ಶೂ,ಟಿಂಗ್ ನಲ್ಲಿ ಅಮಿತಾಬ್ ಜೊತೆಗೆ ಕಿರಿಕ್ ಮಾಡಿಕೊಂಡ ರಶ್ಮಿಕಾ ಮಂದಣ್ಣ…

ಸ್ಯಾಂಡಲವುಡ್

ರಶ್ಮಿಕಾ ಮಂದಣ್ಣ ಈಕೆ ಇದೀಗ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡದ ಮೂಲಕ ಸಿನಿ ಜರ್ನಿ ಶುರು ಮಾಡಿ ಇದೀಗ ಬಾಲಿವುಡ್ ವರೆಗೂ ತಲುಪಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಇನ್ನು ಸದಾ ಒಂದೆಲ್ಲಾ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತಿರುವ ನಟಿ ರಶ್ಮಿಕಾ ಮಂದಣ್ಣ, ನೆಟ್ಟಿಗರ ಹಾಟ್ ಟಾಪಿಕ್ ಎಂದರೆ ತಪ್ಪಾಗಲಾರದು.

ನಟಿ ರಶ್ಮಿಕಾ ಏನೇ ಮಾಡಲಿ ಅವರನ್ನು ಕೆಲವು ಟ್ರೋಲ್ ಪೇಜ್ಗಳು ಸದಾ ಟ್ರೋಲ್ ಮಾಡುತ್ತಿರುತ್ತಾರೆ. ಇನ್ನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಟಿ ರಶ್ಮಿಕಾ ಇದೀಗ ದಕ್ಷಿಣ ಭಾರತ ಸಿನಿಮಾರಂಗದ ನಂಬರ್ ಒನ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.ಎಲ್ಲರಿಗೂ ಗೊತ್ತಿರುವಹಾಗೆ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡಿದ ನಟಿ ರಶ್ಮಿಕಾ ಇದೀಗ ಭಾರತದ ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ.

ಭಾರತದ ಬಹುತೇಕ ಎಲ್ಲಾ ಸಿನಿಮಾ ಇಂಡಸ್ಟ್ರಿಯಲ್ಲಿ ಕೂಡ ನಟಿ ರಶ್ಮಿಕಾ ಖ್ಯಾತಿ ಗಳಿಸಿದ್ದಾರೆ. ತೆಲುಗಿನ ಪುಷ್ಪ ಸಿನಿಮಾದ ಮೂಲಕ ಇದೀಗ ನಟಿ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡಿದ್ದು ಮಾತ್ರವಲ್ಲದೆ, ಇದೀಗ ತಮ್ಮ ಮುಂದಿನ ಸಿನಿಮಾದ ಪ್ರತೀಕ್ಷೆಯಲ್ಲಿದ್ದಾರೆ.

ಇನ್ನು ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ಇದೀಗ ಬಾಲಿವುಡ್ ಗೂ ಸಹ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್ ನ ಖ್ಯಾತ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಜೊತೆಗೂ ಸಹ ನಟಿ ರಶ್ಮಿಕಾ ಮಂದಣ್ಣ ಸ್ಕ್ರೀನ್ ಶೇರ್ ಮಾಡಿದ್ದಾರೆ. ಹೌದು ಅಮಿತಾಬ್ ಬಚ್ಚನ್ ಅವರ ಜೊತೆಗೆ ಅವರ ಮಗಳ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ಹೌದು ನಟಿ ರಶ್ಮಿಕಾ ಗುಡ್ ಬಾಯ್ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅವರ ಜೊತೆಗೆ ಅವರ ಮಗಳ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಈ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಳಿದ್ದು, ರಶ್ಮಿಕಾ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಸಿನಿಮಾಗಾಗಿ ಬಹಳ ಕಾತುರರಾಗಿದ್ದಾರೆ.

ಇನ್ನು ಗುಡ್ ಬಾಯ್ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ, ಈ ಸಿನಿಮಾದ ವೇಳೆ ಅಮಿತಾಬ್ ಬಚ್ಚನ್ ಅವರ ಜಗಳ ಆಡಿಕೊಂಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಸಿನಿಮಾದ ಟ್ರೇಲರ್ ನಲ್ಲಿ ಕೂಡ ಅಪ್ಪ ಮಗಳ ಜಗಳದ ದೃಶ್ಯವನ್ನು ನೀವು ನೋಡಬಹುದು ಆದರೆ ನಿಜವಾಗಿಯೂ ರಶ್ಮಿಕಾ ಅಮಿತಾಬ್ ಬಚ್ಚನ್ ಜೊತೆ ಜಗಳವಾಡಿದ್ದರಂತೆ,

ಇನ್ನು ಈ ಜಗಳಕ್ಕೆ ಕಾರಣವನ್ನು ಕೂಡ ನಟಿ ತಿಳಿಸಿದ್ದಾರೆ. ಈ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದರೆ ಏನಿದು ಸುದ್ದಿ ತಿಳಿಸುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..ಅಮಿತಾಬ್ ಬಚ್ಚನ್ ಹಾಗೂ ನಟಿ ರಶ್ಮಿಕಾ ಜೊತೆಗೆ ಈ ಸಿನಿಮಾದಲ್ಲಿ ಒಂದು ಪುಟ್ಟ ನಾಯಿ ಕೂಡ ನಟಿಸಿದೆ, ಈ ನಾಯಿಯ ಚುರುಕುತನ ನೋಡಿ ಆ ನಾಯಿಯನ್ನು ಶೂ,ಟಿಂಗ್ ಮುಗಿದ ಬಳಿಕ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ರಶ್ಮಿಕಾ ಹೇಳಿದ್ದಕ್ಕೆ, ನಟ ಅಮಿತಾಬ್ ಬಚ್ಚನ್ ವಿರೋಧ ವ್ಯಕ್ತಪಡಿಸಿದ್ದರು.

ಇನ್ನು ಈ ನಾಯಿ ನನಗೆ ಬೇಕು ಎಂದು ಅಮಿತಾಬ್ ಬಚ್ಚನ್ ಹಠ ಮಾಡಿದ್ದಾರಂತೆ ಕೊನೆಗೂ ಅಮಿತಾಬ್ ಅವರ ಜೊತೆ ಹಠ ಮಾಡಿ ಜಗಳವಾಡಿ ನಾಯಿಯನ್ನು ಯಾರಿಗೂ ಕಾಣದಂತೆ ಸಾಗಿಸಿದ್ದಾರೆ ರಶ್ಮಿಕಾ ಮಂದಣ್ಣ. ಇನ್ನು ಆ ನಾಯಿಯನ್ನು ತಮ್ಮ ಮನೆಯವರಿಗೆ ನಟಿ ರಶ್ಮಿಕಾ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಅಮಿತಾಬ್ ಅಂತಹ ದೊಡ್ಡ ವ್ಯಕ್ತಿ ಜೊತೆಗೆ ನಟಿಸಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ ನಟಿ ರಶ್ಮಿಕಾ.

Leave a Reply

Your email address will not be published. Required fields are marked *