ಅಪ್ಪು ಅವರ ಫೇವರೇಟ್ ಲ್ಯಾಂಬೋರ್ಗಿನಿ ಕಾರನ್ನು ಅಶ್ವಿನಿ ದುಬೈಗೆ ಕಳುಹಿಸಿಕೊಟ್ಟಿದೇಕೆ ಗೊತ್ತಾ? ನೋಡಿ…

ಸ್ಯಾಂಡಲವುಡ್

ನಟ ಪುನೀತ್ ರಾಜ್ ಕುಮಾರ್ ಈ ಹೆಸರು ಕೇಳಿದರೆ ಸಾಕು ಇಂದಿಗೂ ಸಹ ಎಲ್ಲರ ಮನಸ್ಸಿಗೆ ಬೇಸರವಾಗುತ್ತದೆ. ಅಂತಹ ಅದ್ಭುತ ನಟ ಹಾಗೂ ಅಂತಹ ಅದ್ಭುತ ವ್ಯಕ್ತಿಯನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಅನಾಥವಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಅಪ್ಪು ಇಲ್ಲ ಎಂದು ನೆನೆಯಲು ಸಹ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ.

ಅಪ್ಪು ನಮ್ಮನ್ನೆಲ್ಲಾ ಆಗಲಿ ಈಗಾಗಲೇ 10 ತಿಂಗಳು ಕಳೆದುಹೋಗಿದೆ ಆದರೆ ಅವರು ಇಂದಿಗೂ ಸಹ ಅದೆಷ್ಟೋ ಜನರ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಇನ್ನು ಇಂದಿಗೂ ಸಹ ಚಿತ್ರರಂಗದ ಅನೇಕ ನಟ ನಟಿಯರು ಅಪ್ಪು ಅವರನ್ನು ನೆನದು ತಮ್ಮ ಸಿನಿಮಾಗಳನ್ನು ಆ ಮಹಾನಟನಿಗೆ ಅರ್ಪಿಸುತ್ತಿರುತ್ತಾರೆ.

ಇನ್ನು ಅಪ್ಪು ಅವರನ್ನು ಕಳೆದುಕೊಂಡ ಅವರ ಅಭಿಮಾನಿಗಳ ನೋವನ್ನು ಯಾರು ಸಹ ಕೇಳಲಾಗುವುದಿಲ್ಲ. ಇಂದಿಗೂ ಸಹ ಅಪ್ಪು ಹೆಸರಿನಲ್ಲಿ ಅವರ ಅಭಿಮಾನಿಗಳು ಅದೆಷ್ಟೋ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಅನ್ನಧಾನ, ರಕ್ತಧಾನ ಶಿಬಿರ ಹಾಗೂ ಇನ್ನಿತರ ಕಾರ್ಯಗಳನ್ನು ಅಪ್ಪು ಹೆಸರಿನಲ್ಲಿ ಅವರ ಅಭಿಮಾನಿಗಳು ಮಾಡುತ್ತಿರುತ್ತಾರೆ.

ಇನ್ನು ಅಪ್ಪು ಅವರನ್ನು ಕಳೆದುಕೊಂಡ ನಮಗೆ ಇಷ್ಟು ಕಷ್ಟವಾದರೆ, ಅವರೊಂದಿಗೆ ಜೀವನ ನಡೆಸಬೇಕೆಂದು ಬಂದಿದ್ದ ಅಶ್ವಿನಿ ಅವರ ಸ್ಥಿತಿ ಹೇಗಿರಬಹುದು ಎನ್ನುವುದನ್ನು ನೀವೇ ಊಹಿಸ ಬಹುದು. ಇನ್ನು ಮನದಲ್ಲಿ ಅದೆಷ್ಟೋ ನೋವನ್ನು ಇಟ್ಟುಕೊಂಡು ಆಚೆಗೆ ಮಾತ್ರ ನಗು ಮುಖದಿಂದ ಎಲ್ಲಾ ಜವಾಬ್ದಾರಿಗಳನ್ನು ತಮ್ಮ ಹೆಗಲ ಮೇಲೆ ಇಟ್ಟುಕೊಂಡಿದ್ದಾರೆ.

ಅಪ್ಪು ಅವರು ಯಾವುದೇ ವಿಷಯದಲ್ಲಿ ಅದು ಇದು ಎಂದು ಹಠ ಹಿಡಿಯುತ್ತಿರಲಿಲ್ಲ. ಅವರು ಯಾವುದೇ ಜಾಗ ಎಲ್ಲೇ ಇದ್ದರೂ ಸಹ ಸಹಜ ಊಟ ಹಾಗೂ ನಿದ್ದೆ ಮಾಡಲು ಒಂದು ಚಾಪೆ ಇದ್ದರೆ ಸಾಕು ಎಂದು ಬಯಸುವಂತಹ ವ್ಯಕ್ತಿ. ಅದೆಷ್ಟೋ ಕೋಟಿಗೆ ಒಡೆಯನಾಗಿದ್ದರೂ ಕೂಡ ಅಪ್ಪು ಅವರು ಸದಾ ಸಹಜವಾಗಿರಲೂ ಬಯಸುತ್ತಿದ್ದರು.

ಆದರೆ ನಟ ಅಪ್ಪು ಮಾತ್ರ ಕಾರು ಮತ್ತು ಬೈಕ್ ಗಳಲ್ಲಿ ವಿಶೇಷ ರುಚಿಯನ್ನು ಹೊಂದಿದ್ದರು. ಅಪ್ಪು ಅವರ ಬಳಿ ಆಡಿ ಹಾಗೂ ರೇಂಜ್ ರೋವರ್ ಸೇರಿದಂತೆ ಇನ್ನು ಹಲವಾರು ಲಕ್ಷಾಂತರ ರೂಪಾಯಿ ಬಲೆ ಬಾಳುವ ಕಾರುಗಳನ್ನು ಹೊಂದಿದ್ದರು. ಇನ್ನು ಅದೇ ರೀತೀಯಲ್ಲಿ ಬೈಕ್ ಗಳನ್ನು ಸಹ ಹೊಂದಿದ್ದರು ನಮ್ಮ ಅಪ್ಪು.

ಇನ್ನು ಅಶ್ವಿನಿ ಅವರಿಗಾಗಿ ಅಪ್ಪು ಅವರು ಲ್ಯಾಂಬೋರ್ಗಿನಿ ಕಾರನ್ನು ಮಹಿಳಾ ದಿನಾಚರಣೆಯ ದಿನದಂದು ಉಡುಗೊರೆಯಾಗಿ ನೀಡಿದ್ದರಂತೆ. ಇನ್ನು ಅಶ್ವಿನಿ ಅವರಿಗಿಂತ ಹೆಚ್ಚಾಗಿ ಅಪ್ಪು ಅವರೆ ಆ ಕಾರನ್ನು ಬಳಸುತ್ತಿದ್ದರು. ಇನ್ನು ಅಪ್ಪು ಅವರು ಇಲ್ಲವಾದನಂತರ ಆ ಕಾರನ್ನು ಯಾರು ಬಳಸುತ್ತಿರಲಿಲ್ಲವಂತೆ. ಆದರೆ ಇದೀಗ ಈ ಕಾರನ್ನು ಅಶ್ವಿನಿ ದುಬೈಗೆ ಕಳುಹಿಸಿದ್ದಾರೆ.

ಏಕೆಂದರೆ ಅಪ್ಪು ಅವರ ನಿ-ಧನದ ನಂತರ ಲ್ಯಾಂಬೋರ್ಗಿನಿ ಕಾರನ್ನು ಯಾರು ಬಳಸುತ್ತಿರಲಿಲ್ಲವಂತೆ. ಇನ್ನು ಅಲ್ಲೇ ಇದ್ದರೆ ಆ ಕಾರು ಹಾಳಾಗುತ್ತದೆ ಎಂದು ಅಶ್ವಿನಿ ಅವರು ಅವರ ಸಹೋದರನಿಗೆ ಕಾರನ್ನು ನೀಡಿದ್ದಾರೆ. ಹೌದು ಅಶ್ವಿನಿ ಅವರ ಸಹೋದರ ದುಬೈನಲ್ಲಿ ನೆಲೆಸಿದ್ದು, ಅಶ್ವಿನಿ ಅವರು ಇದೀಗ ಅವರ ಲ್ಯಾಂಬೋರ್ಗಿನಿ ಕಾರನ್ನು ಅವರಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *