ಸರ್ಜಾ ಕುಟುಂಬಕ್ಕೆ ಇತ್ತೀಚೆಗೆ ಅದು ಯಾರ ಕಣ್ಣು ಬಿತ್ತೋ ಏನೋ, ಖುಷಿಯಾಗಿದ್ದ ಸರ್ಜಾ ಕುತುಂಬಕ್ಕೆ ಚಿರು ಸಾವು ಬಿರುಗಾಳಿಯಂತೆ ಬಂದು ಎಲ್ಲವನ್ನು ನಾಶ ಮಾಡಿಬಿಟ್ಟಿತ್ತು. ಚಿರು ಸಾವಿನ ನಂತರ ಚಿರು ಅಜ್ಜಿಯ ಸಾವು ಕೂಡ ಯಾರು ಊಹಿಸದಂತೆ ನಡೆದು ಹೋಯಿತು.
ಇನ್ನು ಚಿರುವನ್ನು ಕಳೆದುಕೊಂಡು ದುಃಖದಲ್ಲಿದ್ದ ಸರ್ಜಾ ಕುಟುಂಬಕ್ಕೆ ಚಿರು ಪುತ್ರ ರಾಯನ್ ಬಂದು ಎಲ್ಲರ ಮುಖದಲ್ಲಿ ಸಂತಸ ತುಂಬಿದನು. ಇನ್ನು ಚಿರುವನ್ನು ಕಳೆದುಕೊಂಡ ನಂತರ ನಟಿ ಮೇಘನಾ ರಾಜ್ ಸಿನಿಮಾರಂಗದಿಂದ ದೂರ ಉಳಿದು, ತನ್ನ ಮಗ ರಾಯನ್ ನ ಲಾಲನೆ ಪಾಲನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಇನ್ನು ಇತ್ತೀಚೆಗೆ ಕಲರ್ಸ್ ಕನ್ನಡದ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಬರುವ ಮೂಲಕ ನಟಿ ಮತ್ತೆ ಬಣ್ಣದ ಲೋಕಕ್ಕೆ ಕಮ್ ಬ್ಯಾಕ್ ಮಾಡಿದರು. ಇದೀಗ ನಟಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು, ಸಿನಿಮಾ ಕೆಲಸಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ಇನ್ನು ಸರ್ಜಾ ಕುಟುಂಬದಲ್ಲಿ ಮತ್ತೊಂದು ಸಂತಸ ಮನೆ ಮಾಡಿದೆ. ಚಿರು ಕಳೆದುಕೊಂಡು ನೋವಿನಲ್ಲಿದ್ದ ಸರ್ಜಾ ಕುಟುಂಬದಲ್ಲಿ ಇದೀಗ ಸಂತಸ ಮನೆ ಮಾಡಿದೆ. ಇದಕ್ಕೆ ಮುಖ್ಯ ಕಾರಣ ಸರ್ಜಾ ಕುಟುಂಬದ ಎರಡನೇ ಸೊಸೆ, ಧೃವ ಸರ್ಜಾ ಅವರ ಪತ್ನಿ ಪ್ರೇರಣಾ. ಹೌದು ಇದೀಗ ಧೃವ ಸರ್ಜಾ ಪತ್ನಿ ಪ್ರೇರಣಾ ಗರ್ಭಿಣಿಯಾಗಿದ್ದಾರೆ.
ಧೃವ ಸರ್ಜಾ ಹಾಗೂ ಪತ್ನಿ ಪ್ರೇರಣಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿಯಾಗುವ ಪ್ರೇರಣಾ ಅವರಿಗೆ ಇದೀಗ ಸೀಮಂತ ಶಾಸ್ತ್ರ ಮಾಡಲಾಗಿದ್ದು, ಇದೀಗ ಈ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಧೃವ ಸರ್ಜಾ ಪತ್ನಿ ಪ್ರೇರಣಾ ಅವರಿಗೆ ಈಗಾಗಲೇ 8 ತಿಂಗಳು ತುಂಬಿದೆ. ಇನ್ನು ಇದೀಗ ಪ್ರೇರಣಾ ಅವರ ಸೀಮಂತ ಶಾಸ್ತ್ರವನ್ನು ಕುಟುಂಬದವರೆಲ್ಲಾ ಸೇರಿ ನೆರವೇರಿಸಿದ್ದು, ಇದೆ ತಿಂಗಳು ಧೃವ ಸರ್ಜಾ ಮನೆಗೆ ಒಂದು ಮುದ್ದಾದ ಮಗ ಅಥವಾ ಮಗಳು ಬರುವುದು ಖಂಡಿತ. ಇನ್ನು ಈ ನಿರೀಕ್ಷೆಯಲ್ಲಿ ಇಡೀ ಕುಟುಂಬ ಎದುರು ನೋಡುತ್ತಿದೆ.
ಇನ್ನು ಸೀಮಂತ ಶಾಸ್ತ್ರವನ್ನು ಬೆಂಗಳೂರಿನ ಕಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ಮಾಡಿದು, ಪ್ರೇರಣಾ ಅವರನ್ನು ಧೃವ ಸರ್ಜಾ ಕೈ ಹಿಡಿದು ಕರೆತಂದು ಆಸನದ ಮೇಲೆ ಕೂರಿಸುವ ವೀಡಿಯೋ ಒಂದು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಈ ವೀಡಿಯೋ ನೋಡಿ ಈ ಜೋಡಿಗೆ ಯಾರ ದೃಷ್ಟಿ ಬೀಳದೆ ಇರಲಿ ಎಂದು ಹಾರೈಸುತ್ತಿದ್ದಾರೆ.