ನಮಸ್ಕಾರ ವೀಕ್ಷಕರೇ ಬೆಂಗಳೂರಿನಲ್ಲಿ ಮೊನ್ನೆ ಭಾನುವಾರ ಸುರಿದ ಧಾರಾಕಾರ ಮಳೆಯಿಂದಾಗಿ ಅವಾಂತರಗಳೇ ನಡೆದಿದೆ. ಬಿಬಿಎಂಪಿ ಮತ್ತು ಸರ್ಕಾರದ ಕಾಮಗಾರಿಗಳೇ ಈ ಎಲ್ಲಾ ಅನಾಹುತಕ್ಕೆ ಕಾರಣ ಎಂದು ಇದೀಗ ನಟಿ ರಮ್ಯಾ ಟ್ವಿಟ್ ಮಾಡಿದ್ದಾರೆ.
ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಸರ್ಕಾರಕ್ಕೆ ನನ್ನ ಮತ ಎಂದು ನಟಿ ರಮ್ಯಾ ಟ್ವಿಟ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ನಟಿ ರಮ್ಯಾ ಸರ್ಕಾರ ಮತ್ತು ಬಿಬಿಎಂಪಿ ವಿರುದ್ದ ತಮ್ಮ ಆಕ್ರೋಶವನ್ನು ಸೋಷಿಯಲ್ ಮೀಡಿಯಾದ ಮುಖಾಂತರ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಮತ್ತು ಸರ್ಕಾರ ಅನುಮತಿ ನೀಡಿರುವ ಕೆಲವು ಕಾಮಗಾರಿಗಳು ಹಾಗೂ ಅಕ್ರಮ ಒತ್ತುವರಿ ಇಂದಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ. ಸ್ಮಾರ್ಟ್ ಸಿಟಿ ಬೆಂಗಳೂರಿನ ಚಿತ್ರಣವನ್ನೇ ಮಳೆರಾಯ ಬದಲಾಯಿಸಿ ಬಿಟ್ಟಿದ್ದಾನೆ.
ಸಿಲಿಕಾನ್ ಸಿಟಿಯಲ್ಲಿ 51 ವರ್ಷಗಳ ನಂತರ ಧಾಖಲೆ ಮಳೆಯಾಗಿದೆ. 709 ಮಿಲಿಮೀಟರ್ ಮಳೆಯಾಗಿದ್ದು, ಈ ಬಾರಿ ಇದುವರೆಗಿನ ಗರಿಷ್ಠ ಮಳೆಯಾಗಿದೆ ಎಂದು ಅವಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಹೊರವರ್ತುಲಾ ಪ್ರದೇಶದಲ್ಲಿರುವ, ಐಟಿ ಮತ್ತು ಬ್ಯಾಂಕಿಂಗ್ ಕಂಪನಿಯ ಸಂಘಟನೆಗಳಾದ ಹೊರವರ್ತುಲಾ ಕಂಪನಿಗಳ ಸಂಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ತಮ್ಮ ಸದಸ್ಯ ಕಂಪನಿಗಳು ಹಾಗೂ ಸಂಸ್ಥೆಗಳು ತೀವ್ರ ಮಳೆ ಮತ್ತು ಜಲಾವೃತ್ತದಿಂದಾಗಿ ಒಂದೇ ದಿನದಲ್ಲಿ 225 ಕೋಟಿ ನಷ್ಟ ಅನುಭವಿಸಿದೆ ಎಂದು ಹೇಳಿದ್ದರು.
ಇನ್ನು ನಟಿ ರಮ್ಯಾ ಕೂಡ ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಇನ್ನು ನಟಿ ಸಮಾಜದ ಯಾವುದೇ ಕೆಲಸಗಳಾಗಲಿ ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡುತ್ತಿರುತ್ತಾರೆ.
ಇನ್ನು ಇದೀಗ ಬೆಂಗಳೂರಿನಲ್ಲಿ ಬಾರಿ ಮಳೆಯಾಗಿದ್ದು, ಇನ್ನು ಮಳೆ ನೀರಿನ ಕಾರಣದಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಇನ್ನು ಇದೀಗ ಈ ಕುರಿತು ನಟಿ ರಮ್ಯಾ ಟ್ವಿಟ್ ಮಾಡಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.