ನಮಸ್ಕಾರ ವೀಕ್ಷಕರೇ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಇನ್ನು ಈ ಕಾರ್ಯಕ್ರಮ ಇದೆ ಸೆಪ್ಟೆಂಬರ್ 10 ಮತ್ತು 11 ರಂದು ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಇನ್ನು ಈ ಕಾರ್ಯಕ್ರಮದಲ್ಲಿ ಅನೇಕ ಕಲಾವಿದರು ಭಾಗವಹಿಸಿದ್ದರು.
ಹೌದು, ಈ ಬಾರಿಯ ಸೈಮಾ ಪ್ರಶಸ್ತಿ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದ್ದು, ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತ ಸಿನಿಮಾರಂಗದ ಅನೇಕ ಕಲಾವಿದರು ಭಾಗಿಯಾಗಿದ್ದರು. ಇನ್ನು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಈ ಕಾರ್ಯಕ್ರಮ ಜರುಗಿದ್ದು, ದಕ್ಷಿಣ ಸಿನಿಮಾರಂಗದ ಅನೇಕ ಸೆಲೆಬ್ರೆಟಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಪ್ರತಿಬಾರಿಯಂತೆ ಈ ಬಾರಿ ಕೂಡ ಸೈಮಾ ಅವಾರ್ಡ್ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನಡೆದಿತ್ತು. ಇನ್ನು ಈ ಬಾರಿ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕದ ಹೆಮ್ಮೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಮುತ್ತು ರಾಜ್, ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ನೀಡಲಾಗಿತ್ತು.
ಇನ್ನು ಈ ಸೈಮಾ ಕಾರ್ಯಕ್ರಮದಲ್ಲಿ ಅನೇಕ ಸ್ಯಾಂಡಲ್ವುಡ್ ಸೆಲೆಬ್ರೆಟಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇನ್ನು ಡಾಲಿ ಧನಂಜಯ, ಅಮೃತ ಐಯರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಸೇರಿದಂತೆ ಇನ್ನು ಹಲವಾರು ಸೆಲೆಬ್ರೆಟಿಗಳು ಭಾಗಿಯಾಗಿದ್ದರು.
ಇನ್ನು ಈ ಕಾರ್ಯಕ್ರಮಕ್ಕೆ ನಟಿ ಅಮೃತ ಐಯರ್ ಭಾಗಿಯಾಗಿ, ತುಂಬಾ ಸುಂದರವಾಗಿ ಕಂಗೊಳಿಸಿದ್ದರು. ಇನ್ನು ನಟಿ ಅಮೃತ ಐಯರ್ ಈ ವೇಳೆ ಅಪ್ಪು ಅವರನ್ನು ನೆನೆದು ಬೇಸರಪಟ್ಟಿದ್ದಾರೆ. ಇನ್ನು ಅಪ್ಪು ಅವರ ಬಗ್ಗೆ ಕೆಲವು ಮಾತುಗಳನ್ನು ಸಹ ಆಡಿದ್ದಾರೆ.
ಅಪ್ಪು ಸರ್ ಗಾಗಿ ಇಡೀ ಸೌತ್ ಇಂಡಿಯಾ ಸೇರಿ ಸೆಲೆಬ್ರೇಟ್ ಮಾಡುತ್ತಿರುವುದು ನಿಜಕ್ಕೂ ತುಂಬಾ ಖುಷಿಯಾಗುತ್ತಿದೆ. ಅಪ್ಪು ಸರ್ ಅವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಕಳೆದ ಬಾರಿ ಲವ್ ಮಾಕ್ಟೇಲ್ ಸಿನಿಮಾಗಾಗಿ ನಾಮಿನೇಟ್ ಆಗಿದ್ದೆ. ಇನ್ನು ಈ ಬಾರಿ ಬಡವ ರಾಸ್ಕಲ್ ಸಿನಿಮಾಗಿ ನಾಮಿನೇಟ್ ಆಗಿದ್ದೇನೆ.
ಇನ್ನು ಬಡವ ರಾಸ್ಕಲ್ ಸಿನಿಮಾಗಾಗಿ ನಟಿ ಅಮೃತ ಐಯರ್ ನಾಮಿನೇಟ್ ಆಗಿದ್ದು ಮಾತ್ರವಲ್ಲದೆ, ಈ ಬಾರಿ ಸೈಮಾ ಪ್ರಶಸ್ತಿಯನ್ನು ಸಹ ನಟಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇನ್ನು ನಟಿ ಇದೆ ರೀತಿ ಇನ್ನಷ್ಟು ಪ್ರಶಸ್ತಿಗಳನ್ನು ಗೆಲ್ಲಲಿ ಎಂದು ಅವರ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.