣಾ ಅವರಿಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.
ಧೃವ ಸರ್ಜಾ ಅವರ ಸೋದರ ಮಾವ ಅರ್ಜುನ್ ಸರ್ಜಾ ಹಾಗೂ ಮಗಳು ಐಶ್ವರ್ಯ ಸರ್ಜಾ ಕ್ಯೂಟ್ ಜೋಡಿಯ ಮುದ್ದಾದ ಮಗುವನ್ನು ನೋಡಲು ಅಂಬಲಿಸುತ್ತಿದ್ದೇನೆ. ಈ ವಿಷಯ ಗೊತ್ತಿದ್ದು ಹೇಳದೆ ಮೌನವಾಗಿದ್ದಿದ್ದಕ್ಕೆ ನನಗೆ ಟ್ರೋಫಿ ಸಿಗಬೇಕು ಎಂದು ಹೇಳಿದ್ದಾರೆ. ಪುಟ್ಟ ಮಗುವಿನ ಆಗಮನದ ಖುಷಿಯಲ್ಲಿರುವ ಧೃವ ಸರ್ಜಾ ಹಾಗೂ ಪ್ರೇರಣಾ ಅವರಿಗೆ ನೀವು ಕೂಡ ಕಾಮೆಂಟ್ ಮಾಡುವ ಮೂಲಕ ಶುಭಾಶಯಗಳನ್ನು ತಿಳಿಸಿ.