ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಹಾಗೂ ಎಲ್ಲಾ ನ್ಯೂಸ್ ಚಾನೆಲ್ ಗಳಲ್ಲಿ ಸಖತ್ ಸುದ್ದಿಯಾಗುತ್ತಿರುವುದು ಒಂದೇ ವಿಷಯ ಹಾಗೂ ಒಂದೇ ವ್ಯಕ್ತಿಯ ಬಗ್ಗೆ. ಆ ವ್ಯಕ್ತಿ ಬೇರೆ ಯಾರು ಅಲ್ಲ ಮುರುಘಾ ಮಠದ ಸ್ವಾಮೀಜಿ, ಮುರುಘಾ ಅವರ ಬಗ್ಗೆ. ಸಾದುವಿನಂತೆ ವೇಷ ಧರಿಸಿ ಈತ ಮಾಡಿರುವ ಕೆಲಸಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ.
ಇನ್ನು ಮುರುಘಾ ಮಠದ ಸ್ವಾಮೀಜಿಯ ದಿನನಿತ್ಯದ ಸುದ್ದಿಗಳನ್ನು ನೋಡಿ ಇದೀಗ ರಾಘಣ್ಣ ಅವರು ಕೂಡ ಬೇಸತ್ತಿದ್ದಾರೆ. ಈ ಬಗ್ಗೆ ರಾಘಣ್ಣ ಅವರು ಯಾವತ್ತೂ ಊಹಿಸಿರಲಿಲ್ಲವಂತೆ. ಇನ್ನು ರಾಘಣ್ಣ ಅವರು ಚಿತ್ರದುರ್ಗದ ಮುರುಘಾ ಮಠದ ಬಗ್ಗೆ ಸಾಕಷ್ಟು ಮಾಹಿತಿಯನ್ನು ತಿಳಿದುಕೊಂಡಿದ್ದರಂತೆ.
ಮೂರು ತಿಂಗಳ ಹಿಂದೆ ಅಪ್ಪು ಅವರಿಗೆ ಒಂದು ಪ್ರಶಸ್ತಿಯನ್ನ ನೀಡಲಾಗಿತ್ತು. ಈ ಪ್ರಶಸ್ತಿಯನ್ನು ಸ್ವೀಕರಿಸಲು ಅಪ್ಪು ಪರವಾಗಿ ರಾಘಣ್ಣ ಹೋಗಬೇಕಿತ್ತು. ಆದರೆ ಕಾರಣಾಂತರಗಳಿಂದ ರಾಘಣ್ಣ ಹೋಗಲು ಸಾಧ್ಯವಾಗಿರಲಿಲ್ಲ. ಇನ್ನು ರಾಘಣ್ಣ ಬದಲು ಅವರ ಪತ್ನಿ ಮಂಗಳ ಅವರ ಜೊತೆಗೆ ಅಶ್ವಿನಿ ಅವರು ಹೋಗಿ ಪ್ರಶಸ್ತಿಯನ್ನು ಸ್ವೀಕರಿಸಿ ಬಂದಿದ್ದರು.
ಇನ್ನು ಇದೀಗ ಮುರುಘಾ ಮಠದ ಈ ಸುದ್ದಿಗಳನ್ನು ಕೇಳಿ ರಾಘಣ್ಣ ತಲೆ ಚೆಚ್ಚಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ಅವರು ನಾನು ಇದರ ಬಗ್ಗೆ ಏನು ಮಾತನಾಡಲು ಇಷ್ಟ ಪಡಿವುದಿಲ್ಲ ಅಪ್ಪಾಜಿ, ಯಾವುದು ಸುಳ್ಳು ಯಾವುದು ಸತ್ಯ ಎಂದು ಟೀವಿಯವರೆ ತೋರಿಸುತ್ತಾರೆ.
ನಾನು ಈ ಬಗ್ಗೆ ಏನು ಮಾತನಾಡಲು ಸಾಧ್ಯ, ಇದನ್ನೆಲ್ಲಾ ನೋಡಿ ನಾನು ಸಂಪೂರ್ಣವಾಗಿ ಮೌನವಾಗಿ ಬಿಟ್ಟಿದ್ದೀನಿ. ನಿಜಕ್ಕೂ ಈ ವಿಷಯ ತಿಳಿದಾಗ, ಈ ರೀತಿ ಎಲ್ಲಾ ನಡೆದಿದ್ಯಾ ಎಂದು ಒಂದು ಕ್ಷಣ ನಂಬಲು ಸಾಧ್ಯವಾಗುತ್ತಿರಲಿಲ್ಲ. ನಾವು ಇದರ ಬಗ್ಗೆ ಮಾತನಾಡುವುದು ಸರಿಯಲ್ಲ.
ಇದಕ್ಕೆ ಎಂದೇ ಕೋರ್ಟು, ಕಛೇರಿ ಕಾನೂನು ಅಂತ ಇದೆ, ಅವರು ನೋಡಿಕೊಳ್ಳುತ್ತಾರೆ. ದೇವರು ಅಂತ ಒಬ್ಬ ಇದ್ದಾನೆ ಅವನು ಎಲ್ಲವನ್ನು ನೋಡುತ್ತಿರುತ್ತಾನೆ. ಅವರು ತಪ್ಪು ಮಾಡಿದ್ದೆ ಆದರೆ ದೇವರು ಅವರಿಗೆ ಸರಿಯಾದ ಪಾಠವನ್ನೇ ಕಲಿಸುತ್ತಾನೆ.
ಅವರು ತಪ್ಪು ಮಾಡಿದ್ದೆ ಆದರೆ ಆ ಎಲ್ಲಾ ಮಕ್ಕಳಿಗೂ ನ್ಯಾಯ ಸಿಗಬೇಕು. ಇನ್ನು ಮುಂದೆಯಾದರು ಈ ರೀತಿಯ ಜನ ಇರುತ್ತಾರೆ, ಎಂದು ನಾವೆಲ್ಲಾ ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ ರಾಘಣ್ಣ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.