ನಟಿ ಶ್ವೇತಾ ಶ್ರೀವಾತ್ಸವ್ ಕನ್ನಡ ಚಿತ್ರರಂಗದ ಉತ್ತಮ ನಟಿಯರ ಪೈಕಿ ಒಬ್ಬರು. ರಂಗಭೂಮಿ ಕಲಾವಿದೆಯಾಗಿರುವ ಇವರು ಮೊದ ಮೊದಲು ಧಾರವಾಹಿವಾಳಲ್ಲಿ ನಟಿಸುವ ಮೂಲಕ ತಮ್ಮ ಬಣ್ಣದ ಬದುಕನ್ನು ಶುರು ಮಾಡಿ ನಂತರ ಬೆಳ್ಳಿತೆರೆ ಮೇಲೆ ಮಿಂಚಲು ಆರಂಭಿಸಿದರು.
ನಟಿ ಶ್ವೇತಾ ಶ್ರೀವಾತ್ಸವ್ ಟಿ ಎನ್ ಸೀತಾರಾಮ್ ಅವರ ಜ್ವಾಲಾಮುಖಿ ಧಾರಾವಾಹಿಯಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು. ಇನ್ನು ನಟಿ ಈ ಧಾರಾವಾಹಿಯ ನಂತರ ಮನ್ವಂತರ ಧಾರಾವಾಹಿಯಲ್ಲಿ ಸಹ ಕಾಣಿಸಿಕೊಂಡು ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು.
ಇನ್ನು ಧಾರವಾಹಿಗಳಲ್ಲಿ ಮಿಂಚಿದ ನಂತರ ನಟಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. 2006 ರಲ್ಲಿ ತೆರೆಕಂಡ ಮುಖ ಮುಖಿ ಸಿನಿಮಾದಲ್ಲಿ ನಟಿ ಶ್ವೇತಾ ಶ್ರೀವಾಸ್ತವ್ ಕಾಣಿಸಿಕೊಂಡಿದ್ದರು. ಆನಂತರ ಆ ದಿನಗಳು ಸಿನಿಮಾದಲ್ಲಿ ಪುಟ್ಟ ಪೋಷಕ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದರು.
ನಂತರ ಸೈಬರ್ ಯುಗದೊಳ್ ನವ ಯುವ ಪ್ರೇಮ ಕಾವ್ಯಮ್ ಸಿನಿಮಾದಲ್ಲಿ ನಟಿ ಶ್ವೇತಾ ಶ್ರೀವಾತ್ಸವ್ ಅಭಿನಯಿಸಿದ್ದರು. ಈ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ನಟಿಗೆ ಪ್ರಶಸ್ತಿ ಕೂಡ ಲಭಿಸಿತ್ತು. ಇನ್ನು ನಟಿ ಶ್ವೇತಾ ನಟ ರಕ್ಷಿತ್ ಶೆಟ್ಟಿ ಜೊತೆಗೆ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
2013 ರಲ್ಲಿ ತೆರೆಕಂಡ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಸಿನಿಮಾದಲ್ಲಿನ ನಟಿ ಶ್ವೇತಾ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಸಿನಿಮಾದ ನಂತರ ನಟಿ ಶ್ವೇತಾ ತಿರುಗಿ ನೋಡಲೇ ಇಲ್ಲ. ನಂತರ ಒಂದಾದ ಮೇಲೆ ಒಂದು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
View this post on Instagram
ಇನ್ನು ನಟಿ ಶ್ವೇತಾ ಉದ್ಯಮಿ ಒಬ್ಬರಣ್ನಹ್ ಮದುವೆಯಾಗಿದ್ದು, ನಟಿಗೆ ಒಬ್ಬ ಮುದ್ದಾದ ಹೆಣ್ಣು ಮಗಳು ಸಹ ಇದ್ದಾಳೆ. ಇನ್ನು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ನಟಿ ಶ್ವೇತಾ ಆಗಾಗ ತಮ್ಮ ಹಾಗೂ ತಮ್ಮ ಮಗಳ ಫೋಟೋ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ನಟಿ ಹಾಟ್ ಆಗಿ ಡ್ರೆಸ್ ಮಾಡಿಕೊಂಡು ಒಂದು ರೀಲ್ಸ್ ಮಾಡಿದ್ದು, ಈ ರೀಲ್ಸ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ನಟಿಯ ಈ ರೀಲ್ಸ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಸದ್ಯ ನಟಿಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.