ಯಾವ ಸ್ಟಾರ್ ಜೊತೆ ಆಕ್ಟ್ ಮಾಡ್ಬೇಕಂತ ಆಸೆ ಇದೆ ಎನ್ನುವ ಪ್ರಶ್ನೆಗೆ ನಟಿ ಅಂಕಿತಾ ಅಮರ್ ಏನೆಂದು ಉತ್ತರಿಸಿದ್ದಾರೆ ನೋಡಿ…

ಸಿನಿಮಾ ಸುದ್ದಿ

ಅಂಕಿತಾ ಅಮರ್ ಇವರ ಹೆಸರು ಎಲ್ಲರಿಗೂ ಚಿರಪರಿಚಿತ ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಹೆಸರು ಮಾಡಿದ್ದ ಧಾರಾವಾಹಿಯಾದ
ನಮ್ಮನೇ ಯುವರಾಣಿ ಅಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 1997 ರಲ್ಲಿ ಜನಿಸಿದ ಇವರಿಗೆ 25 ವರ್ಷಗಳು ಸಣ್ಣ ವಯಸ್ಸಿನಲ್ಲಿಯೇ ತಮ್ಮ ಅದ್ಭುತ ಪ್ರತಿಭೆಯಿಂದ ತಮ್ಮನ್ನು ಬಿಂಬಿಸಿಕೊಂಡಂತ ನಟಿ.

ಇವರು ಕನ್ನಡದ ಕಿರುತೆರೆಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನಟಿಸಿ ಹಲವರ ಮನಸೂರೆ ಮಾಡಿದರು. ನಿಮಗೆ ಹೇಗೆ ಕನ್ನಡ ಕಿರುತೆರೆಯಲ್ಲಿ ಮತ್ತು ಸಿನಿಮಾದಲ್ಲಿ ಅವಕಾಶ ಸಿಕ್ಕಿತು ಎನ್ನುವುದನ್ನು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇವರಿಗೆ ಇವರ ತಂದೆ ತಾಯಿ ಸಪೋರ್ಟ್ ಇಷ್ಟು ಮುಂದೆ ಬರಲು ಕಾರಣವಾಯಿತು ಮತ್ತು ಇವರು ಕಲರ್ಸ್ ಕನ್ನಡ ಮಾತ್ರವಲ್ಲದೆ ಜೈ ಮಾತಾ ದಿ ಕಂಪನಿಯ ಮೂಲಕ ಗುರುತಿಸಿಕೊಂಡಿದ್ದರು. ಇವರು ಕಿರುತೆರೆಯಲ್ಲಿ ನಟಿಸಬೇಕಾದರೆ ಒಂದು ಸಂಕೀರ್ತನೆ ಪ್ರಮುಖ ಕಾರಣವಾಗಿತ್ತು.

ಆ ಸಂಕೀರ್ತನೆಯೆ ಇವರನ್ನು ಕಿರುತೆರೆಯಲ್ಲಿ ಗುರುತಿಸಿಕೊಳ್ಳುವ ಮಾಡಿತು. ಕಿರುತೆರೆಯಿಂದ ಸಿನಿಮಾಗೆ ಅವಕಾಶ ಬೇಗ ಅತಿ ಚಿಕ್ಕ ವಯಸ್ಸಿನಲ್ಲಿ ಗಳಿಸಿಕೊಂಡ ನಟಿ ಎಂದು ಹೆಸರು ಮಾಡಿಕೊಂಡಿದ್ದಾರೆ. ಆ ಸಂಕೀರ್ತನೆಯ ಮೂಲಕವೇ ನಾನು ಕಲರ್ಸ್ ಕನ್ನಡದ ನಮ್ಮನೆ ಯುವರಾಣಿಯಲ್ಲಿ ಕೆಲಸ ಮಾಡುತ್ತೇನೆಂದು ಗುರುತಿಸಿದ್ದರು.

