ಕನ್ನಡ ಚಿತ್ರರಂಗದ ಹೆಮ್ಮೆಯ ನಟರಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಕೂಡ ಒಬ್ಬರು. ತಮ್ಮ ಅದ್ಭುತ ನಟನೆಯ ಮೂಲಕ 90 ರ ದಶಕದಲ್ಲಿ ಅದೆಷ್ಟೋ ಜನರ ನಿದ್ದೆ ಗೇಡಿಸಿದ್ದಾರೆ ನಟ ರಾಘವೇಂದ್ರ ರಾಜ್ ಕುಮಾರ್. ಇನ್ನು ಒಂದಾದ ಮೇಲೆ ಒಂದು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಚಂದನವನದ ಅದ್ಭುತ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ನಟ ರಾಘವೇಂದ್ರ ರಾಜ್ ಕುಮಾರ್ ಅವರು ಇನ್ನು ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಅಷ್ಟರ ಮಟ್ಟಿಗೆ ಆಕ್ಟಿವ್ ಆಗಿಲ್ಲ ಏಕೆಂದರೆ ಅವರ ಆರೋಗ್ಯ ಅಚಾನಕ್ಕಾಗಿ ಅದಗೆಟ್ಟಿತ್ತು, ಆ ಕಾರಣದಿಂದ ರಾಘಣ್ಣ ಅವರು ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದು ಬಿಟ್ಟರು.
ಇನ್ನು ಇತ್ತೀಚೆಗೆ ಸಿನಿಮಾರಂಗದಲ್ಲಿ ಮತ್ತೆ ಆಕ್ಟಿವ್ ಆಗಿರುವ ರಾಘಣ್ಣ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಮತ್ತೆ ಸಿನಿಮಾರಂಗದ ಕಡೆಗೆ ಮುಖ ಮಾಡಿದ್ದಾರೆ. ಇನ್ನು ರಾಘಣ್ಣ ಮತ್ತೆ ಕಮ್ ಬ್ಯಾಕ್ ಮಾಡಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿದೆ.
ಇತ್ತೀಚೆಗೆ ದೊಡ್ಮನೆಯಲ್ಲಿ ಯಾರು ಊಹಿಸದ ಒಂದು ಘಟನೆ ನಡೆಯಿತು. ಹೌದು ಕರುನಾಡ ಕಂದ ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಹೊರಟು ಹೋದರು. ಇನ್ನು ಅಂದಿನಿಂದ ದೊಡ್ಮನೆಯಲ್ಲಿ ದುಃಖ ಮನೆ ಮಾಡಿ ಬಿಟ್ಟಿದೆ.
ರಾಘಣ್ಣ ಹಾಗೂ ಶಿವಣ್ಣ ಇಬ್ಬರೂ ಯಾವುದೇ ಕಾರ್ಯಕ್ರಮಕ್ಕೆ ಹೋದರು ಅಲ್ಲಿ ಅಪ್ಪು ಅವರನ್ನು ನೆನೆದು ಕಣ್ಣೀರು ಹಾಕುತ್ತಾರೆ. ಇನ್ನು ರಾಘಣ್ಣ ಆ ದೇವರು ಅಪ್ಪು ಬದಲಿಗೆ ನನ್ನ ಕರೆದುಕೊಂಡು ಹೋಗಿದ್ದರೆ ಎಷ್ಟೋ ಚೆನ್ನಾಗಿ ಇರುತ್ತಿತ್ತು ಎಂದು ಹಲವು ಬಾರಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
ಇನ್ನು ಇದೀಗ ರಾಘಣ್ಣ ಒಂದು ಪುಟ್ಟ ಮಗುವಿನ ಜೊತೆಗೆ ಮಗುವಾಗಿ ಆಟವಾಡುತ್ತಿರುವ ವೀಡಿಯೊ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹೌದು ರಾಘಣ್ಣ ಮನೆಗೆ ಒಂಡಿ ಪುಟ್ಟ ಮಗು ಬಂದಿದ್ದು, ಆ ಮಗುವಿನ ಮುಂದೆ ರಾಘಣ್ಣ ಹಾಡು ಹೇಳುತ್ತಾ ಸಮಯ ಕಳೆಯುತ್ತಿದ್ದಾರೆ.
ಅಪ್ಪು ಅವರ ನೀನೇ ರಾಜಕುಮಾರ ಹಾಡನ್ನು ರಾಘಣ್ಣ ಆ ಮಗುವಿನ ಮುಂದೆ ಹಾಡುತ್ತಿರುವ ವೀಡಿಯೊ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..