ನಟ ಧೃವ ಸರ್ಜಾ ಪತ್ನಿ ಪ್ರೇರಣಾ ತುಂಬು ಗರ್ಭಿಣಿಯಾಗಿದ್ದು, ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಈ ಖುಷಿಯ ವಿಚಾರದಿಂದ ಸರ್ಜಾ ಕುಟುಂಬದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಇನ್ನು ಈ ವಿಷಯದ ಮೂಲಕ ಧೃವ ಸರ್ಜಾ ಅಭಿಮಾನಿಗಳು ಕೂಡ ತುಂಬಾ ಸಂತಸ ಪಟ್ಟಿದ್ದಾರೆ.
ಮೊನ್ನೆತಾನೆ ಸೀಮಂತ ಕಾರ್ಯ ಮುಗಿಸಿ ತಮ್ಮ ತವರು ಮನೆಗೆ ಹೋಗಿದ್ದ ಪ್ರೇರಣಾ ಅವರನ್ನು ಇದೀಗ ಧೃವ ಸರ್ಜಾ ಅವರು ಮತ್ತೆ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಇನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ, ಆರತಿ ಮಾಡಿ ಮನೆ ತುಂಬಿಸಿಕೊಂಡಿದ್ದಾರೆ.
ಪ್ರೇರಣಾ ಅವರು ಎಂದರೆ ಧೃವ ಸರ್ಜಾ ಅವರ ಅಮ್ಮಾಜಿ ಅವರಿಗೆ ತುಂಬಾನೇ ಪ್ರೀತಿ. ತಮ್ಮ ಸ್ವಂತ ಮಗಳಿಗಿಂತ ಹೆಚ್ಚಾಗಿ ಪ್ರೇರಣಾ ಅವರನ್ನು ನೋಡಿಕೊಳ್ಳುತ್ತಿದ್ದರು ಧೃವ ಸರ್ಜಾ ಅವರ ತಾಯಿ. ಇನ್ನು ಇದೀಗ ಪ್ರೇರಣಾ ಅವರಿಗೆ ಒಂದು ತಿಂಗಳು ತುಂಬಿದೆ. ಇನ್ನೇನೂ ಕೆಲವೇ ದಿನಗಳಲ್ಲಿ ಸರ್ಜಾ ಕುಟುಂಬಕ್ಕೆ ಒಂದು ಮುದ್ದಾದ ಮಗುವಿನ ಆಗಮನವಾಗಲಿದೆ.
ಸರ್ಜಾ ಕುಟುಂಬಕ್ಕೆ ಇತ್ತೀಚೆಗೆ ಅದು ಯಾರ ಕಣ್ಣು ಬಿತ್ತೋ ಏನೋ, ಖುಷಿಯಾಗಿದ್ದ ಸರ್ಜಾ ಕುತುಂಬಕ್ಕೆ ಚಿರು ಸಾ**ವು ಬಿರುಗಾಳಿಯಂತೆ ಬಂದು ಎಲ್ಲವನ್ನು ನಾಶ ಮಾಡಿಬಿಟ್ಟಿತ್ತು. ಚಿರು ಸಾ***ವಿನ ನಂತರ ಚಿರು ಅಜ್ಜಿಯ ಸಾ**ವು ಕೂಡ ಯಾರು ಊಹಿಸದಂತೆ ನಡೆದು ಹೋಯಿತು.
ಚಿರು ನಿ***ಧನದ ಬಳಿಕ ಮೇಘನಾ ರಾಜ್ ಹೊಟ್ಟೆಯಲ್ಲಿ ಮತ್ತೆ ಚಿರು ಹುಟ್ಟಿ ಬರುತ್ತಾನೆ ಎಂದು ಹಲವಾರು ಜನ ನಂಬಿದ್ದರು.ಅದರಂತೆ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿ, ನಟಿ ಮೇಘನಾ ರಾಜ್ ಎಲ್ಲರ ಮನಸ್ಸಿಗೆ ಸಾಕಷ್ಟು ಖುಷಿ ತಂದುಕೊಟ್ಟಿದ್ದರು.
ಇನ್ನು ಕಳೆದ ತಿಂಗಳಲ್ಲಿ ಧೃವ ಸರ್ಜಾ ಅವರ ಅಜ್ಜಿ ಲಕ್ಷ್ಮೀ ದೇವಮ್ಮ ಅವರು ನಿ***ಧನರಾಗಿದ್ದರು. ಇನ್ನು ಇದೀಗ ಧೃವ ಸರ್ಜಾ ಪತ್ನಿ ಪ್ರೇರಣಾ ಅವರಿಗೆ ಹೆಣ್ಣು ಮಗು ಹುಟ್ಟುತ್ತದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಅವರ ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಇನ್ನು ಇದೀಗ ಧೃವ ಸರ್ಜಾ ಅವರ ತಾಯಿ, ಪ್ರೇರಣಾ ಅವರ ಅತ್ತೆ ಅಮ್ಮಾಜಿ ಇದೀಗ ಈ ಬಗ್ಗೆ ಮಾತನಾಡಿದ್ದಾರೆ. ಅಮ್ಮನವರು ಗಂಡಾಗಲಿ ಅಥವಾ ಹೆಣ್ಣಾಗಲಿ, ತಾಯಿ ಮತ್ತು ಮಗುವಿನ ಆರೋಗ್ಯ ಚೆನ್ನಾಗಿದ್ದರೆ ನಮಗೆ ಅಷ್ಟೇ ಸಾಕು. ಇದನ್ನೇ ನಾನು ದೇವರಲ್ಲಿ ಸಹ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…