ಕರ್ನಾಟಕದ ಹೆಮ್ಮೆ ನಮ್ಮ ನಿಮ್ಮೆಲ್ಲರ ಅಪ್ಪು ಅವರನ್ನು ಕಳೆದುಕೊಂಡ ನೋವಿನಿಂದ ಇಂದಿಗೂ ಸಹ ಅದೆಷ್ಟೋ ಜನರಿಗೆ ಹೊರ ಬರಲು ಸಾಧ್ಯವಾಗಲಿಲ್ಲ. ಅಪ್ಪು ಅವರು ನಮ್ಮನ್ನೆಲ್ಲಾ ಬಿಟ್ಟು ಹೋಗಿ ಈಗಾಗಲೇ 10 ತಿಂಗಳು ಕಳೆದು ಹೋಗಿದೆ ಆದರೆ ಇಂದಿಗೂ ಸಹ ಆ ದಿನವನ್ನು ನೆನಪಿಸಿಕೊಂಡರೆ ಮನಸ್ಸಿಗೆ ತುಂಬಾ ನೋವಾಗುತ್ತದೆ.
ಇನ್ನು ಅಪ್ಪು ಅವರನ್ನು ಕಳೆದುಕೊಂಡ ಅವರ ಅಭಿಮಾನಿಗಳ ನೋವನ್ನು ಯಾರು ಸಹ ಕೇಳಲಾಗುವುದಿಲ್ಲ. ಇಂದಿಗೂ ಸಹ ಅಪ್ಪು ಹೆಸರಿನಲ್ಲಿ ಅವರ ಅಭಿಮಾನಿಗಳು ಅದೆಷ್ಟೋ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಅನ್ನಧಾನ, ರ,ಕ್ತಧಾನ ಶಿಬಿರ ಹಾಗೂ ಇನ್ನಿತರ ಕಾರ್ಯಗಳನ್ನು ಅಪ್ಪು ಹೆಸರಿನಲ್ಲಿ ಅವರ ಅಭಿಮಾನಿಗಳು ಮಾಡುತ್ತಿರುತ್ತಾರೆ.
ಇನ್ನು ನಮಗೆ ಅಪ್ಪು ಅವರು ಇಲ್ಲದ ವಿಷಯ ಇಷ್ಟು ನೋವುಕೊಟ್ಟರೆ, ಇನ್ನು ಅವರ ಕುಟುಂಬದವರಿಗೆ ಇನ್ನೆಷ್ಟು ನೋವಾಗಿರಬೇಕು. ಇನ್ನು ಅಪ್ಪು ಇಲ್ಲದೆ ಎಲ್ಲಾ ಜಾವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊಟ್ಟುಕೊಂಡಿರುವ ಅಶ್ವಿನಿ ಅವರ ಬಗ್ಗೆ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಶಿವಣ್ಣ ಮಾತಾನಾಡಿದ್ದಾರೆ. ಅಷ್ಟಕ್ಕೂ ಶಿವಣ್ಣ ಹೇಳಿದ್ದೇನು ನೋಡೋಣ ಬನ್ನಿ…
ನೆನ್ನೆ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಇನ್ನು ಈ ಒಂದು ಅವಾರ್ಡ್ ಕಾರ್ಯಕ್ರಮ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಈ ಕಾರ್ಯಕ್ರಮ ಜರುಗಿದ್ದು, ದಕ್ಷಿಣ ಸಿನಿಮಾರಂಗದ ಅನೇಕ ಸೆಲೆಬ್ರೆಟಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಇನ್ನು ಈ ಸೈಮಾ ಅವಾರ್ಡ್ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್, ರಾಕಿಂಗ್ ಸ್ತಾತ್ ಯಶ್, ಡಾಲಿ ಧನಂಜಯ, ಅಮೃತ ಐಯಂಗರ್ ಸೇರಿದಂತೆ ಇನ್ನು ಹಲವಾರು ಕಲಾವಿದರು ಸೌತ್ ಸಿನಿಮಾರಂಗದಿಂದ ಭಾಗಿಯಾಗಿದ್ದರು. ಪ್ರತಿಬಾರಿಯಂತೆ ಈ ಬಾರಿ ಕೂಡ ಸೈಮಾ ಅವಾರ್ಡ್ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನಡೆದಿತ್ತು.
ಇನ್ನು ಈ ಬಾರಿ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕದ ಹೆಮ್ಮೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಮುತ್ತು ರಾಜ್, ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ನೀಡಲಾಗಿತ್ತು. ಇನ್ನು ಅಪ್ಪು ಅವರು ಈ ಬಾರಿ ಈ ಕಾರ್ಯಕ್ರಮದಲ್ಲಿ ಇಲ್ಲದೆ ಇರುವುದನ್ನು ನೆನದು ಎಲ್ಲಾ ಕಲಾವಿದರು ಬೇಸರಗೊಂಡಿದ್ದಾರೆ.
ಇನ್ನು ಸೈಮಾ ಕಾರ್ಯಕ್ರಮದಲ್ಲಿ ಅಪ್ಪು ಅವರ ಯುವರತ್ನ ಸಿನಿಮಾಗಾಗಿ ಅವಾರ್ಡ್ ಕೂಡ ದೊರೆಕಿದೆ. ಇನ್ನು ಅಪ್ಪು ಇಲ್ಲದೆ ಇರುವ ಕಾರಣ ಅಪ್ಪು ಬದಲಿಗೆ ಸಿನಿಮಾದ ನಿರ್ದೇಶಕರು, ಹಾಗೂ ಡಾಲಿ ಧನಂಜಯ ಅವಾರ್ಡ್ ಅನ್ನು ಸ್ವೀಕರಿಸಿದರು.
ಇನ್ನು ಈ ವೇಳೆ ಅಪ್ಪು ಅವರನ್ನು ನೆನದು ಶಿವಣ್ಣ ಬಾವುಕರಾಗಿದ್ದಾರೆ. ಇನ್ನು ಅಪ್ಪು ಅವರಿಗಾಗಿ ಶಿವಣ್ಣ ಬಾನ ದಾರಿಯಲ್ಲಿ ಸೂರ್ಯ ಮೇಲೆ ಬಂದ ಹಾಡನ್ನು ಸಹ ಹಾಡಿದರು. ಈ ವೇಳೆ ಎಲ್ಲರ ಕಣ್ಣಂಚಿನಲ್ಲಿ ನೀರು ತುಂಬಿತ್ತು.
ಈ ಕಾರ್ಯಕ್ರಮಕ್ಕೆ ಅಶ್ವಿನಿ ಅವರು ಬರಬೇಕಾಗಿತ್ತು, ಆದರೆ ಅಪ್ಪು ಅವರನ್ನು ಕಳೆದುಕೊಂಡ ನೋವಿನಿಂದ ಅವರು ಇಣು ಹೊರಗೆ ಬಂದಿಲ್ಲ. ಮನಸ್ಸಿನಲ್ಲೇ ಎಲ್ಲಾ ನೋವನ್ನು ಇಟ್ಟುಕೊಂಡು ಅಶ್ವಿನಿ ಅವರು ತುಂಬಾ ಕುಗ್ಗಿ ಹೋಗಿದ್ದಾರೆ. ಇನ್ನು ಈ ಕಾರಣಕ್ಕೆ ಅವರು ಇಂದು ಈ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದಿದ್ದಾರೆ ಶಿವಣ್ಣ.