ಚಿಕ್ಕ ವಯಸ್ಸಿನಲ್ಲೇ ಕೆಲವು ಮಕ್ಕಳು ತಮ್ಮ ತಂದೆ ತಾಯಿಯ ನೆರಳಿನಿಂದ ಹೊರಬಂದು ತಮ್ಮದ್ದು ಏನಾದರೂ ಸಾಧಿಸಬೇಕು ಎನ್ನುವ ಛಲದಲ್ಲಿರುತ್ತಾರೆ. ಇನ್ನು ತಮ್ಮ ಹೆಸರಿನಿಂದ ತಮ್ಮ ಪೋಷಕರನ್ನು ಗುರುತಿಸಬೇಕು ಎಂದು ಚಿಕ್ಕ ವಯಸ್ಸಿನಲ್ಲಿಯೇ ದುಡಿಯಲು ಸಹ ಶುರು ಮಾಡುತ್ತಾರೆ.
ಇನ್ನು ಚಿತ್ರರಂಗದಲ್ಲಿ ಕೂಡ ಕೆಲವರು ಅಪ್ಪ ಹಾಕಿದ ಆಲದಮರ ಎಂದುಕೊಂಡರೆ, ಇನ್ನು ಕೆಲವರು ತಮ್ಮ ಸ್ವಂತ ಕಷ್ಟದ ಮೂಲಕ ಮೇಲೆ ಬರಲು ಪ್ರಯತ್ನಿಸುತ್ತಾರೆ. ಇಂಥವರ ಸಾಲಿಗೆ ಇದೀಗ ಪುಟ್ಟ ಹುಡುಗಿ, ತನ್ನ ಮಾತಿನ ಮೂಲಕ ಅದೆಷ್ಟೋ ಜನರ ಮನ ಗೆದ್ದಿರುವ ವಂಶಿಕಾ ಅಂಜನಿ ಕಶ್ಯಪ ಸೇರಿಕೊಂಡಿದ್ದಾರೆ.
ಮಾಸ್ಟರ್ ಆನಂದ್ ಮಗಳು ವಂಶಿಕಾ ಇದೀಗ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ ಅದೆಷ್ಟೋ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಹಾಗೂ ವಂಶಿಕಾ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಮೂಲಕ ವಂಶಿಕಾ ಕನ್ನಡ ಜನತೆಯ ಮನೆ ಮಾತಾಗಿದ್ದಾರೆ. ತನ್ನ ಪಟ ಪಟ ಮಾತಿನ ಮೂಲಕ ವಂಶಿಕಾ ಸಕತ್ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಇನ್ನು ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮವನ್ನು ಗೆಲ್ಲುವ ಮೂಲಕ ವಂಶಿಕಾ ಇನ್ನಷ್ಟು ಹೆಸರು ಪಡೆದುಕೊಂಡಿದ್ದಾರೆ. ಇನ್ನು ಇದೀಗ ವಂಶಿಕಾ ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ಕಾರ್ಯಕ್ರಮ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಕ್ಕೂ ಕೂಡ ಸ್ಪರ್ಧಿಯಾಗಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ತಮ್ಮ ಆದ್ಭುತ ನಟನೆ ಹಾಗೂ ಕಾಮಿಡಿ ಟೈಮಿಂಗ್ ನ ಮೂಲಕ ವಂಶಿಕಾ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ.
ಇನ್ನು ವಂಶಿಕಾ ಇಷ್ಟು ಚಿಕ್ಕ ವಯಸ್ಸಿನಲ್ಲೇ ಹಲವಾರು ರಿಯಾಲಿಟಿ ಶೋಗಳ ಜೊತೆಗೆ ಜಾಹಿರಾತು ಹಾಗೂ ಸಿನಿಮಾಗಳಲ್ಲಿ ಸಹ ಕಾಣಿಸಿಕೊಳಲಿದ್ದಾರೆ. ಹೌದು ವಂಶಿಕಾ ಇದೀಗ ಸಿನಿಮಾರಂಗಕ್ಕೂ ಕೂಡ ಪಾದಾರ್ಪಣೆ ಮಾಡಲಿದ್ದಾರೆ ಎನ್ನುವ ವಿಷಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ವಂಶಿಕಾ ಹಾಗೂ ಮೇಘನಾ ಜೊತೆಗಿನ ಒಂದು ವಿಡಿಯೋ ಸದ್ಯ ಸಕತ್ ವೈರಲ್ ಆಗುತ್ತಿದೆ. ಮೇಘನಾ ರಾಜ್ ಹಾಗೂ ವಂಶಿಕಾ ಇಬ್ಬರೂ ಆಟವಾಡುತ್ತಿರುವ ವಿಡಿಯೋ ಇದೀಗ ಸಕತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..