ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸುವುದು ಅಷ್ಟರ ಸುಲಭವಾದ ಮಾತಲ್ಲ. ಕೆಲವರು ಒಂದೆರಡು ಸಿನಿಮಾಗಳನ್ನು ಮಾಡಿ ಸಖತ್ ಫ್ಹೇಮಸ್ ಆಗಿ ಬಿಡುತ್ತಾರೆ. ಇನ್ನು ಕೆಲವರು ಎಷ್ಟೇ ಸಿನಿಮಾ ಮಾಡಿದರು ಕೂಡ ಹೆಸರು ಮಾಡಲು ತುಂಬಾ ಕಷ್ಟವಾಗುತ್ತದೆ. ಇಂತಹ ನಟಿಯರ ಪೈಕಿ ನಟಿ ಚೈತ್ರಾ ಹಳ್ಳಿಕೆರೆ ಕೂಡ ಒಬ್ಬರು.
ಇನ್ನು ತನ್ನ ಅದ್ಭುತ ನಟನೆ ಹಾಗೂ ಸೌಂದರ್ಯದ ಮೂಲಕ ಒಂದು ಕಾಲದಲ್ಲಿ ಸಖತ್ ಫ್ಹೇಮಸ್ ಆಗಿದ್ದ ನಟಿ ಚೈತ್ರಾ ಹಳ್ಳಿಕೆರೆ. ಹೌದು ಕನ್ನಡ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಯಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ತಮ್ಮ ಜೀವನದ ಯಶಸ್ಸಿನ ಹಂತದಲ್ಲಿರುವಾಗಲೇ ನಟಿ ಸಿನಿಮಾರಂಗದಿಂದ ದೂರ ಉಳಿದು ಬಿಟ್ಟರು.
ವಿಜಯರಾಘವೇಂದ್ರ, ಅಂಬರೀಷ್ ಸೇರಿದಂತೆ ಸಾಕಷ್ಟು ಕಲಾವಿದರ ಜೊತೆಗೆ ನಟಿ ಚೈತ್ರಾ ರೈ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇನ್ನು ತಮ್ಮ ಅದ್ಭುತ ನಟನೆಯ ಮೂಲಕ ನಟಿ ಚೈತ್ರಾ ರೈ ಸಾಕಷ್ಟು ಜನಪ್ರಿಯತೆ ಕೂಡ ಪಡೆದುಕೊಂಡಿದ್ದರು. ಕನ್ನಡದ ಜೊತೆಗೆ ಬೇರೆ ಬಾಷೆಗಳಲ್ಲಿ ಸಹ ನಟಿ ಚೈತ್ರಾ ರೈ ನಟಿಸಿ ಸಾಕಷ್ಟು ಹೆಸರು ಮಾಡಿದ್ದಾರೆ.
ಇನ್ನು ಸಿನಿಮಾರಂಗದಲ್ಲಿ ಯಶಸ್ಸು ಕಾಣುತ್ತಿದ್ದ ಸಮಯದಲ್ಲೇ ನಟಿ ಚೈತ್ರಾ ಬಣ್ಣದ ಲೋಕದಿಂದ ದೂರವಾದರು. ಬಾಲಾಜಿ ಎಂಬುವವರನ್ನು ಪ್ರೀತಿಸಿ ನಟಿ ಚೈತ್ರಾ ಸಿನಿಮಾಗಳಿಂದ ದೂರ ಉಳಿದರು. ಇನ್ನು ತಮ್ಮ ಕುಟುಂಬದವರನ್ನು ಎಲ್ಲರನ್ನು ಒಪ್ಪಿಸಿ ನಟಿ ಚೈತ್ರಾ ಬಾಲಾಜಿ ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿ ಮದುವೆಯಾಗ ಚೈತ್ರಾ ತಮ್ಮ ದಾಂಪತ್ಯ ಜೀವನದಲ್ಲಿ ಹೆಚ್ಚು ದಿನಗಳ ಕಾಲ ಸುಖ ಕಾಣಲಿಲ್ಲ. ಏಕೆಂದರೆ ನಟಿಯ ಹೇಳಿಕೆ ಪ್ರಕಾರ ಚೈತ್ರಾ ಅವರ ಗಂಡ ಬಾಲಾಜಿ ತನ್ನ ಮೇಲೆ ದಿನಾಲೂ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರಂತೆ. ಹಾಗೆ ಕೆಲವು ವರ್ಷಗಳ ಕಾಲ ನಟಿ ಅದನ್ನೆಲ್ಲಾ ಸಹಿಸಿಕೊಂಡಿದ್ದರು.
ಆದರೆ ಕೊನೆಗೂ ನಟಿ ಇದಕೆಲ್ಲಾ ಒಂದೇ ಸರಿ ಫುಲ್ ಸ್ಟಾಪ್ ಇಟ್ಟಿದ್ದಾರೆ. ಹೌದು ನಟಿ ಕೊನೆಗೂ ವಿಚ್ಛೇಧನ ಪಡೆದುಕೊಂಡು ತನ್ನ ಗಂಡನಿಂದ ದೂರವಾದರು. ಇನ್ನು ನಟಿ ಚೈತ್ರಾ ಅವರಿಗೆ ಎರಡು ಮಕ್ಕಳಿದ್ದು, ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ. ಇನ್ನು ನಟಿ ಬೆಂಗಳೂರಿನಲ್ಲೇ ತನ್ನ ಆಮ್ಮನ ಮನೆಯಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾರೆ.
ಇನ್ನು ಇತ್ತೀಚೆಗೆ ನಟಿ ಚೈತ್ರಾ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಇನ್ನು ತಮ್ಮ ಆಟದ ಮೂಲಕ ನಟಿ ಬಿಗ್ ಬಾಸ್ ಮನೆಯಲ್ಲಿ ಸಾಕಸ್ಟು ಜನಪ್ರಿಯತೆ ಪಡೆದುಕೊಂಡರು. ಇನ್ನು ಬಿಗ್ ಬಾಸ್ ಮನೆಯಲ್ಲಿ 5ನೆ ವಾರಕ್ಕೆ ತಮ್ಮ ಆಟ ಮುಗಿಸಿ ಮನೆಯಿಂದ ಎಲಿಮಿನೇಟ್ ಆದರೂ. ಇನ್ನು ಇದೀಗ ಮನೆಯಿಂದ ಹೊರ ಬಂದ ನಟಿ ಚೈತ್ರಾ ಹೊಸದಾಗಿ ರೀಲ್ಸ್ ಮಾಡಿದ್ದಾರೆ. ಸಾಂಪ್ರದಾಯಿಕವಾಗಿ ಸೀರೆ ಉಟ್ಟು ನಟಿ ರೀಲ್ಸ್ ಮಾಡಿದ್ದು, ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
View this post on Instagram