ಚಿರಂಜೀವಿ ಸರ್ಜಾರನ್ನು ಕಳೆದುಕೊಂಡ ನೋವಿನಿಂದ ಇಂದಿಗೂ ಸಹ ಅದೆಷ್ಟೋ ಜನರಿಗೆ ಆಚೆ ಬರಲು ಆಗುತ್ತಿಲ್ಲ. ಅಂತಹ ಮಹಾನ್ ವ್ಯಕ್ತಿಯನ್ನು ಕೆಲವ ಅಷ್ಟು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡು ಆ ಕಟುಂಬದವರು ಇಂದಿಗೂ ಸಹ ನೋವು ಪಡುತ್ತಿದ್ದಾರೆ. ಇನ್ನು ನಮಗೆ ಇಷ್ಟು ನೋವಾದರೆ ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿ ಚಿರುವನ್ನು ಕಳೆದುಕೊಂಡ ಮೇಘನಾ ರಾಜ್ ಪರಿಸ್ಥಿತಿ ಹೇಗಿರಬೇಕು ನೀವೇ ಯೋಚನೆ ಮಾಡಿ.
ಹೌದು ಇಂದಿಗೂ ಸಹ ಮನಸ್ಸಿನಲ್ಲಿ ಅದೆಷ್ಟೋ ನೋವಿದ್ದರೂ ಸಹ ಅವೆಲ್ಲವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮೇಲ್ನೋಟಕ್ಕೆ ನಗುತ್ತಿರುತ್ತಾರೆ ಮೇಘನಾ ರಾಜ್.ಇನ್ನು ಚಿರುವಿನ ಅಗಲಿಕೆಯ ನಂತರ ಸರ್ಜಾ ಕುಟುಂಬಕ್ಕೆ ಸಂತಸ ತಂದುಕೊಟ್ಟಿದ್ದು ಚಿರು ಹಾಗೂ ಮೇಘನಾ ಮಗ ರಾಯನ್. ರಾಯನ್ ಆಗಮನದಿಂದ ಸರ್ಜಾ ಕುಟುಂಬದಲ್ಲಿ ಸಂತೋಷ ಮನೆ ಮಾಡಿತ್ತು.
ಇನ್ನು ರಾಯನ್ ನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ನಟಿ ಮೇಘನಾ ರಾಜ್ ಇತ್ತಿಚೆಗೆ ಮತ್ತೆ ಸಿನಿಮಾರಂಗಕ್ಕೂ ಸಹ ಕಮ್ ಬ್ಯಾಕ್ ಮಾಡಿದ್ದಾರೆ. ಇನ್ನು ನಟಿಯ ಈ ನಿರ್ಧಾರಕ್ಕೆ ಅವರ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದಾರೆ. ಸದ್ಯ ನಟಿ ಮೇಘನಾ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಮತ್ತೆ ಸಿನಿಮಾರಂಗದಲ್ಲಿ ತಮ್ಮ ಜಾದು ಶುರು ಮಾಡಲು ಮುಂದಾಗಿದ್ದಾರೆ.
ಇನ್ನು ಅಣ್ಣನನ್ನು ಕಳೆದುಕೊಂದ ನೋವಿನಲ್ಲಿದ್ದ ಧೃವ ಸರ್ಜಾ ಕೂಡ ರಾಯನ್ ನನ್ನು ನೋಡಿಕೊಂಡು ಆ ನೋವನ್ನು ಮರೆಯುತ್ತಿದ್ದರು. ಇದೀಗ ಧೃವ ಸರ್ಜಾ ಪತ್ನಿ ಪ್ರೇರಣಾ ಸರ್ಜಾ ಕುಟುಂಬಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಹೌದು ಧೃವ ಪತ್ನಿ ಪ್ರೇರಣಾ ಇದೀಗ ಗರ್ಭಿಣಿಯಾಗಿದ್ದು, ಈಗಾಗಲೇ 9 ತಿಂಗಳು ತುಂಬಿದೆ.
ಇನ್ನು ಇತ್ತೀಚೆಗೆ ಪ್ರೇರಣಾ ಅವರಿಗೆ ಸರ್ಜಾ ಕುಟುಂಬದವರು ಹಾಗೂ ಪ್ರೇರಣಾ ಕುಟುಂಬದವರೂ ಸೇರಿ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಿದ್ದರು. ಇನ್ನು ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಸ್ಟಾರ್ ಕಲಾವಿದರು ಸಹ ಭಾಗಿಯಾಗಿದ್ದರು.ಇನ್ನು ಪ್ರೇರಣಾ ಅವರ ಸೀಮಂತ ಶಾಸ್ತ್ರದಲ್ಲಿ ಪ್ರೇರಣಾ ತುಂಬಾ ಮುದ್ದಾಗಿ ಕಾಣಿಯುತ್ತಿದ್ದು, ನಟ ಧೃವ ಸರ್ಜಾ ಕೂಡ ಟ್ರೇಡಿಷನಲ್ ಲುಕ್ ನಲ್ಲಿ ಮಿಂಚಿದ್ದಾರೆ.
ಇನ್ನು ಸೀಮಂತ ಶಾಸ್ತ್ರದ ಫೋಟೋ ಮತ್ತು ವಿಡಿಯೋಗಳು ಸೋಸಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿದ್ದವು. ಇನ್ನು ಈ ದಂಪತಿಗೆ ಸಿನಿಮಾರಂಗದವರು ಹಾಗೂ ಅಭಿಮಾನಿಗಳು ಸೋಷಿಯಲ್ ಮಿಡಿಯಾದಲ್ಲಿ ಮುಖಾಂತರ ಶುಭ ಕೋರಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ನಟ ಪ್ರಥಮ್ ಕೂಡ ಆಗಮಿಸಿದ್ದರು.
ಸೀಮಂತ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಥಮ್ ಪ್ರೇರಣಾಗೆ ಹೇಳಿದ್ದೇನು ಗೊತ್ತಾ ಬನ್ನಿ ನೋಡೋಣ.. ನಟ ಧೃವ ಸರ್ಜಾ ಪತ್ನಿ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮದಲ್ಲಿ ನಟ ಪ್ರಥಮ್ ಅವರು ಭಾಗಿಯಾಗಿ, ಪ್ರೇರಣಾ ಅವರಿಗೆ ಶುಭ ಹಾರೈಸಿದ್ದಾರೆ. ಈ ಸುಂದರ ಕ್ಷಣಗಳನ್ನು ನಟ ಪ್ರಥಮ್ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡು, ಎಲ್ಲದಕ್ಕೂ ಹೌದು ಹೌದು ಅಂತ ಹೋಮ್ ವರ್ಕ್ ಮಾಡದೆ ಇರುವ ಪ್ರೈಮರಿ ಸ್ಟುಡೆಂಟ್ ತರ ತಲೆ ಅಲ್ಲಾಡಿಸುತ್ತಿದ್ದಾರೆ.
ಪ್ರೇರಣಾ, ಬೇಸಿಕಲಿ ಪ್ರೇರಣಾ ಒಬ್ಬರು ಲೆಕ್ಚರರ್ ಈಗ ಪಿಎಚ್ ಡಿ ಮಾಡುತ್ತಿದ್ದಾರೆ. ಗಂಡು ಮಗು ಹುಟ್ಟಿದ್ದರೆ ಚಿರು ಮತ್ತೆ ಹುಟ್ಟಿದಂತೆ, ಹೆಣ್ಣು ಮಗು ಹುಟ್ಟಿದ್ದರೆ ಧೃವ ಸರ್ಜಾ ಅವರ ಅಜ್ಜಿ ಮತ್ತೆ ಹುಟ್ಟಿದಂತೆ. ಟ್ವಿನ್ಸ್ ಹುಟ್ಟಿದ್ದರೆ ನೀವೊಂದು ಮಗುನಾ ಧೃವ ಸರ್ಜಾ ಒಂದು ಮಗುನಾ ಆಟವಾಡಿಸಿಕೊಂಡು ಇರಿ ಎಂದು ಕ್ಯಾಪ್ಷನ್ ನಲ್ಲಿ ಬರೆದುಕೊಂಡಿದ್ದಾರೆ.