ಈಗಿನ ಕಾಲದಲ್ಲಿ ಮದುವೆ ಒಂದು ತಮಾಷೆಯಾಗಿಬಿಟ್ಟಿದೆ. ಹೌದು ಮದುವೆಯಾಗುವುದು ವಿಚ್ಛೇಧನ ಪಡೆದುಕೊಳ್ಳುವುದು ಮತ್ತೆ ಮದುವೆಯಾಗುವುದು ಈ ರೀತಿಯ ವಿಷಯಗಳ ಬಗ್ಗೆ ನಾವು ಯಾವಾಗಲೂ ಓದುತ್ತಲೆ ಇರುತ್ತೇವೆ. ಇನ್ನು ಸಿನಿಮಾರಂಗದಲ್ಲಿ ಎರಡು ಮೂರು ಮದುವೆಗಳು ಕಾಮನ್ ಆಗಿ ಬಿಟ್ಟಿದೆ.
ಇದೀಗ ಇದೆ ವಿಷಯಕ್ಕೆ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದಾರೆ. ಟಾಲಿವುಡ್ ನ ಖ್ಯಾತ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್. ಇನ್ನು ಕಳೆದ ಕೆಲವು ದಿನಗಳಿಂದ ಎಲ್ಲಿ ನೋಡಿದರೂ ಇವರದ್ದೇ ವಿಷಯ ಹರಿದಾಡುತ್ತಿದೆ.ಟಾಲಿವುಡ್ ನಟ ನರೇಶ್ ಈ ಹಿಂದೆ ಕೂಡ ಮೂರು ಮದುವೆಯಾಗಿದ್ದಾರೆ, ಹಾಗೂ ನಟಿ ಪವಿತ್ರಾ ಲೋಕೇಶ್ ಕೂಡ ಈ ಹಿಂದೆ ಎರಡು ಮದುವೆಯಾಗಿದ್ದು,
ಇದೀಗ ಈ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಮಾತುಗಳು ಕೆಲವು ದಿನಗಳ ಹಿಂದೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇನ್ನು ಈ ಇಬ್ಬರೂ ಮೈಸೂರಿನ ಕಾಸಗಿ ಹೋಟೆಲ್ ಒಂದರಲ್ಲಿ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ಅವರಿಗೆ ಸಿಕ್ಕಿ ಬಿದ್ದಿದ್ದರು. ಇನ್ನು ಇವರನ್ನು ಹೀಗೆ ನೋಡಿ ರಮ್ಯಾ ಅವರು ತಮ್ಮ ಚಪ್ಪಲಿಗಳನ್ನು ಸಹ ಇವರಿಬ್ಬರ ಮೇಲೆ ಎಸೆದು ರಂಪಾಟ ಮಾಡಿದ್ದರು.
ಇನ್ನು ಈ ವಿಡಿಯೋ ಸೋಸಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.ಮೈಸೂರಿನ ಹೋಟೆಲ್ ನಲ್ಲಿ ಸಿಕ್ಕಿ ಬಿದ್ದ ನಂತರ, ಇನ್ನು ರಮ್ಯಾ ಅವರ ಈ ನಡುವಳಿಕೆಯಿಂದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇನ್ನು ಎಂದು ಹೀಗೆ ಕಾಣಿಸಿಕೊಂಡಿಲ್ಲ. ಹಾಗೆ ಇನ್ನು ಎಂದು ಹೀಗೆ ಒಟ್ಟಾಗಿ ಕಾಣಿಸಿಕೊಳ್ಳಬಾರದು ಎಂದು ನಿರ್ಧಾರ ಮಾಡಿದ್ದಾರಂತೆ.
ಇನ್ನು ಇಷ್ಟೆಲ್ಲಾ ರಂಪಾಟ ಮಾಡಿದ ರಮ್ಯಾ, ಇದೀಗ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಮತ್ತೆ ನರೇಶ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಮಾತುಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹೌದು ನರೇಶ್ ಮನೆಗೆ ಎಂಟ್ರಿ ಕೊಟ್ಟಿರುವ ರಮ್ಯಾ ಏನು ಮಾಡಿದ್ದೇನು ತಿಳಿಸುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..
ಮೈಸೂರಿನಲ್ಲಿ ನಡೆದ ರಂಪಾಠದ ಬಳಿಕ ರಮ್ಯಾ ಅವರು ಕೂಡ ಯಾವುದೇ ಮಾಧ್ಯಮಗಳ ಬಳಿ ಏನು ಮಾತನಾಡದೆ ಸುಮ್ಮನಿದ್ದರು. ಇದೀಗ ರಮ್ಯಾ ತಮ್ಮ ಪತಿ ನರೇಶ್ ಮನೆಗೆ ಎಂಟ್ರಿ ಕೊಟ್ಟಿದ್ದಾರಂತೆ, ಅಲ್ಲದೆ ನರೇಶ್ ಕೂಡ ಈ ಬಾರಿ ಏನು ಮಾತನಾಡದೆ ರಮ್ಯಾ ಅವರನ್ನು ಮನೆಗೆ ಬರ ಮಾಡಿಕೊಂಡಿದ್ದಾರಂತೆ.
ಇನ್ನು ಕೆಲವೇ ದಿನಗಳಲ್ಲಿ ರಮ್ಯಾ ಅವರು ನರೇಶ್ ವಿರುದ್ಧ ಕೇಸ್ ಧಾಕಲಿಸಿ, ಈ ಬಗ್ಗೆ ಸಂಪೂರ್ಣವಾಗಿ ಮಧ್ಯಮಗಳ ಮುಂದೆ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ ಎನ್ನುವ ಮಾಹಿತಿ ಮೂಲಗಳ ಪ್ರಕಾರ ಸಿಕ್ಕಿದೆ.ಇನ್ನು ರಮ್ಯಾ ಅವರು ಮೊದಲಿನಿಂದಲೂ ನನಗೆ ಡೈವೋರ್ಸ್ ಬೇಡ, ನನ್ನ ಪತಿ ನನಗೆ ಡೈವೋರ್ಸ್ ಕೊಡಬೇಕು ಎಂದು ಕೊಂಡಿದ್ದಾರೆ ಆದರೆ ನನಗೆ ಡೈವೋರ್ಸ್ ಬೇಡ ನನ್ನ ಮಗನಿಗೆ ತಂದೆ ಬೇಕು.
ನನಗೆ ಅವರ ಯಾವ ಆಸ್ತಿ ಬೇಡ ನನ್ನ ಮಗನನ್ನು ನೋಡಿಕೊಳ್ಳಲು ಜೀವನಂಶಬೇಕು ಎಂದು ಈ ಹಿಂದೆ ಕೂಡ ಸಾಕಷ್ಟು ಬಾರಿ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದರು. ಇನ್ನು ಇದೀಗ ಮತ್ತೆ ನರೇಶ್ ಮನೆಗೆ ಎಂಟ್ರಿ ಕೊಟ್ಟಿರುವ ರಮ್ಯಾ ರಘುಪತಿ ಏನು ಮಾಡುತ್ತಾರೆ ಎಂದು ಕಾದು ನೋಡಬೇಕು. ಹಾಗೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಸುಮ್ಮನಿರುವ ಪವಿತ್ರಾ ಲೋಕೇಶ್ ಅವರ ಗತಿಯೇನು ಎನ್ನುವುದು ಈಗಿನ ದೊಡ್ಡ ಪ್ರಶ್ನೆಯಾಗಿಬಿಟ್ಟಿದೆ.