ಕೈವ ಸಿನಿಮಾವನ್ನು ಅಪ್ಪು ಅವರಿಗೆ ಅರ್ಪಿಸಿದ ನಟ ಧನವೀರ್… ನೀವೇ ನೋಡಿ..

ಸ್ಯಾಂಡಲವುಡ್

ಕನ್ನಡ ಚಿತ್ರರಂಗದ ಉತ್ತಮ ನಟರ ಪೈಕಿ ನಟ ಧನವೀರ್ ಗೌಡ ಕೂಡ ಒಬ್ಬರು. ತಮ್ಮ ಅದ್ಭುತ ಅಭಿನಯ ಹಾಗೂ ಹಾಟ್ನೆಸ್ ನ ಮೂಲಕ ನಟ ಧನವೀರ್ ಸಾಕಷ್ಟು ಮಹಿಳಾ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅಲ್ಲದೆ ಮಾಡಿರುವ ಕೆಲವೇ ಕೆಲವು ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಅಪ್ಪಟ ಡಿ ಬಾಸ್ ಅಭಿಮಾನಿಯಾಗಿರುವ ನಟ ಧನವೀರ್ ತಮ್ಮ ನೆಚ್ಚಿನ ನಟನ ಆದಿಯಲ್ಲೇ ನಡೆಯುತ್ತಿದ್ದಾರೆ. ಚಿತ್ರರಂಗದಲ್ಲಿ ಯಾವುದೇ ಬ್ಯಾಗ್ ಗ್ರೌಂಡ್ ಇಲ್ಲದೆ ತಮ್ಮ ಸ್ವಂತ ಪರಿಶ್ರಮದಿಂದ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟರ ಸಾಲಿಗೆ ಇದೀಗ ಧನವೀರ್ ಕೂಡ ಸೇರಿಕೊಂಡಿದ್ದಾರೆ.

ಇನ್ನು 2019 ರಲ್ಲಿ ತೆರೆಕಂಡ ಸಿಂಪಲ್ ಸುನಿ ನಿರ್ದೇಶನದ ಬಜಾರ್ ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯಿಸುವ ಮೂಲಕ ನಟ ಧನವೀರ್ ತಮ್ಮ ಸಿನಿ ಜರ್ನಿ ಶುರು ಮಾಡಿದರು. ತಮ್ಮ ಮೊದಲ ಸಿನಿಮಾದ ಮೂಲಕವೇ ನಟ ಧನವೀರ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು.

ನಂತರ ಬಂಪರ್ ಎನ್ನುವ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡದ ಜನತೆಗೆ ಇನ್ನಷ್ಟು ಹತ್ತಿರವಾದರು ನಟ ಧನವೀರ್. ಇನ್ನು ಇತ್ತೀಚೆಗೆ ತೆರೆಕಂಡ ಅವರ ಬೈಟು ಲವ್ ಸಿನಿಮಾ ಕೂಡ ಒಳ್ಳೆಯ ಸಕ್ಸಸ್ ಕಂಡಿತು. ಇನ್ನು ನಟ ಧನವೀರ್ ಇದೀಗ ಮತ್ತೊಂದು ಸಿನಿಮಾದ ಮೂಲಕ ಅವರ ಅಭಿಮಾನಿಗಳನ್ನು ರಂಜಿಸಲು ಮುಂದಾಗಿದ್ದಾರೆ.

ಕನ್ನಡದ ಉತ್ತಮ ನಿರ್ದೇಶಕರಲ್ಲಿ ಒಬ್ಬರಾದ ಜಯತೀರ್ಥ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕೈವ ಸಿನಿಮಾದಲ್ಲಿ ನಟ ಧನವೀರ್ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಈ ಸಿನಿಮಾದ ಮುಹೂರ್ತ ಮುಗಿದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಕೂಡ ಆರಂಭವಾಗಲಿದೆ.

ಇನ್ನು ಇದೀಗ ಸಿನಿಮಾದ ಬಗ್ಗೆ ಮಾತನಾಡಿದ ನಟ ಧನವೀರ್ ಈ ಸಿನಿಮಾದಲ್ಲಿ ಅಪ್ಪು ಹಾಗೂ ಡಾ ರಾಜ್ ಕುಮಾರ್ ಅವರಿಗೂ ಈ ಸಿನಿಮಾವನ್ನು ನಾವು ಅರ್ಪಣೆ ಮಾಡಿದ್ದೇವೆ ಎಂದಿದ್ದಾರೆ. ಈ ಸಿನಿಮಾದಲ್ಲಿ ಆ ಇಬ್ಬರೂ ಕಲಾವಿದರಿಗೂ ಒಂದು ಸಣ್ಣ ಅರ್ಪಣೆ ಮಾಡಿದ್ದೇವೆ.

ಆದರೆ ಅದು ಏನು ಎಂದು ನಾನು ಈಗಲೇ ರಿವೀಲ್ ಮಾಡಲು ಬಯಸುವುದಿಲ್ಲ ಎಂದಿದ್ದಾರೆ. ಇನ್ನು ಈಗಾಗಲೇ ಕೈವ ಸಿನಿಮಾದ ಶೂಟಿಂಗ್ ಸಹ ಚಿತ್ರತಂಡ ಮುಗಿಸಿದ್ದು, ಇನ್ನು ಕೇವಲ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮಾತ್ರ ಬಾಕಿಯಿದೆ. ಇನ್ನು ಕೆಲವೇ ದಿನಗಳಲ್ಲಿ ಧನವೀರ್ ಅವರ ಮತ್ತೊಂದು ಸಿನಿಮಾ ಸೆಟ್ಟೇರಲಿದ್ದು, ಅವರ ಅಭಿಮಾನಿಗಳು ಈ ಸಿನಿಮಾಗಾಗಿ ಕಾತುರರಾಗಿದ್ದಾರೆ.

Leave a Reply

Your email address will not be published. Required fields are marked *