ನಮಸ್ಕಾರ ವೀಕ್ಷಕರೇ, ಕೆಲವು ದಿನಗಳ ಹಿಂದೆ ವಿಡಿಯೋ ಒಂದು ವೈರಲ್ ಆಗಿತ್ತು. ಟರ್ಕಿಯ ಕ್ರೀಡಾಕಾರರೊಬ್ಬರು, ವರ್ಕ್ ಫ್ರಮ್ ಹೋಮ್ ಮಾಡುತ್ತಾ ಲೈವ್ ನಲ್ಲಿ ಇರಬೇಕಾದರೆ, ಬೆಕ್ಕೊಂದು ಅವರ ಬೆನ್ನೇರಿದಲ್ಲದೆ, ಅವರ ಹಿಂದೆಲೆಗೆ ಒಂದೇಟು ಹೊಡೆದಿದ್ದ ದೃಶ್ಯ ವೈರಲ್ ಆಗಿತ್ತು.
ಹೀಗೆ ನಿರೂಪಕರಿಗೆ, ಪತ್ರಕರ್ತರಿಗೆ ಸುದ್ದಿ ಮನೆಯ ಒಳಗೂ, ಹೊರಗೂ, ಲೈವ್ ನಲ್ಲಿ ಇರಬೇಕಾದರೆ ಅಚಾತುರ್ಯಗಳು ಘಟಿಸುವುದು ಉಂಟು. ಇನ್ನು ಕೆಲವರು ಟಿವಿ ಮೂಲಕ ಲಕ್ಷಾಂತರ ಜನರು ನೋಡಿತ್ತಿದ್ದಾರೆ ಎನ್ನುವ ಪ್ರಜ್ಞೆಯಿಂದ ಸಂದರ್ಭವನ್ನು ನಿಭಾಯಿಸುವ ಜಾಣ್ಮೆ ಕೆಲವರಿಗೆ ಇರುತ್ತದೆ.
ಆದರೆ ಕೆಲವರು ಆ ಸಂದರ್ಭವನ್ನು ನಿಭಾಯಿಸವಲ್ಲಿ ಅಸಮರ್ಥರಾಗಿರುತ್ತಾರೆ. ಇದೀಗ ವೈರಲ್ ಆದ ಈ ವಿಡಿಯೋದಲ್ಲಿ ಪತ್ರಕರ್ತೆ ಫ್ಹರಾನ್ ಆಜೀರ್ ಎಲ್ಲೂ ಅಭಾಸವಾಗದಂತೆ ನಿರ್ವಹಿಸಿದ ರೀತಿ ನೆಟ್ಟಿಗರಲ್ಲಿ ಅಚ್ಚರಿ ಉಂಟು ಮಾಡಿದೆ.
ನಿರೂಪಕಿ ಲೈವ್ ನಲ್ಲಿ ಇದ್ದಾಗ ಅಚಾನಕ್ಕಾಗಿ ನೊಣವನ್ನು ನುಂಗಿದ್ದರು. ಲೈವ್ ನಲ್ಲಿ ಇದ್ದ ಕಾರಣ ಆ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳದೆ ಮಾತು ಮುಂದುವರೆಸಿದ್ದಾರೆ. ಪಾಕಿಸ್ತಾನದಲ್ಲಿ ಮಳೆ ಹೇಗೆ ಹಾನಿ ಉಂಟು ಮಾಡುತ್ತಿದೆ ಎಂದು ಲೈವ್ ರಿಪೋರ್ಟ್ ಕೊಡುತ್ತಿರುವಾಗ ಈ ಘಟನೆ ನಡೆದಿದೆ.
ಸುದ್ದಿಯನ್ನು ಹೇಳುವ ಸಂದರ್ಭದಲ್ಲಿ ನೊಣವೊಂದು ಅವರ ಬಾಯಿಯನ್ನು ಹೊಕ್ಕಿತು. ಆದರೆ ಅದರಿಂದ ಕಂಗೆಡದ ಆಕೆ, ನೊಣವನ್ನು ನುಂಗಿಯೇ ಬಿಟ್ಟರು, ನಂತರ ಅವರು ತಮ್ಮ ಲೈವ್ ರಿಪೋರ್ಟ್ ಕೊಡುವುದನ್ನು ಮುಂದುವರೆಸಿದರು.
ನಂತರ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಈ ದಿನಗಳಲ್ಲಿ ನಮ್ಮೆಲ್ಲರಿಗೂ ನಗು ಬೇಕಿದೆ, ಅದಕ್ಕಾಗಿ ನಾನು ಈ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ. ನಾನು ಇಂದು ನೊಣವನ್ನು ನುಂಗಿದ್ದೇನೆ ಎಂದು ಅವರು ಟ್ವಿಟ್ ಮಾಡಿದ್ದಾರೆ.
ಈ ವಿಡಿಯೋ ನೋಡಿ ಎಲ್ಲರೂ ಒಂದು ಕ್ಷಣ ನಕ್ಕರೂ ಕೂಡ, ನೆಟ್ಟಿಗರು, ಸಹದ್ಯೋಗಿಗಳು, ಹಾಗೂ ಇನ್ನು ಹಲವಾರು ಜನರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅದನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಕ್ಕಾಗಿ ಅವರನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ.
ಇನ್ನು ಹಲವಾರು ಮಂದಿ ಈ ನಿರ್ಮಾಪಕಿ ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನಮ್ಮೆಲ್ಲರಿಗೂ ನಗು ಹಂಚುದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…