ಚಿರು ಕಳೆದುಕೊಂಡು ನೋವಿನಲ್ಲಿದ್ದ ಸರ್ಜಾ ಕುಟುಂಬದಲ್ಲಿ ಇದೀಗ ಸಂತಸ ಮನೆ ಮಾಡಿದೆ. ಇದಕ್ಕೆ ಮುಖ್ಯ ಕಾರಣ ಸರ್ಜಾ ಕುಟುಂಬದ ಎರಡನೇ ಸೊಸೆ, ಧೃವ ಸರ್ಜಾ ಅವರ ಪತ್ನಿ ಪ್ರೇರಣಾ. ಹೌದು ಇದೀಗ ಧೃವ ಸರ್ಜಾ ಪತ್ನಿ ಪ್ರೇರಣಾ ಗರ್ಭಿಣಿಯಾಗಿದ್ದಾರೆ.
ಧೃವ ಸರ್ಜಾ ಹಾಗೂ ಪತ್ನಿ ಪ್ರೇರಣಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿಯಾಗುವ ಪ್ರೇರಣಾ ಅವರಿಗೆ ಇದೀಗ ಸೀಮಂತ ಶಾಸ್ತ್ರ ಮಾಡಲಾಗಿದ್ದು, ಇದೀಗ ಈ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಚಿರು ಅಗಲಿಕೆಯ ನಂತರ ಸರ್ಜಾ ಕುಟುಂಬದಲ್ಲಿ ಸಾಕಷ್ಟು ನೋವು ಕಾಣಿಸಿಕೊಂಡಿತ್ತು. ನಂತರ ಚಿರು ಹಾಗೂ ಮೇಘನಾ ರಾಜ್ ಮಗ ರಾಯನ್ ನ ಆಗಮನದಿಂದ ಆ ನೋವನ್ನು ಎಲ್ಲರೂ ಮರೆತಿದ್ದರು. ಇದೀಗ ಮನೆಗೆ ಮತ್ತೊಂದು ಹೊಸ ಅಥಿತಿಯ ಆಗಮನ ಆಗುತ್ತಿದೆ.
ಚಿರಂಜೀವಿ ಸರ್ಜಾ ಅವರ ಅಗಲಿಕೆಯ ನೋವು ಎಂದಿಗೂ ಮಾಸದ ವಿಚಾರ. ಆದರೆ ಇದೀಗ ಪ್ರೇರಣಾ ಅವರು ಗರ್ಭಿಣಿಯಾಗುವ ವಿಚಾರ ಇದೀಗ ಈ ಕುಟುಂಬಕ್ಕೆ ಸಾಕಷ್ಟು ಖುಷಿ ನೀಡಿದೆ. ಧೃವ ಸರ್ಜಾ ಹಾಗೂ ಪ್ರೇರಣಾ ಅವರ ಮುದ್ದಾದ ಮಗುವಿನ ಆಗಮನದ ಕಾತುರದಲ್ಲಿದ್ದಾರೆ ಸರ್ಜಾ ಕುಟುಂಬ.
ಇದೀಗ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಕೇವಲ ಕುಟುಂಬದವರು, ಆಪ್ತರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಸದ್ಯ ಕಾರ್ಯಕ್ರಮದ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನು ಪ್ರೇರಣಾ ಅವರು ಹಸಿರು ಬಣ್ಣದ ಸೀರೆ ಧರಿಸಿದ್ದು, ಆ ಸೀರೆ ಮತ್ತು ಆಭರಣಗಳಲ್ಲಿ ಪ್ರೇರಣಾ ತುಂಬಾ ಮುದ್ದಾಗಿ ಕಾಣಿಸುತ್ತಿದ್ದು, ಇನ್ನು ಧೃವ ಸರ್ಜಾ ಕೂಡ ಬಿಳಿ ಕಚ್ಚೆ ಪಂಚೆಯಲ್ಲಿ ತುಂಬಾ ಟ್ರೇಡಿಷನಲ್ ಆಗಿ ಮಿಂಚಿದ್ದಾರೆ.
ಈ ಸೀಮಂತ ಕಾರ್ಯಕ್ರಮಕ್ಕೆ ಮೇಘನಾ ರಾಜ್ ಸೇರಿದಂತೆ ಪ್ರಥಮ್ ಹಾಗೂ ಇನ್ನು ಹಲವಾರು ಕಲಾವಿದರು ಭಾಗಿಯಾಗಿದ್ದರು. ಇನ್ನು ನೀವು ಸಹ ಈ ವಿಡಿಯೋ ನೋಡಿ, ಮತ್ತು ಧೃವ ಸರ್ಜಾ ಹಾಗೂ ಪ್ರೇರಣಾ ಆವರಿಗೆ ಶುಭಾಶಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..