ನಟಿ ಸುಮಲತಾ ಆಕ್ರೋಶ ಇದಕ್ಕೆ ಕಾರಣ ಏನು ನೀವೇ ನೋಡಿ…
ನಮಸ್ಕಾರ ವೀಕ್ಷಕರೇ ಹೆದ್ದಾರಿ ನಿರ್ಮಾಣದಿಂದಾಗಿ ಬಹಳಷ್ಟು ಮಂದಿಗೆ ಅನುಕೂಲವಾಗಬಹುದು ಆದರೆ ಇದರ ಜೊತೆಗೆ ರೈತರ ಬದುಕು ಹಸಿರಾಗಬೇಕು. ಈ ನಟ್ಟಿನಲ್ಲಿ ಕಾಮಾಗಾರಿಕೆ ನಡೆಯಬೇಕು ಎನ್ನುವುದು ನನ್ನ ಉದ್ದೇಶವಾಗಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟ ಪಡಿಸಿದ್ದರು.
ಬಾರಿ ಮಳೆಯಿಂದಾಗಿ ಮೈಸೂರು ಮದ್ದೂರು ಕಾಮಗಾರಿಯ ಹೆದ್ದಾರಿಯಲ್ಲಿ ಆಗಿರುವ ಲೋಪದೋಷಗಳ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಅವರೊಂದಿಗೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದರು.
ಸರ್ವೀಸ್ ರಸ್ತೆ ನಿರ್ಮಾಣವಾದ ಬಳಿಕ ಒಂದೇ ತಿಂಗಳಲ್ಲಿ ದೊಡ್ಡ ಬಿರುಕು ಬಿಟ್ಟು ವಾಹನ ಓಡಾಡುತ್ತಿಲ್ಲ, ಇನ್ನು ಮಳೆ ಬರುವ ಸಾಧ್ಯತೆ ಇದೆ. ಈಗಲೇ ರಸ್ತೆಯಲ್ಲಿ ಇಂತಹ ಬಿರುಕು ಬಿಟ್ಟಿದಲ್ಲದೆ ಸ್ಲ್ಯಾಪ್ ಕೂಡ ಕುಸಿದಿದೆ. ಉದ್ಘಾಟನೆಯಾದ ರಸ್ತೆ ಈ ಪರಿಸ್ತಿತಿಯಾದರೆ, ಮುಂದಿನ ಜವಾಬ್ದಾರಿ ಯಾರದ್ದು.
ಈ ಎಲ್ಲಾ ಸಮಸ್ಯೆಗಳನ್ನು ಸರಿ ಪಡಿಸಿ ಮುಂದಿನ ಉದ್ಘಾಟನೆ ಮಾಡಲಿ ಎಂದು ಸುಮಲತಾ ತಿಳಿಸಿದ್ದರು. ಮದ್ದೂರಿನ ನಿಡಗಟ್ಟದಿಂದ ಶ್ರೀರಂಗಪಟ್ಟಣದ ಗಡಿಭಾಗದವರೆಗೂ 20 ಕಡೆಗಳಲ್ಲಿ ನ್ಯೂನ್ಯತೆ ಕಂಡು ಬಂದಿದೆ. ಹೆದ್ದಾರಿ ಪ್ರಾಧಿಕಾರಿಗಳ ಘಮನಕ್ಕೆ ತಂದಿದ್ದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ.
ಈಗಾಗಿ ಉಸ್ತುವಾರಿ ಸಚಿವರ ಕೆಡಿಪಿ ಸಭೆಯಲ್ಲಿ ಪರಿಶೀಲನೆ ನಡೆಸುವಂತೆ ಮಾಡಿದ್ದ ಮನವಿಗೆ ಸ್ಪಂದಿಸಿದ ಸಚಿವರು ಭೇಟಿ ನೀಡಿದ್ದಾರೆ. ಅವರಿಗೆ ಎಲ್ಲಾ ಸಮಸ್ಯೆಗಳ ಬಗ್ಗೆ ಕೂಡ ತಿಳಿಸಿದ್ದೇನೆ. ನಾನು ತಿಳಿಸುವುದಕ್ಕಿಂತ ಹೆಚ್ಚಾಗಿ ಜನ ಮನವರಿಕೆ ಮಾಡಿದ್ದಾರೆ.
ರೈತಾಪಿ ಜನ ತಮ್ಮ ಹೊಲ ಗದ್ದೆ ಕಡೆಗೆ ಹೋಗುವುದು, ಜಾನುವಾರುಗಳನ್ನು ಕರೆದೋಯುವುದಕ್ಕೆ ಸರಿಯಾದ ಫುಟ್ ಪಾಟ್ ರಸ್ತೆ ಇಲ್ಲ. ಹಾಗೆ ದೊಡ್ಡ ಚರಂಡಿಗಳು ಹಾಗೂ ಸರ್ವೀಸ್ ರಸ್ತೆ ಕೂಡ ಇಲ್ಲ. ತೇಪೆ ಸಾರಿರುವಂತಹ ಕೆಲಸ ಮಾಡಿದ್ದಾರೆ, ಈಗಾಗಿ ನೀರು ಸರಾಗವಾಗಿ ಚರಂಡಿ ಮೂಲಕ ಸಾಗದೆ ರಸ್ತೆಯಲ್ಲೇ ಉಳಿಯುತ್ತದೆ.
ಈ ಕಾರಣದಿಂದ ಅಕ್ಕಪಕ್ಕದ ಜಮೀನಿಗೂ ನೀರು ನುಗ್ಗಿ ಜನರಿಗೆ ಸಂಕಷ್ಟ ತರುತ್ತದೆ ಎಂದು ಆರೋಪಿಸಿದ್ದರು. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.