ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ಹಾಗೂ ಅಮೋಘ ನಟನೆಯ ಮೂಲಕ ಸಾಕಷ್ಟು ಹೆಸರು ಮಾಡಿರುವ ನಟಿ ಮೇಘನಾ ರಾಜ್. ನಟಿ ಮೇಘನಾ ರಾಜ್ ಕನ್ನಡದ ಜೊತೆಗೆ ಬೇರೆ ಭಾಷೆಗಳಲ್ಲಿ ಅಂದರೆ ಮಲಯಾಳಂ, ತೆಲುಗು ಹಾಗೂ ತಮಿಳು ಸಿನಿಮಾರಂಗದಲ್ಲಿ ಸಹ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಸ್ಯಾಂಡಲ್ವುಡ್ ನ ಉತ್ತಮ ನಟರಲ್ಲಿ ಒಬ್ಬರಾಗಿದ್ದ ಚಿರು ಅವರನ್ನು ನಟಿ ಮೇಘನಾ ರಾಜ್ ಪ್ರೀತಿಸಿ ಮದುವೆಯಾದರು. ಸರ್ಜಾ ಕುಟುಂಬಕ್ಕೆ ಸೊಸೆಯಾಗಿ ಬಂದ ಮೇಘನಾ ರಾಜ್ ಬದುಕಿನಲ್ಲಿ ಅದ್ಯಾವ ಬಿರುಗಾಳಿ ಬೀಸಿತೋ ಗೊತ್ತಿಲ್ಲ. ಮೇಘನಾ ರಾಜ್ ಖುಷಿ ತುಂಬಾ ದಿನ ಉಳಿಯಲಿಲ್ಲ.
ಚಿರಂಜೀವಿ ಸರ್ಜಾ ಹೃ**ದಯಾಘಾತದಿಂದ ನಮ್ಮೆನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಹೋದರು. ಇನ್ನು ಚಿರು ನಮ್ಮನ್ನು ಬಿಟ್ಟು ಹೋದಾಗ ನಟಿ ಮೇಘನಾ ರಾಜ್ ತುಂಬು ಗ*ರ್ಭಿಣಿ. ಮೇಘನಾ ರಾಜ್ ಬದುಕಿನಲ್ಲಿ ಅವರ ಮಗ ರಾಯನ್ ಹುಟ್ಟುವ ಮೂಲಕ ಮತ್ತೆ ಅವರ ಬದುಕಿಗೆ ಒಂದು ಅರ್ಥ ಸಿಕ್ಕಿದಂತಾಯಿತು.
ಇನ್ನು ಮಗನ ಲಾಲನೆ ಪಾಲನೆಯಲಿದ್ದ ಮೇಘನಾ ರಾಜ್ ಇತ್ತೀಚೆಗೆ ನಟಿ ಮತ್ತೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ನಟಿ ಮೇಘನಾ ರಾಜ್ ಸದ್ಯ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಸಿನಿಮಾರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇನ್ನು ನಟಿ ಸಿನಿಮಾಗಳ ಜೊತೆಗೆ ತಮ್ಮ ಮಗನ ಜೊತೆಗೂ ಸಹ ಸಮಯವನ್ನು ಕಳೆಯುತ್ತಾರೆ.
ಇನ್ನು ಚಿರು ಅವರನ್ನು ಕಳೆದುಕೊಂಡ ನೋವಿನಲ್ಲಿದ್ದ ಸರ್ಜಾ ಕುಟುಂಬಕ್ಕೆ ಧೃವ ಸರ್ಜಾ ಹಾಗೂ ಪ್ರೇರಣಾ ಅವರು ಮತ್ತೊಂದು ಸಿಹಿ ಸುದ್ದಿ ನೀಡಿದರು. ಪ್ರೇರಣಾ ಅವರು ಗ**ರ್ಭಿಣಿಯಾಗಿದ್ದು, ಈ ವಿಷಯವನ್ನು ಧೃವ ಸರ್ಜಾ ಸೋಷಿಯಲ್ ಮಿಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಬಹಿರಂಗ ಪಡಿಸಿದ್ದರು.
ಇನ್ನು ಇದೀಗ ಪ್ರೇರಣಾ ಅವರಿಗೆ 8 ತಿಂಗಳು ತುಂಬಿದ್ದು, ಧೃವ ಸರ್ಜಾ ಹಾಗೂ ಕುಟುಂಬದವರು ಸೇರಿ ಅವರಿಗೆ ಸೀಮಂತ ಶಾಸ್ತ್ರವನ್ನು. ಸೀಮಂತ ಶಾಸ್ತ್ರವನ್ನು ಬೆಂಗಳೂರಿನ ಕಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ಮಾಡಲಾಗಿತ್ತು.
ಇನ್ನು ಈ ಸಂಭ್ರಮಕ್ಕೆ ಸಿನಿಮಾರಂಗದ ಅನೇಕ ಕಲಾವಿದರು ಭಾಗಿಯಾಗಿದ್ದರು. ಇನ್ನು ಮೇಘನಾ ರಾಜ್ ಕೂಡ ಪ್ರೇರಣಾ ಅವರ ಸೀಮಂತಕ್ಕೆ ಬಂದಿದ್ದು, ಭರ್ಜರಿ ಉಡುಗೊರೆಯನ್ನೇ ತಂದಿದ್ದಾರೆ. ಇನ್ನು ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.