ಬಿಗ್ ಬಾಸ್ ಕನ್ನಡ ಸೀಸನ್ 5 ರಲ್ಲಿ ಸೆಲೆಬ್ರೆಟಿಗಳ ಜೊತೆಗೆ ಕಾಮನ್ ಮ್ಯಾನ್ ಗಳಿಗೂ ಸಹ ಬಿಗ್ ಮನೆಗೆ ಹೋಗುವ ಅವಕಾಶ ನೀಡಲಾಗಿತ್ತು. ಇನ್ನು ತನಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಯಾವ ದೊಡ್ಡ ಸ್ಟಾರ್ ನಟಿಗೂ ಕಡಿಮೆ ಇಲ್ಲದಂತೆ ಮಿಂಚುತ್ತಿದ್ದಾರೆ ನಿವೇದಿತಾ ಗೌಡ.
ಇನ್ನು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತಮ್ಮ ಕನ್ನಡ ಮಾತನಾಡುವ ವಿಭಿನ್ನ ಶೈಲಿಯ ಮೂಲಕವೇ ನಿವೇದಿತಾ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಇನ್ನು ಬಿಗ್ ಬಾಸ್ ಮನೆಯಲ್ಲಿ ಕೂಡ ತನ್ನ ಗ್ಲಾಮರ್ ಹಾಗೂ ಆಟದ ಶೈಲಿ ಜನರಿಗೆ ಬಹಳ ಇಷ್ಟವಾಗಿತ್ತು.
ಬಿಗ್ ಬಾಸ್ ಮನೆಗೆ ಕಾಮನ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು, ಬೇರೆ ಎಲ್ಲಾ ಸ್ಪರ್ಧಿಗಳಿಗೆ ಸರಿಯಾದ ಟಕ್ಕರ್ ನೀಡಿ ಫಿನಾಲೆ ಪ್ರವೇಶಿಸಿದರು, ನಿವೇದಿತಾ ಗೌಡ. ಇನ್ನು ನಟಿ ನಿವೇದಿತಾ ಗೌಡ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಒಂದೆಲ್ಲಾ ಒಂದು ವಿಷಯಕ್ಕೆ ಸುದ್ದಿಯಾಗುತ್ತಿರುತ್ತಾರೆ.
ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ನಟಿ ನಿವೇದಿತಾ ಗೌಡ ಆಗಾಗ ತಮ್ಮ ಫೋಟೋ ಮತ್ತು ರೀಲ್ಸ್ ವಿಡಿಯೊಗಳನ್ನು ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಸದಾ ಮನೋರಂಜನೆ ನೋಡುತ್ತಿರುತ್ತಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಸ್ನೇಹಿತರಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ.
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮದುವೆಯಾಗುವುದಾಗಿ ಘೋಷಿಸಿ, ತಮ್ಮ ಕುಟುಂಬಸ್ತರ ಸಮುಖದಲ್ಲಿ ಮದುವೆಯಾದರು. ಇನ್ನು ಮದುವೆಯಾದ ನಂತರ ನಿವೇದಿತಾ ಗೌಡ ಇನ್ನಷ್ಟು ಆಕ್ಟಿವ್ ಆಗಿದ್ದಾರೆ. ಇನ್ನು ಕಲರ್ಸ್ ಕನ್ನಡದ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ಇನ್ನು ಇತ್ತೀಚೆಗೆ ನಿವೇದಿತಾ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ, ಜನರ ಆಯ್ಕೆ ಸುತ್ತಿನಲ್ಲಿ ಮಿಸೆಸ್ ಇಂಡಿಯಾ ಕಿರೀಟ ಗೆದ್ದಿದ್ದಾರೆ. ಇನ್ನು ಸದ್ಯ ನಿವೇದಿತಾ ಅವರಿಗೆ ಸಾಲು ಸಾಲು ಸಿನಿಮಾ ಆಫ್ಹರ್ಸ್ ಕೂಡ ಹುಡುಕಿಕೊಂಡು ಬರುತ್ತಿದ್ದು, ಕಥೆ ಚೆನ್ನಾಗಿದ್ದರೆ ಸಿನಿಮಾ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ.
ಇನ್ನು ನಿವೇದಿತಾ ಗೌಡ ಇದೀಗ ಹೊಸದೊಂದು ವಿಡೀಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಆಕಾಶ ನೀಲಿ ಬಣ್ಣದ ಸೀರೆಯುಟ್ಟು ನಿವೇದಿತಾ ಮಿಂಚಿದ್ದಾರೆ. ಈ ಉಡುಪಿನಲ್ಲಿ ನಿವೇದಿತಾ ತುಂಬಾ ಮುದ್ದಾಗಿ ಕಾಣಿಸುತ್ತಿದ್ದು, ನೆಟ್ಟಿಗರು ವಿಡಿಯೋಗೆ ಕ್ಲೀನ್ ಬೋ,ಲ್ಡ್ ಆಗಿದ್ದಾರೆ.