ನಟ ಜಗ್ಗೇಶ್ ಅವರಿಗೆ ಮಗನೆ ಬೂಟಲ್ಲಿ ಹೊಡಿತಿನಿ ಅಂದಿದ್ದ ನಟ ಗೊತ್ತಾ? ಒಮ್ಮೆ ವಿಡಿಯೋ ನೋಡಿ…

ಸಿನಿಮಾ ಸುದ್ದಿ

ಕನ್ನಡ ಚಿತ್ರರಂಗದ ಉತ್ತಮ ನಟರ ಪೈಕಿ ನಟ ಜಗ್ಗೇಶ್ ಕೂಡ ಒಬ್ಬರು. ಕನ್ನಡ ಚಿತ್ರರಂಗದ ಸೊಗಡನ್ನು ಎಲ್ಲೆಡೆ ಸಾರುವಲ್ಲಿ ಇವರ ಕೈ ಕೂಡ ಇದೆ ಎಂದರೆ ಅದು ತಪ್ಪಾಗುವುದಿಲ್ಲ. ಇನ್ನು ತಮ್ಮ ಅದ್ಭುತ ನಟನೆ ಹಾಗೂ ಕಾಮಿಡಿ ಟೈಮಿಂಗ್ ಮೂಲಕ ನಟ ಜಗ್ಗೇಶ್ ಅದೆಷ್ಟೋ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

ಕೇವಲ ನಟನಾಗಿ ಮಾತ್ರವಲ್ಲದೆ ನಟ ಜಗ್ಗೇಶ್, ಒಬ್ಬ ನಿರ್ದೇಶಕನಾಗಿ, ನಿರ್ಮಾಪಕನಾಗಿ ಕೂಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಇನ್ನು ನಟನೆಯ ಜೊತೆಗೆ ನಟ ಜಗ್ಗೇಶ್ ರಾಜಕೀಯದಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಬಿಜೆಪಿ ಪಕ್ಷದ ಸದಸ್ಯನಾಗಿ ಇಂದಿಗೂ ಸಹ ನಟ ಜಗ್ಗೇಶ್ ಸೇವೆ ಸಲ್ಲಿಸುತ್ತಿದ್ದಾರೆ.

ಮೂಲತಃ ತುಮಕೂರಿನವರಾದ ನಟ ಜಗ್ಗೇಶ್ 1982 ರಲ್ಲಿ ಇಬ್ಬನಿ ಕರಗಿತು ಸಿನಿಮಾದಲ್ಲಿ ಮೊದಲ ಬಾರಿಗೆ ಅಭಿನಯಿಸುವ ಮೂಲಕ ತಮ್ಮ ಸಿನಿ ಪ್ರಯಾಣ ಶುರು ಮಾಡಿದರು. ಇನ್ನು ತಮ್ಮ ಮೊದಲ ಸಿನಿಮಾದ ಮೂಲಕವೇ ನಟ ಜಗ್ಗೇಶ್ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರು.

ಹೊಸ ನೀರು, ಸಂಗ್ರಾಮ, ಸಾಂಗ್ಲಿಯಾನ, ರಣರಂಗ, ಪೋಲಿ ಹುಡುಗ, ರಾಣಿ ಮಹಾರಾಣಿ, ಸುಂದರಕಾಂಡ, ಸಿಂಧೂರ ತಿಲಕ, ತರ್ಲೆ ನನ್ ಮಗ, ಮಟ, ಲೈಫು ಕೊಡ್ಲಾ, ವಾಸ್ತು ಪ್ರಕಾರ, ನೀರ್ ದೋಸೆ, ಕಾಳಿದಾಸ ಕನ್ನಡ ಮೇಷ್ಟ್ರು ನಂತಹ ಅದ್ಭುತ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು ನಟ ಜಗ್ಗೇಶ್ ಇದೀಗ ತೋತಾಪುರಿ ಎಂಬ ಹೊಸ ಹಾಸ್ಯ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ವಿಜಯ ಪ್ರಸಾದ್ ನಿರ್ದೇಶನ ಮಾಡಿದ್ದು, ಜಗ್ಗೇಶ್ ಹಾಗೂ ಅಧಿತಿ ಪ್ರಭುದೇವ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಜೊತೆಗೆ ಡಾಲಿ ಧನಂಜಯ, ಸುಮನ್ ರಂಗನಾಥ್, ದತ್ತಣ್ಣ ಸೇರಿದಂತೆ ಇನ್ನು ಹಲವಾರು ಕಲಾವಿದರು ಕಾಣಿಸಿಕೊಂಡಿದ್ದಾರೆ.

ಇನ್ನು ಈ ಸಿನಿಮಾದ ಪ್ರಚಾರ ಕೆಲಸದ ವೇಳೆ ಇದೀಗ ನಟ ಜಗ್ಗೇಶ್ ತಮ್ಮ ಜೀವನದ ಒಂದು ಕ್ಷಣವನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ. ನಾನು ಪೋಲಿ ಹುಡುಗ ಎನ್ನುವ ಸಿನಿಮಾದಲ್ಲಿ ನಟಿಸುವಾಗ ನನಗೆ ಪೆಟ್ರೋಲ್ ಗೆ ಎಂದು ಒಂದು ದಿನಕ್ಕೆ 20 ರೂಪಾಯಿ ಕೊಡುತ್ತಿದ್ದರು.

ನನ್ನ ಬಳಿ ಲೂನ ಗಾಡಿ ಇತ್ತು, ನಾನು ನನ್ನ ಹೆಂಡತಿಯನ್ನು ಆ ಗಾಡಿಯಲ್ಲಿ ಕರೆದುಕೊಂಡು ಅವಳನ್ನು ಇಂಜಿನಿಯರಿಂಗ್ ಕಾಲೇಜ್ ಗೆ ಕರೆದು ಹೋಗಿ ಬಿಡುತ್ತಿದ್ದೆ. ಅಲ್ಲಿ ಒಬ್ಬ ತಿಮ್ಮಯ್ಯ ಎಂದು ಇದ್ದ, ಆತ ನನಗೆ ನಿನಗೆ ಬೂಟ್ ನಲ್ಲಿ ಹೊಡಿತೀನಿ ಕಣೋ ಎನ್ನುತ್ತಿದ್ದ.

ಆ ಸಮಯದಲ್ಲಿ ಒಂದು ದಿನ ಶೂಟಿಂಗ್ ಹೋದಾಗ ನನ್ನ ಕೆಲವರು ಚೆನ್ನಾಗಿ ಹೊಡೆದು ಹಾಕಿದ್ದರು. ಆನಂತರ ಅದು ತುಂಬಾ ದೊಡ್ಡ ಗಲಾಟೆಯಾಗಿತ್ತು, ಆಗ ಅವರು ನಮ್ಮ ಮನೆಯಲ್ಲಿ ಒಂದು ಹಸು ಕಳ್ಳತನ ಆಗಿತ್ತು, ಅವನು ನೋಡೋದಕ್ಕೆ ಇವರಂತೆ ಇದ್ದ ಅದಕ್ಕೆ ಹೊಡೆದ್ವಿ ಎಂದಿದ್ದರು. ಈ ರೀತಿ ಸಾಕಷ್ಟು ಅವಮಾನಗಳನ್ನು ಸಹಿಸಿಕೊಂಡು ಇದೀಗ ಈ ಮಟ್ಟಕ್ಕೆ ಬಂದು ತಲುಪಿದ್ದೇವೆ ಎಂದು ತಮ್ಮ ಜೀವನದ ಕಹಿ ಘಟನೆಗಳನ್ನು ನೆನೆಡಿದ್ದಾರೆ.

Leave a Reply

Your email address will not be published. Required fields are marked *