ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ 80 ಹಾಗೂ 90 ದಶಕದಲ್ಲಿ ಅದೆಷ್ಟೋ ಜನರ ಮನದಲ್ಲಿ ಮನೆ ಮಾಡಿದ್ದ ನಟಿ ಲೀಲಾವತಿ. ನಟಿ ಲೀಲಾವತಿ ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಸಹ ಅಭಿನಯಿಸಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಇನ್ನು ನಟಿ ಲೀಲಾವತಿ ಅವರು ತಮ್ಮ ಸಿನಿ ಜೀವನದಲ್ಲಿ ಸುಮಾರು 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಅದರಲ್ಲಿ 400 ಕ್ಕೂ ಹೆಚ್ಚು ಸಿನಿಮಾಗಳು ಕನ್ನಡದಲ್ಲಿಯೇ ಮಾಡಿದ್ದಾರೆ. ಇನ್ನು ತಮ್ಮ ಅಭಿನಯಕ್ಕೆ ಅದೆಷ್ಟೋ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ನಟಿ ಲೀಲಾವತಿ.
ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ ನಾಗ್, ಅಂಬರೀಷ್ ಸೇರಿದಂತೆ ಇನ್ನು ಹಲವಾರು ಸ್ಟಾರ್ ನಟರೊಂದಿಗೆ ನಟಿ ಲೀಲಾವತಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ನಟಿ ಕೆಲವು ವರ್ಷಗಳಿಂದ ಕೆಲಸ ಇಲ್ಲದೆ ಸಿನಿಮಾರಂಗದಿಂದ ದೂರ ಉಳಿದು ಬಿಟ್ಟಿದ್ದಾರೆ.
ಇನ್ನು ನಟಿ ಲೀಲಾವತಿ ಜೊತೆಗೆ ಅವರ ಮಗ ವಿನೋದ್ ರಾಜ್ ಕೂಡ ಸಿನಿಮಾರಂಗದಿಂದ ಸಂಪೂರ್ಣ ದೂರ ಉಳಿದು ಬಿಟ್ಟಿರುವ ವಿಷಯ ನಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಇನ್ನು ತಮ್ಮ ತಾಯಿ ಲೀಲಾವತಿ ಜೊತೆಗೆ ವಿನೋದ್ ರಾಜ್ ಕೂಡ ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ.
ಇನ್ನು ಜೀವನದಲ್ಲಿ ಸಾಕಷ್ಟು ನೋವು ಮತ್ತು ಅವಮಾನಗಳನ್ನು ಅನುಭವಿಸಿದ್ದರೂ ಕೂಡ ಅದು ಯಾವುದಕ್ಕೂ ಸಹ ಕುಗ್ಗದೆ ಲೀಲಾವತಿ ಮತ್ತು ವಿನೋದ್ ರಾಜ್ ತಮ್ಮ ಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡು, ತಮ್ಮ ಕೈಲಾದಷ್ಟೂ ಜನರಿಗೆ ಸಹಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಇನ್ನು ನಟಿ ಲೀಲಾವತಿ ಅವರಿಗೆ ತುಂಬಾ ವಯಸ್ಸಾಗಿದ್ದು, ಅವರ ಆರೋಗ್ಯ ಆಗಾಗ ಅದಗೆಟ್ಟುತ್ತಿರುತ್ತದೆ. ಇನ್ನು ಚಿತ್ರರಂಗದ ಅನೇಕ ಕಲಾವಿದರು ಆಗಾಗ ಲೀಲಾವತಿ ಅವರನ್ನು ನೋಡಿಕೊಂಡು ಬರಲು ಹೋಗುತ್ತಿರುತ್ತಾರೆ.
ಇನ್ನು ಇದೀಗ ಲೀಲಾವತಿ ಅವರ ಆರೋಗ್ಯ ಇನಷ್ಟು ಅದಗೆಟ್ಟಿದ್ದು, ಅವರನ್ನು ನೋಡಿ ವಿನೋದ್ ರಾಜ್ ಕೂಡ ಕುಗ್ಗಿ ಹೋಗಿದ್ದಾರೆ. ಇನ್ನು ಇದೀಗ ವಿನೋದ್ ರಾಜ್ ಅವರಿಗೆ ಚಿತ್ರರಂಗದವರು ನಾವಿದ್ದೇವೆ ಎಂದು ಧೈರ್ಯ ಹೇಳಿದ್ದಾರೆ. ಇನ್ನು ಆ ಹಿರಿಯ ಜೀವ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನೀವು ಸಹ ಆ ದೇವರಲ್ಲಿ ಕೇಳಿಕೊಳ್ಳಿ.