ಇನ್ಮುಂದೆ 6 ತಿಂಗಳಿಗೊಂದು ಸಿನಿಮಾ ಫಿಕ್ಸ್ ಕಿಚ್ಚ ಸುದೀಪ್ ಹೇಳಿಕೆಗೆ ಅಭಿಮಾನಿಗಳು ಫಿದಾ ನೀವೇ ನೋಡಿ..

ಸಿನಿಮಾ ಸುದ್ದಿ

ಇನ್ಮುಂದೆ 6 ತಿಂಗಳಿಗೊಂದು ಸಿನಿಮಾ ಫಿಕ್ಸ್ ಕಿಚ್ಚ ಸುದೀಪ್ ಹೇಳಿಕೆಗೆ ಅಭಿಮಾನಿಗಳು ಫಿದಾ ನೀವೇ ನೋಡಿ..

ಕರುನಾಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಅದ್ಭುತ ಅಭಿನಯದ ಮೂಲಕ ದೇಶದ ಮೂಲೆ ಮೂಲೆಯಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ನಟ ಕಿಚ್ಚ ಸುದೀಪ್ ಅವರ ಇತ್ತೀಚೆಗೆ ಬಿಡುಗಡೆಯಾದ ವಿಕ್ರಾಂತ್ ರೋಣ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದರ ಜೊತೆಗೆ ವೀಕ್ಷಕರ ಮನ ಗೆಲ್ಲುವಲ್ಲಿ ಸಹ ಸದ್ದು ಮಾಡಿತ್ತು.

ಇನ್ನು ಇದೀಗ ವಿಕ್ರಾಂತ್ ರೋಣ ಯಶಸ್ಸಿನ ಖುಷಿಯಲ್ಲಿರುವ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಬಗ್ಗೆ ಅವರ ಅಭಿಮಾನಿಗಳಲ್ಲಿ ಬಾರಿ ಕುತೂಹಲ ಇದೆ. ಇನ್ನು ಇದೀಗ ನಟ ಸುದೀಪ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಹೌದು ನಟ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬದ ದಿನ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾತನಾಡಿದ್ದು, ಯಾವ ರೀತಿ ಅವರ ಸಿನಿಮಾಗಳು ಬರಲಿದೆ ಎನ್ನುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಹೊಸ ಸಿನಿಮಾದ ಬಗ್ಗೆ ಹಿಂಟ್ ಕೊಟ್ಟಿದ್ದಾರೆ ನಟ ಕಿಚ್ಚ ಸುದೀಪ್.

ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾ ಬಹಳ ತಡವಾಗಿ ತೆರೆಮೇಲೆ ಬಂತು. ಕೊರೊನ ಕಾರಣದಿಂದಾಗಿ ಈ ಸಿನಿಮಾ ಸುಮಾರು 4 ವರ್ಷಗಳ ಕಾಲ ನಡೆಯುತ್ತಲೇ ಇತ್ತು, ಇನ್ನು ಮುಂದೆ ಸುದೀಪ್ ಅವರ ಸಿನಿಮಾಗಳು ತಡವಾಗುವುದಿಲ್ಲ. 6 ತಿಂಗಳಿಗೊಮ್ಮೆ ಸುದೀಪ್ ಸಿನಿಮಾ ಮಾಡುವುದಾಗಿ ನಟ ಸುದೀಪ್ ಹೇಳಿಕೊಂಡಿದ್ದಾರೆ.

ಇನ್ನು ನಟ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಮುಂದಿನ ಸಿನಿಮಾದ ಬಗ್ಗೆ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ನಟ ಕಿಚ್ಚ ಸುದೀಪ್ ಅವರಿಗೆ ಲಾವ್ ಎಂಬ ಸಿನಿಮಾದಲ್ಲಿ ನೀವು ನಟಿಸುತ್ತಿದ್ದೀರಾ ಎಂದು ಕೇಳಿದ ಪ್ರಶ್ನೆಗೆ.

ನಟ ಕಿಚ್ಚ ಸುದೀಪ್ ಉತ್ತರಿಸಿದ್ದು, ಕಾದು ನೋಡಿ ಎಂದು ಉತ್ತರಿಸಿದ್ದಾರೆ. ಇನ್ನು ಸದ್ಯ ಸುದೀಪ್ ಬಿಲ್ಲ ರಂಗ ಭಾಷಾ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಸಿನಿಮಾದ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಕೆಲವು ದಿನಗಳಿಂದ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.

ಇನ್ನು ಬಿಲ್ಲ ರಂಗ ಭಾಷಾ ಸಿನಿಮಾವನ್ನು ಕೂಡ ಕನ್ನಡದ ಹೆಸರಾಂತ ನಿರ್ದೇಶಕ ಅನೂಪ್ ಬಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಈ ಸಿನಿಮಾದ ಜೊತೆಗೆ ಸುದೀಪ್ ಅವರ ಮತ್ತೊಂದು ಸಿನಿಮಾ ಬಾರಿ ಚರ್ಚೆಯಲ್ಲಿದೆ. ಹೌದು ಸುದೀಪ್ ಅವರು ಅಶ್ವತ್ತಾಮ ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave a Reply

Your email address will not be published. Required fields are marked *