ನಟಿ ರಮ್ಯಾಕೃಷ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಅಭಿನಯಿಸಿ ದೇಶದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಅವರು ಮೂಲತಃ ತಮಿಳು ಚಿತ್ರರಂಗಕ್ಕೆ ಸೇರಿದವರು.
ನಟ ರವಿಚಂದ್ರನ್, ದೇವರಾಜ್, ಸುನೀಲ್ ಸೇರಿದಂತೆ ಹಲವು ಕನ್ನಡದ ನಾಯಕರ ಜೊತೆ ಅಭಿನಯಿಸುವ ಮೂಲಕ ಕರುನಾಡಿನಲ್ಲಿ ಕೂಡ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಕೆಲವು ದಿನಗಳಿಂದ ನಟಿ ರಮ್ಯಾಕೃಷ್ಣ ಅವರ ಬಗ್ಗೆ ಒಂದು ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತಿದೆ.
ಹೌದು ನಟಿ ರಮ್ಯಾಕೃಷ್ಣ ತಮ್ಮ ಪತಿ ಕೃಷ್ಣವಂಶಿ ಜೊತೆಗೆ ಜೀವನ ನಡೆಸುತ್ತಿಲ್ಲ, ಈ ಇಬ್ಬರೂ ವಿಚ್ಛೇಧನ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿತ್ತು. ಇದರ ನಡುವೆ ನಟಿ ರಮ್ಯಾ ಕೃಷ್ಣ ಒಂದು ಕಾರ್ಯಕ್ರಮದ ವೇದಿಕೆಯ ಮೇಲೆ ತನಗೆ ಸ್ಟಾರ್ ನಟನ ಮೇಲೆ ಕ್ರಶ್ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಇದೀಗ ಈ ಹೇಳಿಕೆ ಮಾಧ್ಯಮಗಳಲ್ಲಿ, ಹಾಗೂ ಸೋಷಿಯಲ್ ಮಿಡಿಯಾದಲ್ಲಿ ಬಹಳ ವಿಸ್ತಾರವಾಗಿ ಹಬ್ಬಿದೆ. ತಮಿಳಿನ ಬಿಗ್ ಬಾಸ್ ಶೋ ಒಂದರಲ್ಲಿ ನಟಿ ರಮ್ಯಾಕೃಷ್ಣ ಭಾಗಿಯಾಗಿದ್ದರು, ಈ ವೇಳೆ ನಟಿ ತಮ್ಮ ಕ್ರಶ್ ಯಾರು ಎಂಬುದನ್ನು ಬಹಿರಂಗವಾಗಿ ಮಾತನಾಡಿದ್ದಾರೆ.
ಬಿಗ್ ಬಾಸ್ ಜೋಡಿ ಎನ್ನುವ ಕಾರ್ಯಕ್ರಮಕ್ಕೆ ನಟಿ ರಮ್ಯಾಕೃಷ್ಣ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಈ ಕಾರ್ಯಕ್ರಮಕ್ಕೆ ನಟ ರಣಬೀರ್ ಕಪೂರ್, ಹಾಗೂ ಅಕ್ಕಿನೇನಿ ನಾಗರ್ಜುನ ಇಬ್ಬರೂ ಗೆಸ್ಟ್ ಆಗಿ ಬಂದಿದ್ದರು.
ಈ ವೇಳೆ ಕಾರ್ಯಕ್ರಮದ ನಿರೂಪಕಿ ನಾಗಾರ್ಜುನ ಅವರಿಗೆ ನಿಮ್ಮ ಕ್ರಶ್ ಯಾರು ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ನಟಿ ರಮ್ಯಾಕೃಷ್ಣ ಉತ್ತರಿಸಿದ್ದು, ನಾಗರ್ಜುನ ಅವರಿಗೆ ಯಾರ ಮೇಲೆ ಕ್ರಶ್ ಆದರೂ ಕೂಡ ಅವರೇ ನನ್ನ ಕ್ರಶ್ ಎಂದು ಹೇಳಿದ್ದಾರೆ. ನಾಗಾರ್ಜುನ ಎಂದರೆ ನನಗೆ ತುಂಬಾ ಇಷ್ಟ ಎಂದಿದ್ದಾರೆ ನಟಿ ರಮ್ಯಾಕೃಷ್ಣ.
ನಾಗರ್ಜುನ ಮತ್ತು ರಮ್ಯಾಕೃಷ್ಣ ಇಬ್ಬರೂ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದು, ನಟ ನಾಗಾರ್ಜುನ ಮೇಲೆ ಹಲವು ನಟಿಯರಿಗೆ ಕ್ರಶ್ ಇದ್ದು, ಇದೀಗ ಇದೆ ಸಾಲಿಗೆ ನಟಿ ರಮ್ಯಾ ಕೃಷ್ಣ ಕೂಡ ಸೇರಿಕೊಂಡಿದ್ದಾರೆ. ಸದ್ಯ ಈ ಸುದ್ದಿ ವಿದವಿದವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.