ಮದುವೆಯಾದ ಹೆಂಗಸರು ಈ ವಸ್ತುಗಳನ್ನು ಎಂದಿಗೂ ಧರಿಸಬೇಡಿ…!!
ಸಾಮಾನ್ಯವಾಗಿ ಒಬ್ಬ ಹುಡುಗನ ಅದೃಷ್ಟ ತಾನು ಮದುವೆಯಾಗುವ ಹುಡುಗಿ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ
ಏಕೆಂದರೆ ಹೆಣ್ಣನ್ನು ಸಾಕ್ಷಾತ್ ಲಕ್ಷ್ಮೀ ದೇವಿಗೆ ಹೋಲಿಸಲಾಗುತ್ತದೆ.
ಇನ್ನೂ ಇಂತಹ ಸಾಕ್ಷಾತ್ ಲಕ್ಷ್ಮೀದೇವಿಯಂತಹ ಹೆಣ್ಣುಮಕ್ಕಳು ಮಾಡುವಂತಹ ಪುಣ್ಯ ಕೆಲಸಗಳಿಂದ ಮತ್ತು ಶುಭ ಕಾರ್ಯಗಳಿಂದ ಗಂಡನಿಗೆ ಯಶಸ್ಸು ಲಭ್ಯವಾಗುತ್ತದೆ ಎನ್ನಬಹುದು.
ಇನ್ನು ಇಂದಿನ ನಮ್ಮ ಲೇಖನದಲ್ಲಿ ಹೆಂಡತಿ ಮಾಡುವ ಯಾವ ತಪ್ಪಿನಿಂದ ಗಂಡನಿಗೆ ದುರಾದೃಷ್ಟ ಎದುರಾಗಲಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.
ಸಾಮಾನ್ಯವಾಗಿ ಮಹಿಳೆಯರು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ಪ್ರಮುಖ ತಪ್ಪುಗಳನ್ನು ಮಾಡುತ್ತಾರೆ.
ಅಂತಹ ತಪ್ಪುಗಳು ಯಾವೆಂದರೆ *
ಮದುವೆಯಾದ ಹೆಂಗಸು ಪರ ಪುರುಷನ ಬಳಿ ಮಾತನಾಡುವುದು ಅಥವಾ ಸಂಬಂಧ ಬೆಳೆಸುವುದನ್ನು ಮಾಡಿದರೆ ಅದು ಗಂಡನ ಮನೆಯ ವಿನಾಶಕ್ಕೆ ಕಾರಣವಾಗುತ್ತದೆ
ಏಕೆಂದರೆ ಮದುವೆಯಾದ ಬಳಿಕ ಹೆಂಡತಿಗೆ ಗಂಡನೆ ಸರ್ವಸ್ವವೂ ಆಗಿರಬೇಕು.
ಇನ್ನು ಇದರಿಂದ ಹೆಣ್ಣಿಗೆ ಎಷ್ಟು ಅಪಕೀರ್ತಿಯೋ ಗಂಡನಿಗೆ ಅದಕ್ಕಿಂತ ಹೆಚ್ಚು ಅಪಕೀರ್ತಿಯಾಗುತ್ತದೆ.
* ಇನ್ನೂ ಪ್ರತಿ ಗೃಹಿಣಿಯು ದೇವರ ಕೋಣೆಯನ್ನು ಸ್ವತ್ಛವಾಗಿಟ್ಟುಕೊಂಡು, ಪ್ರತಿದಿನ ತಪ್ಪದೆ ಸ್ನಾನವನ್ನು ಮಾಡಿ, ಶ್ರದ್ಧೆ ಭಕ್ತಿಯಿಂದ ದೀಪವನ್ನು ಹಚ್ಚುವುದು ಅವರ ಕರ್ತವ್ಯವಾಗಿರುತ್ತದೆ.
ಹಾಗಾಗಿ ಯಾವುದೇ ಗೃಹಿಣಿ ತಡವಾಗಿ ಮಲಗುವುದು ತಡವಾಗಿ ಏಳುವುದು ಮಾಡಿದರು ಕೂಡ ಗಂಡನಿಗೆ ತೊಂದರೆ ಎದುರಾಗುತ್ತದೆ.
* ಯಾವುದೇ ಕಾರಣಕ್ಕೂ ಪ್ರತಿದಿನ ಸ್ನಾನ ಮಾಡುವುದನ್ನು ನಿಲ್ಲಿಸಬಾರದು ಅಥವಾ ಮರೆಯಬಾರದು ಏಕೆಂದರೆ ಯಾವ ಮನೆಯಲ್ಲಿ ಗೃಹಿಣಿಯೂ ಪ್ರತಿದಿನ ಸ್ನಾನ ಮಾಡುವುದಿಲ್ಲವೋ ಅಂತಹ ಮನೆಯಲ್ಲಿ ದಾರಿದ್ರ್ಯತೆ ಹೆಚ್ಚಾಗುತ್ತದೆ.
*ಯಾವ ಮಹಿಳೆಯೂ ಗುರುವಾರದ ದಿನ ಮಾಂಸಾಹಾರ ವನ್ನು ಸೇವಿಸುತ್ತಾಳೆಯೋ ಮತ್ತು ಮದ್ಯಪಾನ , ಧೂಮಪಾನದಂತಹ ಕೆಟ್ಟ ಚಟಗಳನ್ನು ಹೊಂದಿರುತ್ತಾಳೆಯೋ
ಅಂಥವರ ಮನೆಯಲ್ಲಿ ದಟ್ಟ ದಾರಿದ್ರ್ಯ ಹೆಚ್ಚು ಆವರಿಸುತ್ತದೆ ಎಂದು ಹೇಳಲಾಗುತ್ತದೆ.
ಮುಖ್ಯವಾಗಿ ಗುರುವಾರದ ದಿನ ತಪ್ಪದೆ ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು.
* ಯಾವ ಮಹಿಳೆ ತನ್ನ ಗಂಡನ ವಿರುದ್ಧ ಮಾತನಾಡುತ್ತಾಳೋ ಅಥವಾ ಪ್ರತಿದಿನ ಜಗಳ ಮಾಡುತ್ತಾಳೆಯೋ ಅಥವಾ ಗಂಡನ ತಂದೆ ತಾಯಿಯನ್ನು ದ್ವೇಷ ಮಾಡುತ್ತಾಳೋ
ಅಂಥವರ ಮನೆಯಲ್ಲಿ ಹೇಳಿಕೊಳ್ಳಲಾಗದಂತಹ ಕಷ್ಟ ಎದುರಾಗುತ್ತದೆ.
* ಇನ್ನು ಪದೇಪದೆ ಕ್ಷುಲ್ಲಕ ಕಾರಣಕ್ಕೆ ಕಣ್ಣೀರು ಸುರಿಸುವುದು, ಕೋಪ ಮಾಡಿಕೊಳ್ಳುವುದು ಹೀಗೆ ಮಾಡಿದರೂ ಸಹ ದಟ್ಟದಾರಿದ್ರ್ಯ ತೆ ಆ ಮನೆಯ ತುಂಬಾ ಆವರಿಸುತ್ತದೆಯಂತೆ.
– ಇನ್ನೂ ಮಹಿಳೆಯರು ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಧರಿಸಬಾರದು
ಏಕೆಂದರೆ ಇವುಗಳನ್ನು ಧರಿಸುವುದರಿಂದ ಕಷ್ಟ ನಷ್ಟಗಳು ಹೆಚ್ಚಾಗುತ್ತವೆ.
* ಸಂಪೂರ್ಣ ಬಿಳಿ ಬಟ್ಟೆ ಯಾವುದೇ ಕಾರಣಕ್ಕೂ ಹೆಂಗಸರು ಸಂಪೂರ್ಣ ಬಿಳಿ ಬಟ್ಟೆಯನ್ನು ಧರಿಸಬಾರದು ಏಕೆಂದರೆ ಅದು ಅಶುಭದ ಸಂಕೇತ ವಾಗಿದೆ ಇದರಿಂದ ಗಂಡನಿಗೆ ಆಪತ್ತು ಎದುರಾಗಬಹುದು.
ಹಾಗಾಗಿ ಹೆಂಗಸರು ಬಿಳಿಯ ಬಟ್ಟೆ ಧರಿಸುವುದಾದರೆ ಅದರ ಜೊತೆಗೆ ಬೇರೆ ಬಣ್ಣದ ಬಟ್ಟೆಯ ನ್ನು ಧರಿಸಬೇಕು.
* ಇನ್ನು ಹೆಂಗಸರು ಯಾವುದೇ ಕಾರಣಕ್ಕೂ ಸೊಂಟದಿಂದ ಕೆಳಭಾಗದಲ್ಲಿ ಯಾವುದೇ ರೀತಿಯ ಚಿನ್ನಾಭರಣವನ್ನು ಧರಿಸಬಾರದು
ಇದು ಬಹಳ ಕೆಟ್ಟ ಪರಿಸ್ಥಿತಿಯನ್ನು ತಂದುಕೊಡುತ್ತದೆ.
* ಮದುವೆಯಾದ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಖಾಲಿ ಹಣೆಯಲ್ಲಿ ಇರಬಾರದು ಹಾಗೂ ಎಲ್ಲಿಗೂ ಹೋಗಬಾರದು ಇದರಿಂದ ಗಂಡನ ಆಯಸ್ಸು ಕುಂಠಿತವಾಗುತ್ತಿದೆ ಎಂದು ಹೇಳಲಾಗುತ್ತದೆ.
ಇನ್ನು ಮದುವೆಯಾದ ಪ್ರತಿ ಹೆಂಗಸು ಕರಿಮಣಿಯನ್ನು ಧರಿಸಲೇಬೇಕು ಇಲ್ಲದಿದ್ದರೆ ಗಂಡನ ಆರೋಗ್ಯದಲ್ಲಿ ಏರುಪೇರು ಆಗುವುದಂತು ಕಟ್ಟಿಟ್ಟ ಬುತ್ತಿಯಂತೆ.
ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.
#Nk