ಮಕ್ಕಳು ಯಾವಾಗ ಮಾಡಿಕೊಳ್ತೀರಾ ಎಂದು ಕೇಳಿದವರಿಗೆ ಕೂಲ್ ಆಗಿ ಉತ್ತರಿಸಿದ ನಿವೇದಿತಾ ಗೌಡ! ನೀವೇ ನೋಡಿ….

ಸ್ಯಾಂಡಲವುಡ್

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ, ಈ ಹೆಸರುಗಳನ್ನಿ ಯಾರು ತಾನೇ ಕೇಳದೆ ಇರಲು ಸಾಧ್ಯ ಹೇಳಿ. ಈ ಜೋಡಿ ಮದುವೆಯಾದಾಗಿನಿಂದಲೂ ಒಂದೆಲ್ಲಾ ಒಂದು ರೀತಿ ಸದಾ ಚರ್ಚೆಯಲ್ಲಿರುತ್ತಾರೆ. ಇದೀಗ ಮತ್ತೆ ಈ ಜೋಡಿ ಸೋಷಿಯಲ್ ಮಿಡಿಯಾದಲ್ಲಿ ಬಾರಿ ಚರ್ಚೆಯಲ್ಲಿದ್ದಾರೆ. ಹಾಗಾದರೆ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೆವೆ ಬನ್ನಿ…

ನಿವೇದಿತಾ ಗೌಡ ಅವರು ಆಗಾಗ ಸೋಷಿಯಲ್ ಮಿಡಿಯಾದ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಿರುತ್ತಾರೆ. ಅಲ್ಲದೆ ರೀಲ್ಸ್ ಹಾಗೂ ತಮ್ಮ ಫೋಟೋಗಳನ್ನು ಶೇರ್ ಮಾಡುವ ಮೂಲಕ ಆಗಾಗ ತಮ್ಮ ಅಭಿಮಾನಿಗಳನ್ನು ನಿವೇದಿತಾ ಗೌಡ ರಂಜಿಸುತ್ತಿರುತ್ತಾರೆ. ಸದಾ ಚಟುವಟಿಕೆಯಲ್ಲೇ ಬ್ಯುಸಿಯಾಗಿರುವ ನಿವೇದಿತಾ ಗೌಡ ಅವರು ಇತ್ತೀಚೆಗೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಮಾತನಾಡಿದ್ದಾರೆ.

ಇಷ್ಟು ದಿನ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಜನ ನಿವೇದಿತಾ ಹಾಗೂ ಚಂದನ್ ಅವರಿಗೆ ಮಕ್ಕಳು ಯಾವಾಗ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನಿಸುತ್ತಿದ್ದರು. ಆದರೆ ಈ ಯಾವ ಪ್ರಶ್ನೆಗಳಿಗೂ ಇಬ್ಬರೂ ಕೂಡ ಉತ್ತರ ನೀಡಿರಲಿಲ್ಲ. ಕೊನೆಗೂ ಇದೀಗ ನಟಿ ನಿವೇದಿತಾ ಗೌಡ ಈ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ.

ಮದುವೆಯಾಗಿ ಇಷ್ಟು ದಿನಗಳಾದರೂ ಇನ್ನು ಮಕ್ಕಳು ಮಾಡಿಕೊಂಡಿಲ್ಲ ಎಂದು ಸಾಕಷ್ಟು ಜನ ಸೋಷಿಯಲ್ ಮಿಡಿಯಾದಲ್ಲಿ ಚಂದನ್ ಹಾಗೂ ನಿವೇದಿತಾ ಅವರಿಗೆ ಪ್ರಶ್ನಿಸುತ್ತಿದ್ದರು. ಆದರೆ ಇದೀಗ ಮತ್ತೊಬ್ಬ ಅಭಿಮಾನಿ ಸೋಷಿಯಲ್ ಮೀಡಿಯಾದಲ್ಲಿ ನೀವು ಮಕ್ಕಳನ್ನು ಯಾವಾಗ ಮಾಡಿಕೊಳ್ಳುತಿರಾ ಎಂದು ಪ್ರಶ್ನಿಸಿದ್ದಾನೆ.

ಇದಕ್ಕೆ ನಟಿ ನಿವೇದಿತಾ ಗೌಡ ಕೂಲ್ ಆಗಿಯೇ ಉತ್ತರಿಸಿದ್ದು, ಸದ್ಯಕ್ಕೆ ನಮಗೆ ಮಕ್ಕಳನ್ನು ಮಾಡಿಕೊಳ್ಳುವ ಪ್ಲಾನ್ ಇಲ್ಲ. ಇನ್ನು ನಾವು ಜೀವನವನ್ನು ಎಂಜಾಯ್ ಮಾಡಬೇಕು, ಟೂರ್ ಮಾಡಬೇಕು ಎಲ್ಲವೂ ಆದ ನಂತರ ನೋಡೋಣ ಎಂದು ನಟಿ ನಿವೇದಿತಾ ಗೌಡ ಉತ್ತರಿಸಿದ್ದಾರೆ.

ಇದೆ ಪ್ರಶ್ನೆಯನ್ನು ಹಲವಾರು ಜನ ಕೇಳುತ್ತಿದ್ದಾರೆ, ನಾನು ಇಷ್ಟು ಬೇಗ ಯಾಕೆ ಮಗು ಮಾಡಿಕೊಳ್ಳಬೇಕು ಎಂದು ನಟಿ ನಿವೇದಿತಾ ಗೌಡ ಪ್ರಶ್ನೆ ಮಾಡಿದ್ದಾರೆ. ಸದ್ಯ ನಿವೇದಿತಾ ಗೌಡ ರಿಯಾಲಿಟಿ ಶೋ ಹಾಗೂ ಸೋಷಿಯಲ್ ಮಿಡಿಯಾದಲ್ಲಿ ರೀಲ್ಸ್ ಮಾಡಿಕೊಂಡು ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

ಇನ್ನು ಇಷ್ಟು ದಿನ ಕೇವಲ ರಾಪರ್ ಆಗಿದ್ದ ಚಂದನ್ ಶೆಟ್ಟಿ, ಇದೀಗ ಹೀರೋ ಆಗಿ ಸಹ ಲಾಂಚ್ ಆಗಿದ್ದಾರೆ. ಅಲ್ಲದೆ ಕನ್ನಡ ಹಲವು ಸಿನಿಮಾಗಳಿಗೆ ಚಂದನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಟನೆಯ ಜೊತೆಗೆ ಗಾಯಕನಾಗಿ ಸಹ ಚಂದನ್ ಶೆಟ್ಟಿ ಸಕತ್ ಬ್ಯುಸಿಯಾಗಿದ್ದಾರೆ. ಮಕ್ಕಳು ಮಾಡಿಕೊಳ್ಳದೆ ಇರುವುದಕ್ಕೆ ಇವೆಲ್ಲವೂ ಕಾರಣ ಇರಬಹುದು. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *