ಅಪ್ಪು ಸರ್ ಜೊತೆ ಆಕ್ಟ್ ಮಾಡಿದ್ದು ನನ್ನ ಜನ್ಮ ಸಾರ್ಥಕ.. ಲಕ್ಕಿಮ್ಯಾನ್ ಸಿನಿಮಾದಲ್ಲಿ ಅಪ್ಪು ಪಾತ್ರದ ಬಗ್ಗೆ ಡಾರ್ಲಿಂಗ್ ಕೃಷ್ಣ ಹೇಳಿದ್ದೇನು ನೋಡಿ…

ಸ್ಯಾಂಡಲವುಡ್

ಡಾರ್ಲಿಂಗ್ ಕೃಷ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದ ಉತ್ತಮ ನಟ ಹಾಗೂ ನಿರ್ದೇಶಕರಲ್ಲಿ ಒಬ್ಬರಾಗಿ ಡಾರ್ಲಿಂಗ್ ಕೃಷ್ಣ ಗುರುತಿಸಿಕೊಂಡಿದ್ದಾರೆ. ಇನ್ನು ಡಾರ್ಲಿಂಗ್ ಕೃಷ್ಣ ಕಿರುತೆರೆಯ ಕೃಷ್ಣರುಕ್ಮಿಣಿ ಧಾದವಹಿಯಲ್ಲಿ ಅಭಿನಯಿಸುವ ಮೂಲಕ ತಮ್ಮ ಜರ್ನಿ ಶುರು ಮಾಡಿ ಇದೀಗ ಇಷ್ಟು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

ಅದೆಷ್ಟೋ ಸ್ಟಾರ್ ನಟರ ಜೊತೆಗೆ ಪೋಷಕ ಪಾತ್ರಗಳಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶನದ ಹಾಗೂ ನಟನೆಯ ಲವ್ ಮಾಕ್ಟೇಲ್ 1 ಹಾಗೂ ಲವ್ ಮಾಕ್ಟೇಲ್ 2 ಸಿನಿಮಾಗಳ ಬಗ್ಗೆ ವಿಶೇಷವಾಗಿ ಹೇಳುವುದೇನು ಬೇಕಾಗಿಲ್ಲ.

ಏಕೆಂದರೆ ಈ ಸಿನಿಮಾ ಎಷ್ಟರ ಮಟ್ಟಿಗೆ ಮೆಚ್ಚುಗೆ ಪಡೆದುಕೊಂಡಿದೆ ಎನ್ನುವುದರ ಬಗ್ಗೆ ಈಗಾಗಲೆ ನಿಮ್ಮೆಲ್ಲರಿಗೂ ಸಹ ತಿಳಿದಿದೆ. ಇನ್ನು ಡಾರ್ಲಿಂಗ್ ಕೃಷ್ಣ ಅವರ ಲಕ್ಕಿಮ್ಯಾನ್ ಸಿನಿಮಾ ಇದೀಗ ತೆರೆ ಮೇಲೆ ಬಂದಿದ್ದು, ಈ ಸಿನಿಮಾದಲ್ಲಿ ಅಪ್ಪು ಇರುವುದು ಈ ಸಿನಿಮಾದ ಮತ್ತೊಂದು ಹೈಲೈಟ್ ಆಗಿದೆ. ಇನ್ನು ಈ ಸಿನಿಮಾದ ಬಗ್ಗೆ ಮಾತನಾಡಿದ ಕೃಷ್ಣ ಹೇಳಿದ್ದೇನು ನೋಡಿ..

ಸಿನಿಮಾದ ಬಗ್ಗೆ ಈ ಹಿಂದೆ ಕೂಡ ತುಂಬಾ ಮಾತನಾಡಿದ್ವಿ, ಆದರೆ ಸಿನಿಮಾ ಬಿಡುಗಡೆಯಾದ ಮೇಲೆ ನಾನು ಸಹ ಸಿನಿಮಾ ನೋಡಿರಲಿಲ್ಲ, ಡಬಿಂಗ್ ಟೈಮ್ ನಲ್ಲಿ ಮಾತ್ರ ನಾನು ಸಿನಿಮಾ ನೋಡಿದ್ದಿದ್ದು. ಅಪ್ಪು ಅವರ ಜೊತೆ ಆಕ್ಟ್ ಮಾಡಿದ್ದು, ನನ್ನ ಜೀವನ ಒಂದು ರೀತಿ ಸಾರ್ಥಕ ಎನಿಸುತ್ತಿದೆ.

ಜನ ಲಕ್ಕಿಮ್ಯಾನ್ ಸಿನಿಮಾ ನೋಡುತ್ತಾ ಅಪ್ಪು ಅವರ ಒಂದೊಂದು ಎಂಟ್ರಿಗೂ ಕೂಗಾಡುತ್ತಿದ್ದರೆ. ನಿಜಕ್ಕೂ ಜ್ಯಾಕಿ ಸಿನಿಮಾ ಟೈಮ್ ನಲ್ಲಿ ಅಪ್ಪು ಅವರ ಮುಂದೆ ಜನ ಸಾಗರ ಮುಗಿ ಬಿಳುತ್ತಿದ್ದರು. ಅ ಸಮಯದಲ್ಲಿ ನಾನು ಅಪ್ಪುಅವರನ್ನು ಕಾಪಾಡಿಕೊಂಡು ಕರೆದುಕೊಂಡು ಹೋಗುತ್ತಿದೆ, ಹಾಗೂ ಅಪ್ಪು ಅವರ ಜೊತೆಗೆ ಕಳೆದ ಆ ಎಲ್ಲಾ ನೆನಪುಗಳು ಮತ್ತೆ ಮತ್ತೆ ನೆನಪಾಗುತ್ತಿದೆ.

ಈ ಸಿನಿಮಾ ನನ್ನ ಸಿನಿಮಾ ಎಂದು ಹೇಳುವುದಕ್ಕಿಂತ ಇದು ಅಪ್ಪು ಅವರಿಗೆ ನಾನು ನೀಡಿರುವ, ಅವರ ವ್ಯಕ್ತಿತ್ವಕ್ಕೆ ನಾವು ನೀಡಿರುವ ಒಂದು ಟ್ರಿಬ್ಯುಟ್ ಎಂದು ಹೇಳಲು ಇಷ್ಟ ಪಡುತ್ತಿನಿ. ಈ ಸಿನಿಮಾದಲ್ಲಿ ಅವರ ಜೊತೆಗೆ ನತುಸಿದ್ದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಹಾಗೆ ನನ್ನನ್ನು ನಂಬಿ ನನಗೆ ಈ ಚ್ಯಾನ್ಸ್ ಕೊಟ್ಟಿದ್ದಕ್ಕೆ ನನ್ನ ಇಡೀ ಪ್ರೊಡಕ್ಷನ್ ಟೀಮ್ ಗೆ ಟ್ಯಾನ್ಸ್ ಹೇಳಲು ಇಷ್ಟಪಡುತ್ತಿನಿ.

ಇಷ್ಟು ದಿನ ಲವ್ ಮಾಕ್ಟೇಲ್ 1 ಹಾಗೂ ಲವ್ ಮಾಕ್ಟೇಲ್ 2 ಸಿನಿಮಾಗಳು ನನ್ನ ಮೈಲುಗಲ್ಲು ಅಥವಾ ಸಾಧನೆ ಎಂದು ತುಂಬಾ ಖುಷಿಯಾಗುತ್ತಿತ್ತು.ಆದರೆ ಈ ಸಿನಿಮಾ ಮಾಡಿರುವುದು, ಈ ಸಿನಿಮಾವನ್ನು ಥಿಯೇಟರ್ ನಲ್ಲಿ ಕುಳಿತು ನೋಡುವ ಫೀಲ್ ನಿಜಕ್ಕೂ ಹೇಳಲು ಸಾಧ್ಯವಿಲ್ಲ.

ಮುಂದೆ ಈ ಸಿನಿಮಾವನ್ನು ವೀಕ್ಷಕರು ಸಿನಿಮಾದ ರೀತಿ ನೋಡುವುದಿಲ್ಲ, ಈ ಸಿನಿಮಾವನ್ನು ಮನಸ್ಸಿಗೆ ತೆಗೆದುಕೊಂಡು ನೋಡುತ್ತಾರೆ ಅಷ್ಟು ಅದ್ಭುತವಾಗಿ ಈ ಸಿನಿಮಾ ಮೂಡಿ ಬಂದಿದೆ. ಇನ್ನು ನಾನು ಅಪ್ಪು ಅವರ ಅಭಿಮಾನಿಗಳಿಗೆ ತ್ಯಾನ್ಸ್ ಹೇಳಲು ಇಷ್ಟ ಪಡುತ್ತೇನೆ. ಹಾಗೆ ಈ ಸಿನಿಮಾ ನಾಳೆಯಿಂದ ಹೊಸ ಹಿಸ್ಟ್ರಿ ಕ್ರಿಯೇಟ್ ಮಾಡುತ್ತದೆ ಎನ್ನುವ ನಂಬಿಕೆಯಲ್ಲಿದ್ದೇನೆ ಎಂದು ಸಿನಿಮಾ ನೋಡಿ ಅಪ್ಪು ಅವರನ್ನು ಹಾಡಿ ಹೊಗಳಿದ್ದಾರೆ ಡಾರ್ಲಿಂಗ್ ಕೃಷ್ಣ.

Leave a Reply

Your email address will not be published. Required fields are marked *