OKನಟಿ ಮೇಘನಾ ರಾಜ್ ತಮ್ಮ ಪತಿ ಚಿರು ನಿಧನದ ಬಳಿಕ ಸಿನಿಮಾರಂಗದಿಂದ ಬ್ರೇಕ್ ತೆಗೆದುಕೊಂಡು ತಮ್ಮ ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದರು. ಇನ್ನು ಇದೀಗ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ನಟಿ ಮೇಘನಾ ರಾಜ್ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
ಇನ್ನು ಸಿನಿಮಾ ಕೆಲಸಗಳ ಜೊತೆಗೆ ತಮ್ಮ ಮಗನ ಮೇಲೆ ವಿಶೇಷ ಕಾಳಜಿಯನ್ನು ಸಹ ವಹಿಸುತ್ತಿದ್ದಾರೆ.
ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ನಟಿ ಮೇಘನಾ ರಾಜ್, ಆಗಾಗ ತಮ್ಮ ಕೆಲಸದ ಫೋಟೋಗಳ ಜೊತೆಗೆ ತಮ್ಮ ಮಗನ ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಇನ್ನು ಇತ್ತೀಚೆಗಷ್ಟೇ ನಟ ಧೃವ ಸರ್ಜಾ ಅವರ ಪತ್ನಿ ಪ್ರೇರಣಾ ಗರ್ಭಿಣಿ ಎನ್ನುವ ವಿಷಯವನ್ನು ಹಂಚಿಕೊಂಡಿದ್ದರು. ಇನ್ನು ಮೊನ್ನೆ ಪ್ರೇರಣಾ ಅವರಿಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಕೂಡ ನೆರವೇರಿಸಲಾಗಿತ್ತು. ಇನ್ನು ನಟಿ ಮೇಘನಾ ರಾಜ್ ವಿದೇಶದಲ್ಲಿ ಇದ್ದ ಕಾರಣ ಸೀಮಂತಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಇನ್ನು ನಟಿ ಮೇಘನಾ ರಾಜ್ ವಿದೇಶದಿಂದಲೇ ಪ್ರೇರಣಾ ಅವರಿಗೆ ಕರೆ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು ತುಂಬು ಗರ್ಭಿಣಿಯಾಗಿರುವ ಪ್ರೇರಣಾ ಅವರಿಗೆ ಕೆಲವು ಸಲಹೆಗಳನ್ನು ನೀಡಿ ಧೈರ್ಯ ತುಂಬಿದ್ದಾರೆ. ಜೊತೆಗೆ ಸರಿಯಾಗಿ ಊಟ ಮತ್ತು ನಿದ್ದೆ ಮಾಡುವಂತೆ ಹಾಗೆ ಆರೋಗ್ಯದ ಕಡೆ ಘಮನ ಹರಿಸುವಂತೆ ಸಲಹೆ ನೀಡಿದ್ದಾರೆ ಮೇಘ್ನಆ ರಾಜ್.
ಇನ್ನು ಪ್ರೇರಣಾ ಅವರ ಸೀಮಂತಕ್ಕೆ ಡಿ ಬಾಸ್ ದರ್ಶನ್ ಬರಲು ಸಾಧ್ಯವಾಗದ ಕಾರಣ, ಇದೀಗ ದರ್ಶನ್ ಮನೆಗೆ ಬಂದು ಸರ್ಜಾ ಕುಟುಂಬದವರ ಯೋಗ ಕ್ಷೇಮ ವಿಚಾರಿಸಿಕೊಂಡಿದ್ದಾರೆ. ಇನ್ನು ಮೇಘನಾ ಹಾಗೂ ರಾಯನ್ ನನ್ನು ನೋಡಿ ಖುಷಿಯಿಂದ ಮಾತನಾಡಿಸಿದ್ದಾರೆ.
ಇನ್ನು ರಾಯನ್ ನನ್ನು ನೋಡಿ ರಾಯನ್ ನೋಡಲು ತೇಟ್ ಚಿರು ತರ ಇದ್ದಾನೆ ಎಂದಿದ್ದಾರೆ. ನೀನು ಕೂಡ ನಿಮ್ಮ ಅಪ್ಪನ ತರ ಒಳ್ಳೆಯ ಹೀರೋ ಆಗ್ತೀಯಾ ಎಂದಿದ್ದಾರೆ ನಟ ದರ್ಶನ್. ಇನ್ನು ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ದರ್ಶನ್ ಹಾಗೂ ಚಿರು ಒಳ್ಳೆಯ ಸ್ನೇಹಿತರಾಗಿದ್ದರು. ಹಾಗಾಗಿ ಸರ್ಜಾ ಕುಟುಂಬಕ್ಕೆ ದರ್ಶನ್ ತುಂಬಾ ಆತ್ಮೀಯರಾಗಿದ್ದಾರೆ.
ಇನ್ನು ಇದೀಗ ಸರ್ಜಾ ಕುಟುಂಬಕ್ಕೆ ದಿಢೀರ್ ಎಂದು ಆಗಮಿಸಿದ ದರ್ಶನ್ ಅವರನ್ನು ನೋಡಿ ಎಲ್ಲರೂ ತುಂಬಾ ಖುಷಿ ಪಟ್ಟಿದ್ದಾರೆ. ಇನ್ನು ದರ್ಶನ್ ಅವರ ಈ ಗುಣದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…