ಆ ವಿಡಿಯೋ ಕೂಡ ಸ್ವಲ್ಪ ವೈರಲ್ ಆಗಿತ್ತು ಈ ರೀತಿ ನನಗೆ ಆ ಫ್ಯಾಮಿಲಿಯ ಒಂದು ಭಾಗವಾಗಿ ಉಳಿಯಲು ಅವಕಾಶ ಸಿಕ್ಕಿತು ಹೀಗೆ ನನಗೆ ಕಿರುತೆರೆಯಲ್ಲಿ ಅವಕಾಶ ಸಿಕ್ಕಿದ್ದು ಎಂದು ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಕಿರುತೆರೆಯಲ್ಲಿ ನಟಿಸುವವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕುವುದು ಒಂದು ದೊಡ್ಡ ಕಷ್ಟಕರವಾದ ಕೆಲಸ ಮತ್ತು ಅದಕ್ಕೆ ಒಂದು ಬ್ರೇಕ್ ಎನ್ನುವುದು ಬೇಕು ಆದರೆ ನನಗೆ ಆ ರೀತಿಯಾದಂತ ಕಷ್ಟ ಎನಿಸಲಿಲ್ಲ ಯಾಕೆಂದರೆ ಈ ಪಾತ್ರವೂ ಕೂಡ ನನಗೆ ಒಂದು ಬ್ರೇಕ್ ಎಂದು ಎನಿಸಿತು ಹಾಗೆ ನನ್ನನ್ನು ಇಷ್ಟು ದಿನ ಬೆಳೆಸಿಕೊಂಡು ಬಂದಂತೆ ? ನಾನು ಅಭಿಮಾನಿಗಳು ಎಂದು ಹೇಳಲು ಬಯಸುವುದಿಲ್ಲ ವೀಕ್ಷಕರು ನನ್ನ ಕಣ್ಮಣಿಗಳು ಎಂದು ಹೇಳಲು ಬಯಸುತ್ತೇನೆ.

ಅವರ ಸಪೋರ್ಟ್ ನನಗೆ ತುಂಬಾನೇ ಮುಖ್ಯ ಅವರು ನನ್ನನ್ನು ಈ ರಂಗದಲ್ಲಿಯೂ ಬೆಳೆಸುತ್ತಾರೆ ಎಂದು ನಂಬಿದ್ದೇನೆ. ನನಗೆ ಇಷ್ಟು ಕಡಿಮೆ ಸಮಯದಲ್ಲಿಯೇ ಇಷ್ಟು ಒಂದು ಒಳ್ಳೆ ಪಾತ್ರ ಸಿಗುತ್ತದೆ ಎಂದು ನಾನು ಊಹೆ ಮಾಡಿರಲಿಲ್ಲ .

ನಿರ್ದೇಶಕ ಚಂದ್ರಜಿತ್ ಸರ್ ಈ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ಶ್ರಮವಹಿಸಿ ಅದನ್ನು ನನಗೆ ಹೇಗೆ ನಿಭಾಯಿಸಬೇಕು ಎಂದು ತಿಳಿಸಿ ಆ ಪಾತ್ರವನ್ನು ನನಗೆ ನಿರೂಪಿಸಲು ಕೊಟ್ಟದ್ದಕ್ಕಾಗಿ ಅವರಿಗೂ ನನ್ನ ಧನ್ಯವಾದಗಳು ಹೇಳುತ್ತೇನೆ. ಆ ಸಿನಿಮಾದಲ್ಲಿ ನನ್ನ ಹೆಸರು ಅನಾಹಿತ ಅಂಕಿತ ಎಂಬ ನಾನು ಅನಾಹಿತ ಎಂಬ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದೇನೆ . ಮಾತ್ರವಲ್ಲದೆ ಅನಾಹಿತ ಎಂಬ ಹೆಸರು ಎಲ್ಲರಿಗೂ ಈ ಸಿನಿಮಾದ ನಂತರ ಎಷ್ಟು ಇಷ್ಟವಾಗುತ್ತೆ ಅಂದರೆ ಕೆಲವೊಬ್ಬರು ಮಕ್ಕಳಿಗೂ ಕೂಡ ಇಡುವಷ್ಟು ಈ ಹೆಸರು ಫೇಮಸ್ ಆಗುತ್ತದೆ .

ಈ ಸಿನಿಮಾವನ್ನು ಇಂದ್ರಜಿತ್ ಅವರು ನನಗೆ ಒಂದು ವರ್ಷದ ಹಿಂದೆ ಅಪ್ರೋಚ್ ಮಾಡಿದ್ದರು . ಈ ವರ್ಷದ ಸೆಪ್ಟೆಂಬರ್ ನಿಂದ ಶೂಟಿಂಗ್ ಕೂಡ ನಡೆಯುತ್ತಿದ್ದು ಬಹಳಷ್ಟು ಕುತೂಹಲಕಾರಿ ಮತ್ತು ಹೊಸ ಪಾತ್ರ ನಿರೂಪಣೆ ತುಂಬಾನೇ ಹಿಡಿಸಿದೆ . ಹೀಗೆ ತಮ್ಮನ್ನು ಸಂದರ್ಶನ ಮಾಡಿದಂತಹ ಮಾಧ್ಯಮದವರೊಂದಿಗೆ ಅಂಕಿತ ಅಮರ್ ರವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *