ಯಶ್, ಸುದೀಪ್, ದರ್ಶನ್ ಬಗ್ಗೆ ನಟಿ ನಿಶ್ವಿಕಾ ನಾಯ್ಡು ಹೇಳಿದ್ದೇನು?.. ವಿಡಿಯೋ ನೋಡಿ..

ಸ್ಯಾಂಡಲವುಡ್

ಸ್ಯಾಂಡಲ್ವುಡ್ ನಟಿ ನಿಶ್ವಿಕಾ ನಾಯ್ಡು, ತಮ್ಮ ಅದ್ಭುತ ನಟನೆ ಹಾಗೂ ತಮ್ಮ ಗ್ಲಾಮರ್ ನ ಮೂಲಕ ಸಾಕಷ್ಟು ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ನಟಿ ನಿಶ್ವಿಕಾ ನಾಯ್ಡು ಕರ್ನಾಟಕದಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿ ಸಹ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

ಸ್ಯಾಂಡಲ್ವುಡ್ ನಲ್ಲಿ ನಟಿ ನಿಶ್ವಿಕಾ ಒಂದಾದ ಮೇಲೆ ಒಂದು ಬ್ಲಾಕ್ ಬಾಸ್ಟರ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ನಟಿ ನಿಶ್ವಿಕಾ ಅವರು ಇದೀಗ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಮೂಲತಃ ಬೆಂಗಳೂರಿನವರಾದ ನಟಿ ನಿಶ್ವಿಕಾ ನಾಯ್ಡು, ಚಿಕ್ಕವಯಸ್ಸಿನಲ್ಲೇ ನಟಿಯಾಗ ಬೇಕು ಎಂಬ ಕನಸ್ಸನ್ನು ಕಟ್ಟಿಕೊಂಡಿದ್ದರಂತೆ. ಆ ಕನಸ್ಸಿನ ಕಡೆಗೆ ಪಯಣ ನಡೆಸಿದ ನಿಶ್ವಿಕಾ ಅವರಿಗೆ ಸಿಕ್ಕ ಮೊದಲ ಅವಕಾಶ, ಕನ್ನಡದ ವಾಸು ನಾನ್ ಪಕ್ಕ ಕಮರ್ಷಿಯಲ್ ಸಿನಿಮಾ.

2018 ರಲ್ಲಿ ತೆರೆಕಂಡ ಅಜಿತ್ವಾಸನ್ ಉಗ್ಗಿನ ಅವರ ವಾಸು ನಾನ್ ಪಕ್ಕ ಕಮರ್ಶಿಯಲ್ ಸಿನಿಮಾದಲ್ಲಿ ಅನಿಷ್ ತೇಜಸ್ವರ್ ಅವರಿಗೆ ನಾಯಕಿಯಾಗಿ ಅಭಿನಯಿಸುವ ಮೂಲಕ ನಟಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ಯಶಸ್ಸಿನ ರುಚಿಕಂದ ನಿಶ್ವಿಕಾ ನಂತರ ತಿರುಗಿ ನೋಡಲೇ ಇಲ್ಲ.

ಇನ್ನು ಸಿನಿಮಾರಂಗದಲ್ಲಿ ಒಂದಾದ ಮೇಲೆ ಒಂದು ಹಿಟ್ ಸಿನಿಮಾಗಳಲ್ಲಿ ಅಭಿನಹಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ನಟಿ ನಿಶ್ವಿಕಾ ಇದೀಗ ಒಂದು ಮಾಧ್ಯಮದ ಸಂದರ್ಶನ ಒಂದರಲ್ಲಿ ಕನ್ನಡದ ಸ್ಟಾರ್ ನಟರ ಬಗ್ಗೆ ಹೇಳಿರುವ ಹೇಳಿಕೆ ಸದ್ಯ ವೈರಲ್ ಆಗುತ್ತಿದೆ.

ಗುರುಶಿಶ್ಯರು ಸಿನಿಮಾದಲ್ಲಿ ಚರಣ್ ಅವರಿಗೆ ನಿಶ್ವಿಕಾ ನಾಯಕಿಯಾಗಿ ಅಭಿನಯಿಸಿದ್ದು, ಇದೀಗ ಪ್ರಚಾರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈ ವೇಳೆ ಮಾದ್ಯಮದವರು ನಾವು ಕೆಲವು ಸ್ಟಾರ್ ನಟರ ಹೆಸರುಗಳನ್ನು ಹೇಳುತ್ತೇವೆ, ಇವರು ಯಾವುದಕ್ಕೆ ಗುರು ಎಂದು ನೀವು ಹೇಳಬೇಕು ಎಂದಿದ್ದಾರೆ.

ಇದಕ್ಕೆ ನಟಿ ಶಿವಣ್ಣ ಡ್ಯಾನ್ಸ್ ಗೆ ಗುರು, ಅಪ್ಪು ಅವರು ಯಾವುದಕ್ಕೂ ಗುರು ಅಲ್ಲ ಅವರು ಅದಕ್ಕೂ ಮೇಲೆ ಅವರು ದೇವರು, ಸುದೀಪ್ ಅವರು ಸ್ಟೈಲ್ ಗೆ ಗುರು, ಯಶ್ ಹಾಗೂ ದರ್ಶನ್ ಅವರು ಮಾಸ್ ಗೆ ಗುರು ಎಂದಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *