ನೋಡೋಕೆ ನಾನು ಇಷ್ಟು ಸುಂದರಾಗಿದ್ದರೂ ಯಾವ ಹುಡುಗ ಕೂಡ ನನ್ನ ಬಳಿ ಬಂದು ಮಾತಡಲ್ಲ ಎಂದು ಬೇಸರಗೊಂಡ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ.. ನೀವೇ ನೋಡಿ…

Bigboss News

ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಇದೀಗ ಶುರುವಾಗಿ ವೀಕ್ಷಕರಿಂದ ಬಾರಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಮೊದಮೊದಲು ಬಿಗ್ ಬಾಸ್ ಓಟಿಟಿ ಕಾರ್ಯಕ್ರಮವನ್ನು ಜನರು ಯಾವ ರೀತಿ ತೆಗೆದುಕೊಳ್ಳುತ್ತಾರೋ ಎನ್ನುವ ಭಾವನೆ ಬೀಚ್ ಬಾಸ್ ತಂಡಕ್ಕೆ ಇತ್ತು. ಆದರೆ ಬಿಗ್ ಬಾಸ್ ಓಟಿಟಿ ಶುರುವಾದ ಮೊದಲ ದಿನದಿಂದಲೂ ವೀಕ್ಷಕರಿಂದ ಒಳ್ಳೆಯ ಪ್ರಶಂಸೆ ಪಡೆದುಕೊಂಡಿದೆ.

ಇನ್ನು ಸ್ಪರ್ಧಿಗಳು ಕೂಡ ವೀಕ್ಷಕರನ್ನು ಪ್ರತಿ ನಿಮಿಷ ರಂಜಿಸುತ್ತಾ, ಅವರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈಗಾಗಲೇ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಶುರುವಾಗಿ 5 ವಾರಗಳೇ ಕಳೆದುಹೋಗಿದೆ. ಇನ್ನು ಇದೀಗ ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಓಟಿಟಿಯ ಗ್ರಾಂಡ್ ಫಿನಾಲೆ ಕೂಡ ಹತ್ತಿರ ಬರುತ್ತಿದೆ. ಇನ್ನು ಈ ಬಾರಿ ಬಿಗ್ ಬಾಸ್ ಸೀಸನ್ ನ ಯಾರು ಗೆಲ್ಲುತ್ತಾರೆ ಎನ್ನುವ ಪ್ರಶ್ನೆ ಇದೀಗ ಎಲ್ಲರಲ್ಲೂ ಕಾಡಿದೆ. ಇನ್ನು ಇತ್ತೀಚೆಗೆ ಚೈತ್ರಾ ಬಿಗ್ ಮನೆಯಿಂದ ಎಲಿಮಿನೇಟ್ ಆದರು.

ಜಯಶ್ರೀ ಅವರಿಗೆ ಮನೆಯಲ್ಲಿ ಸ್ನೇಹಿತೆ ಎಂದು ಇದ್ದ ಒಂದೇ ಒಂದು ಜೀವ ಎಂದರೆ ಅದು ಚೈತ್ರಾ, ಆದರೆ ಚೈತ್ರಾ ಎಲ್ಲರಿಗಿಂತ ಕಡಿಮೆ ವೊಟ್ಸ್ ಪಡೆದ ಕಾರಣ ಮನೆಯಿಂದ ಹೊರ ನಡೆದ್ದಿದ್ದಾರೆ. ಇನ್ನು ಜಯಶ್ರೀ ಮನೆಯಲ್ಲಿ ಒಂಟಿಯಾಗಿಬಿಟ್ಟಿದ್ದಾರೆ. ಇನ್ನು ಜಯಶ್ರೀ ಚೈತ್ರಾ ಮನೆಯಿಂದ ಎಲಿಮಿನೇಟ್ ಆದ ನಂತರ ದುಃಖದಿಂದ ಕಣ್ಣೀರು ಹಾಕಿದ್ದಾರೆ.

ಈ ವೇಳೆ ಇದನ್ನು ನೋಡಿ ಅಲ್ಲೇ ಇದ್ದ ಸೋನು ಗೌಡ ಹಾಗೂ ಗುರೂಜಿ ಜಯಶ್ರೀ ಅವರಿಗೆ ಸಮಾಧಾನ ಮಾಡಿದ್ದಾರೆ. ಇನ್ನು ಜಯಶ್ರೀ ಅವರಿಗೆ ನಾವು ನಿನ್ನ ಜೊತೆ ಇದ್ದೇವೆ ತಲೆ ಕೆಡಿಸಿಕೊಳ್ಳಬೇಡ ಎಂದು ಸಮಾಧನ ಮಾಡಿದ್ದಾರೆ.

ನಂತರ ಮರುದಿನ ಬೆಳ್ಳಗೆ ಸೋನು ಗೌಡ ಹಾಗೂ ಗುರೂಜಿ ಊಟ ಮಾಡುತ್ತಿರುವಾಗ ಅಲ್ಲಿಗೆ ಬಂದ ಜಯಶ್ರೀ ಗುರೂಜಿ ನಾನು ಇಷ್ಟು ಸುಂದರವಾಗಿದ್ದರೂ ಕೂಡ ಯಾವ ಹುಡುಗ ಕೂಡ ನನ್ನನ್ನು ನೋಡುವುದಿಲ್ಲ ಅಲ್ವಾ ಗುರೂಜಿ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಗುರೂಜಿ ಹೋಗ್ಲಿ ಬಿಡು ಮನೆಯಿಂದ ಹೊರಗೆ ಹೋದ ನಂತರ ನಮ್ಮ ಆಫೀಸ್ ಬಾಯ್ಸ್ ಅನ್ನು ಕಳುಹಿಸುತ್ತೇನೆ ಎಂದಿದ್ದಾರೆ. ಇನ್ನು ಇದೆಲ್ಲಾ ಅರ್ಥ ಆಗದ ಸೋನುಗೆ ಇವೆಲ್ಲವನ್ನು ಮೊದಲಿನಿಂದ ಗುರೂಜಿ ವಿವರಿಸಿದ್ದಾರೆ.

ಇದಕ್ಕೆ ಸೋನು ಗುರೂಜಿ ಇಲ್ವಾ, ಗುರೂಜಿಗಿಂತ ನಿನಗೆ ಹುಡುಗ ಬೇಕಾ, ಈಗ ಅವರೇ ನಿನ್ನ ಬೆಸ್ಟ್ ಫ್ರೆಂಡ್ ಆಗಿದ್ದಾರೆ ಅಲ್ವಾ ಎಂದಿದ್ದಾರೆ. ಇದಕ್ಕೆ ಜಯಶ್ರೀ ನಾನು ಕೇಳಿದ್ದು, ಯಂಗ್ ಹುಡುಗರನ್ನು ಕಣೆ ಎಂದಿದ್ದಾರೆ. ಇನ್ನು ಜಯಶ್ರೀ ಅವರ ಈ ಮಾತುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *