ಕನ್ನಡ ಚಿತ್ರರಂಗದ ಅದ್ಭುತ ನಟರ ಪೈಕಿ ನಟ ಡಾಲಿ ಧನಂಜಯ ಕೂಡ ಒಬ್ಬರು. ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಎಂದರೆ ಅದು ನಮ್ಮ ಡಾಲಿ ಧನಂಜಯ ಎಂದರೆ ತಪ್ಪಾಗುವುದಿಲ್ಲ. ಮೊದ ಮೊದಲು ಹೀರೋ ಆಗಿ ಕಾಣಿಸಿಕೊಂಡ ನಟ ಧನಂಜಯ ಹೆಸರು ಮಾಡಿದ್ದು ಮಾತ್ರ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ.
ಇನ್ನು ಕನ್ನಡದ ಜೊತೆಗೆ ತೆಲುಗು ಚಿತ್ರರಂಗದಲ್ಲಿ ಕೂಡ ನಟ ಧನಂಜಯ ಖಳನಾಯಕನ ಪಾತ್ರಗಳಲ್ಲಿ ಮಿಂಚುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿ ಕೂಡ ನಟ ಡಾಲಿ ಧನಂಜಯ ಅಷ್ಟೇ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಮೊದ ಮೊದಲು ಶಾರ್ಟ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ನಟ ಧನಂಜಯ ತಮ್ಮ ಸಿನಿ ಬದುಕನ್ನು ಶುರು ಮಾಡಿದರು. ನಂತರ ಕನ್ನಡದ ನಿರ್ದೇಶಕ ಗುರುಪ್ರಸಾದ್ ಅವರ ಡೈರೆಕ್ಟರ್ಸ್ ಸ್ಪೆಷಲ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ನಟ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು.
ಈ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಜೊತೆಗೆ ಸಾಕಷ್ಟು ನೆಗಟಿವ್ ರೆಸ್ಪಾನ್ಸ್ ಕೂಡ ದೊರೆಕಿತ್ತು. ನಂತರ ಬಾಕ್ಸರ್, ಜೆಸ್ಸಿ, ಬದ್ಮಾಷ್, ಅಲ್ಲಮ್ಮ, ಎರಡನೇಸಲ ಇನ್ನು ಮುಂತಾದ ಸಿನಿಮಾಗಳಲ್ಲಿ ನಾಯಕನಟನಾಗಿ ಅಭಿನಯಿಸಿದ್ದರು. ಈ ಎಲ್ಲಾ ಸಿನಿಮಾಗಳು ನಿರೀಕ್ಷೆ ಮಟ್ಟವನ್ನು ತಲುಪಲಿಲ್ಲ.
ಇನ್ನು ಟಗರು ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅವರ ಜೊತೆಗೆ ಖಳನಾಯಕನ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಡಾಲಿ ಪಾತ್ರದಲ್ಲಿ ಜೀವಿಸಿದ್ದ ನಟ ಧನಂಜಯ ಅವರನ್ನು ಇಂದಿಗೂ ಸಹ ಜನ ಡಾಲಿ ಧನಂಜಯ ಎಂದೇ ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಜನರ ಮನಸ್ಸಿನಲ್ಲಿ ನೆಲೆ ಮಾಡಿದ್ದಾರೆ ನಟ ಧನಂಜಯ.
ಇನ್ನು ನಟ ಡಾಲಿ ಧನಂಜಯ ಸೈಮಾ ಅವಾರ್ಡ್ಸ್ ಗೆ ಸೆಲೆಕ್ಟ್ ಆಗಿದ್ದು, ಇನ್ನು ಈ ಕಾರ್ಯಕ್ರಮದಲ್ಲಿ ನಟ ಸಖತ್ ಆಗಿ ಮಿಂಚಿದ್ದಾರೆ. ಇನ್ನು ಈ ವೇಳೆ ನಟ ತಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಾ ಅಪ್ಪು ಅವರನ್ನು ನೆನೆದು ಬೇಸರಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಸೈಮ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಇನ್ನು ಹಾಕುವವರು ನನ್ನ ಜೊತೆ ಇಲ್ಲದೆ ಇರುವುದು ಮನಸ್ಸಿಗೆ ತುಂಬಾ ಬೇಸರವಾಗುತ್ತಿದೆ ಖಂಡಿತವಾಗಿಯೂ ಈ ಕಾರ್ಯಕ್ರಮದಲ್ಲಿ ನಾನು ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ ನಟ ಡಾಲಿ ಧನಂಜಯ.