ನಿವೇದಿತಾ ಗೌಡ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಟಿಕ್ ಟಾಕ್ ಮಾಡಿಕೊಂಡು ತಮಗೆ ಸಿಕ್ಕ ಬಿಗ್ ಬಾಸ್ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು ಇದೀಗ ಯಾವ ಸ್ಟಾರ್ ನಟಿಗೂ ಕಡಿಮೆ ಇಲ್ಲದಂತೆ ಮಿಂಚುತ್ತಿದ್ದಾರೆ.
ಕಿಚ್ಚ ಸಿದೀಪ್ ಅವರ ಬಿಗ್ ಬಾಸ್ ಸೀಸನ್ 5 ರಲ್ಲಿ ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟ ನಿವೇದಿತಾ ಗೌಡ ನಂತರ ತಮ್ಮ ಮುದ್ದು ಮುದ್ದಾದ ಮಾತು ಹಾಗೂ ಗ್ಲಾಮರ್ ನ ಮೂಲಕ ಅದೆಷ್ಟೋ ಜನರ ನಿದ್ದೆ ಗೆಡಿಸಿದ್ದರು. ಅವರ ಕನ್ನಡ ಮಾತನಾಡುವ ಶೈಲಿ ಸ್ವಲ್ಪ ವಿಭಿನ್ನವಾಗಿದ್ದರೂ ಅದರಿಂದ ಅದೆಷ್ಟೋ ಜನರಿಗೆ ಮನರಂಜನೆ ನೀಡಿದ್ದಾರೆ.
ನಟಿ ನಿವೇದಿತಾ ಗೌಡ ಬಿಗ್ ಬಾಸ್ ಸೀಸನ್ 5 ರ ಫಿನಾಲೆವರೆಗೂ ತಲುಪಿದ್ದರು. ಇನ್ನು ಬಿಗ್ ಬಾಸ್ ನ ನಂತರ ನಟಿ ಸಾಕಷ್ಟು ಜಾಹೀರಾತುಗಳಲ್ಲಿ ಹಾಗೂ ಕನ್ನಡ ಕಿರುತೆರೆಯ ಹಲವಾರು ಕಾರ್ಯಕ್ರಮಗಳಲ್ಲಿ ಮಿಂಚಿದ್ದಾರೆ.
ಇನ್ನು ಬೆಳ್ಳಿತೆರೆಯಿಂದಲೂ ಸಹ ನಟಿಗೆ ಸಾಕಷ್ಟು ಅವಕಾಶಗಳು ಒದಗಿ ಬಂದಿದ್ದವು ಎನ್ನಲಾಗುತ್ತಿದೆ. ಇನ್ನು ಇದೀಗ ನಿವೇದಿತಾ ಗೌಡ ತೆಲುಗು ಸಿನಿಮಾರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿದೆ.
ನಿವೇದಿತಾ ಗೌಡ ಇತ್ತೀಚೆಗೆ ಚಂದನ್ ಶೆಟ್ಟಿ ಅವರನ್ನು ಮದುವೆಯಾದರು. ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ನಿವೇದಿತಾ ಆಗಾಗ ತಮ್ಮ ಹಾಗೂ ಚಂದನ್ ಅವರ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಇನ್ನು ನಿವೇದಿತಾ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜನರ ಆಯ್ಕೆ ವಿಭಾಗದಲ್ಲಿ ನಿವೇದಿತಾ ಗೌಡ ಗೆದ್ದು ಮಿಸೆಸ್ ಇಂಡಿಯಾ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಇದೀಗ ಮಿಸೆಸ್ ಇಂಡಿಯಾ ಆಗಿರುವ ನಟಿ ನಿವೇದಿತಾ ಅವರಿಗೆ ಸಾಲು ಸಾಲು ಸಿನಿಮಾಗಳ ಆಫ್ಹರ್ ಗಳು ಬರುತ್ತಿದೆಯಂತೆ. ಇನ್ನು ಕನ್ನಡದ ಜೊತೆಗೆ ತೆಲುಗು ಹಾಗೂ ತಮಿಳು ಸಿನಿಮಾಗಳ ಆಫ್ಹರ್ ಗಳು ಸಹ ಬರುತ್ತಿದ್ದು, ಉತ್ತಮ ಕಥೆ ಸಿಕ್ಕರೆ ಖಂಡಿತವಾಗಿಯೂ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಾರಂತೆ ನಿವೇದಿತಾ ಗೌಡ.
ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಆಗಿರುವ ನಟಿ ನಿವೇದಿತಾ ಗೌಡ, ಆಗಾಗ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ನಿವೇದಿತಾ ಗೌಡ ಹೊಸ ವೀಡಿಯೊ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಸಖತ್ ಹಾಟ್ ಆಗಿ ಮಿಂಚಿದ್ದಾರೆ. ಇನ್ನು ಈ ವಿಡಿಯೋ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.