ನಿವೇದಿತಾ ಗೌಡ ಚಂದನ್ ಶೆಟ್ಟಿ ರೀಲ್ಸ್ ಅವಸ್ಥೆ ವಿಡಿಯೋ ನೋಡಿ ಆನಂದಿಸಿ!!

Entertainment

ನಿವೇದಿತಾ ಗೌಡಈ ಹೆಸರು ಕೇಳಿದ ತಕ್ಷಣ ಎಲ್ಲರಿಗೂ ನೆನಪಾಗುವುದು ಈಕೆಯ ಕನ್ನಡ ಮಾತನಾಡುವ ಶೈಲಿ. ತಮ್ಮ ಕನ್ನಡ ಮಾತನಾಡುವ ಶೈಲಿಯ ಮೂಲಕವೇ ನಟಿ ನಿವೇದಿತಾ ಗೌಡ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

ಬಿಗ್ ಬಾಸ್ ಸೀಸನ್ 5 ರಲ್ಲಿ ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟ ನಿವೇದಿತಾ ಗೌಡ ನಂತರ ದೊಡ್ಡ ಸೆಲೆಬ್ರೆಟಿಯಾಗಿ ಗುರುತಿಸಿಕೊಂಡಿದ್ದಾರೆ. ಬಿಗ್ ಮನೆಯಲ್ಲಿ ತಮ್ಮ ಆಟದ ಮೂಲಕ ಅದೆಷ್ಟೋ ಜನರ ಮನಸ್ಸಿನಲ್ಲಿ ಮನೆ ಮಾಡಿದ್ದಾರೆ ನಟಿ ನಿವೇದಿತಾ ಗೌಡ.

ಇನ್ನು ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಪರ್ಧಿಯಾಗಿರುವ ನಿವೇದಿತಾ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಇನ್ನು ಬಿಗ್ ಬಾಸ್ ಕಾರ್ಯಕ್ರಮದ ನಂತರ ನಟಿ ಬಿಗ್ ಬಾಸ್ ಸೀಸನ್6 ರಲ್ಲಿ ಸಹ ಗೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದರು.

ಬಿಗ್ ಬಾಸ್ ಮನೆಯಲ್ಲಿ ನಿವೇದಿತಾ ಹಾಗೂ ಚಂದನ್ ಶೆಟ್ಟಿ ಒಳ್ಳೆಯ ಸ್ನೇಹಿತರಾಗಿದ್ದರು. ಬಿಗ್ ಮನೆಯಿಂದ ಹೊರ ಬಂದ ನಂತರ ನಿವೇದಿತಾ ಹಾಗೂ ಚಂದನ್ ನಡುವೆ ಪ್ರೀತಿ ಉಂಟಾಗಿ ಇಬ್ಬರೂ ಮದುವೆಯಾದರು. ಇನ್ನು ಮದುವೆಯ ನಂತರ ಇಬ್ಬರೂ ಆಗಾಗ ತಮ್ಮ ಫೋಟೋಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನು ಸೋಸಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ನಟಿ ನಿವೇದಿತಾ ಗೌಡ. ಆಗಾಗ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡಿ ಅದನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ನಟಿಯ ರೀಲ್ಸ್ ಗೆ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್ಸ್ ಕೂಡ ಬರುತ್ತದೆ.

ಇನ್ನು ಆಗಾಗ ನಿವೇದಿತಾ ಗೌಡ ತಮ್ಮ ರೀಲ್ಸ್ ನಲ್ಲಿ ತಮ್ಮ ಅಮ್ಮ ಹಾಗೂ ತಮ್ಮ ಅತ್ತೆ ಮನೆಯವರನ್ನು ಸಹ ಸೇರಿಸಿಕೊಳ್ಳುತ್ತಿರುತ್ತಾರೆ. ಇನ್ನು ಆಗಾಗ ತಮ್ಮ ಮನೆಯವರ ಮೇಲೆ ಪ್ರಾಂಕ್ ಕೂಡ ಮಾಡುತ್ತಿರುತ್ತಾರೆ. ಇನ್ನು ಇದೀಗ ನಿವೇದಿತಾ ಚಂದನ್ ಹೊಸ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಈ ವೀಡಿಯೋದಲ್ಲಿ ನಿವೇದಿತಾ ಹಾಗೂ ಚಂದನ್ ಇಬ್ಬರೂ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದು, ಈ ವಿಡಿಯೋವನ್ನು ಹಾಸ್ಯಾಸ್ಪದವಾಗಿ ಮಾಡಿದ್ದಾರೆ. ಇನ್ನು ನಿವೇದಿತಾ ಗೌಡ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೀವು ನೋಡಿ ಆನಂದಿಸಿ…

Leave a Reply

Your email address will not be published. Required fields are marked *