ಕನ್ನಡ ಚಿತ್ರರಂಗದ ಹೆಮ್ಮೆಯ ನಟಿ ಸುಮಲತಾ, ತಮ್ಮ ಅದ್ಭುತ ಅಭಿನಯದ ಮೂಲಕ ಚಿತ್ರರಂಗದ ಉತ್ತಮ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ರಾಜಕೀಯದಲ್ಲೂ ನಟಿ ಸಕ್ರಿಯರಾಗಿದ್ದು, ಇದೀಗ ಕೆಲವು ಕಿಡಿಗೇಡಿಗಳು ಅಂಬರೀಶ್ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ್ದರು, ಇದೀಗ ನಟಿ ಈ ಬಗ್ಗೆ ಮಾತನಾಡಿದ್ದಾರೆ.
ನಾನು ರಾಜಕೀಯಕ್ಕೆ ಬಂದು ಯಾವ ಕೆಲಸ ಮಾಡುತ್ತಿದ್ದೇನೆ ಅದನ್ನು ಜನಕ್ಕೆ ನಾನು ಉತ್ತರಿಸುತ್ತೇನೆ ಹೊರತು, ಸುಮ್ಮಸುಮ್ಮನೆ ನನ್ನ ಬಗ್ಗೆ ಆರೋಪ ಮಾಡುವವರಿಗೆ ಉತ್ತರಿಸುವ ಅಗತ್ಯ ನನಗಿಲ್ಲ. ನಾನು ಯಾವುದೇ ಕೆಲಸ ಮಾಡಿದರು ಕೂಡ ಅದನ್ನು ನಾನು ಎಲ್ಲರಿಗೂ ತಿಳಿಯುವಂತೆ ಮಾಡುತ್ತೇನೆ, ಬೆರೆಯವರ ರೀತಿ ಮುಚ್ಚಿಟ್ಟುಕೊಂಡು ಯಾವುದೇ ಕೆಲಸ ಮಾಡುವುದಿಲ್ಲ.
ಇನ್ನು ಇಲ್ಲಿ ಇಂತುಕೊಂಡು ಮಾತನಾಡುವಾಗ ಕೂಡ ಅಂಬರೀಶ್ ಅವರ ಬಗ್ಗೆ ಕೂಡ ಕೆಲವರು ಟೀಕೆಗಳು ಹಾಗೂ ಇಲ್ಲಸಲ್ಲದ ಆರೋಪಗಳನ್ನು ಮಾಡುವುದನ್ನು ನಾನು ಘಮನಿಸಿದ್ದೇನೆ. ಈ ವಿಷಯ ತುಂಬಾ ನೋವುಂಟು ಮಾಡಿದೆ, ಅಂಬರೀಶ್ ಅವರ ಅಭಿಮಾನಿಗಳು ಇದಕ್ಕೆ ಯಾವ ರೀತಿ ಪ್ರರಿಕ್ರಿಯೆ ನೀಡಿದ್ದರು ಎನ್ನುವುದನ್ನು ನೀವು ನೋಡಿದ್ದೀರಿ.
ಇನ್ನು ನಾನು ಒಂದು ಮಾತು ಹೇಳಲು ಇಷ್ಟ ಪಡುತ್ತೇನೆ. ಯಾವ ವ್ಯಕ್ತಿ ಇಲ್ಲವೋ ಅವರ ಬಗ್ಗೆ ಮಾತನಾಡುವ ಮೊದಲು ಯೋಚನೆ ಮಾಡಬೇಕು. ಏಕೆಂದರೆ ಆ ವ್ಯಕ್ತಿ ಬಂದು ನಾನು ಈ ಕೆಲಸ ಮಾಡಿದ್ದೇನೆ ಎಂದು ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ಇನ್ನು ಈ ರೀತಿ ಮಾತನಾಡುವ ನಿಮ್ಮ ವ್ಯಕ್ತಿತ್ವ ಹಾಗೂ ಸಂಸ್ಕಾರ ಎಂತದ್ದು ಎಂದು ತೋರಿಸುತ್ತದೆ.
ಇನ್ನು ಈ ರೀತಿ ಮಾಡುವುದು ಹೇಡಿಗಳು, ನಿಮಗೆ ಏನಾದರೂ ತೊಂದರೆ ಇದ್ದರೆ, ಅದನ್ನು ಧೈರ್ಯವಾಗಿ ನನ್ನ ಮುಂದೆ ಬಂದು ಕೇಳಿ. ಅದನ್ನು ಬಿಟ್ಟು ಈ ರೀತಿ ಹಿಂದೆ ಹೋಗಿ ಮಾತನಾಡುವುದು ನಿಜಕ್ಕೂ ಯಾರಿಗೂ ಸಹ ಶೋಭೆ ತರುವುದಿಲ್ಲ.
ಇನ್ನು ನನ್ನ ಬಗ್ಗೆ ಕೂಡ ಭ್ರ**ಷ್ಟಾಚಾರದ ಆರೋಪ ಮಾಡಿದ್ದರು, ಆ ರೀತಿ ಯಾವುದೇ ಧಾಖಲೆ ಇದ್ದರೆ, ನಾನು ಯಾವುದೇ ಟೈಮ್ ಯಾವ ಜಾಗಕ್ಕೆ ಬೇಕಾದರೂ ಬರುತ್ತೇನೆ. ಆ ರೀತಿ ನಮ್ಮ ಅಂಬರೀಶ್ ಅವರ ಇಡೀ ಕುಟುಂಬದಲ್ಲಿ ಯಾರಿಗೂ ಸಹ ಇಲ್ಲ.
ದೇವರು ನಮಗೆ ಎಲ್ಲಾ ಕೊಟ್ಟಿದ್ದಾನೆ, ನಾನು ಇರುವುದರಲ್ಲೇ ಸುಖವಾಗಿದ್ದೇನೆ. ಇದು ನನ್ನ ಕರ್ತವ್ಯ ನನ್ನಿಂದ ಕೆಲವರಿಗೆ ಒಳ್ಳೆಯದಾಗಲಿ ಎಂದು ಬರುತ್ತೇನೆ ಹೊರತು, ಬೇರೆ ಯಾವುದೇ ಉದ್ದೇಶ ನನ್ನ ಮನಸ್ಸಿನಲ್ಲಿಲ್ಲ. ಹಾಗೆ ನಮ್ಮ ಮನಸ್ಸಿನಲ್ಲೊ ಯಾವುದೇ ದುರಾಸೆ ಇಲ್ಲ ಎಂದು ಅಂಬರೀಶ್ ಅವರ ಬಗ್ಗೆ ಮಾತನಾಡಿದವರಿಗೆ ತರಾಟೆ ತೆಗೆದುಕೊಂಡಿದ್ದಾರೆ ಸುಮಲತಾ.