ಬಿಗ್ ಬಾಸ್ ಓಟಿಟಿ ಕನ್ನಡ ಕಾರ್ಯಕ್ರಮಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಾಕಷ್ಟು ವಿಚಾರಗಳಿಂದ ಈ ಕಾರ್ಯಕ್ರಮ ನೋಡುಗರ ಮನ ಸೆಳೆಯುತ್ತಿದೆ. ದೊಡ್ಮನೆಯಲ್ಲಿ ತಮ್ಮ ನಡೆ ನುಡಿಯಿಂದ ಸಖತ್ ಹೈಲೈಟ್ ಆಗಿರುವ ಸ್ಪರ್ಧಿ ಸೋನು ಶೀನಿವಾಸ್ ಗೌಡ. ಇದೀಗ ಸೋನು ಶ್ರೀನಿವಾಸ್ ಗೌಡ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.
ಸೋನು ಶ್ರೀನಿವಾಸ್ ಗೌಡ ಇದೀಗ ಆರ್ಯವರ್ಧನ್ ಗುರೂಜಿ ಅವರನ್ನು ಕಳ್ಳ ಸ್ವಾಮೀಜಿ ಎಂದು ಹೇಳಿದ್ದಾರೆ. ಮನೆಗೆ ಬಂದಾಗಿನಿಂದ ಸೋನು ಶ್ರೀನಿವಾಸ್ ಗೌಡ ಒಂದೆಲ್ಲಾ ಒಂದು ರೀತಿ ಕಿರಿಕ್ ಮಾಡುತ್ತಲೇ ಬಂದಿದ್ದಾರೆ. ಇದೀಗ ಮತ್ತೊಮ್ಮೆ ಸೋನು ಕಿರಿಕ್ ಮಾಡಿಕೊಂಡಿದ್ದಾರೆ.
ಆರ್ಯವರ್ಧನ್ ಗುರೂಜಿ ಅವರಿಗೆ ರೂಪೇಶ್ ಶೆಟ್ಟಿ ಅವರು ಹೆಡ್ ಮಸಾಜ್ ಮಾಡುವಾಗ ಮನೆಮಂದಿಯಲ್ಲಾ ಒಟ್ಟಿಗೆ ಕುಳಿತಿದ್ದರು. ಈ ವೇಳೆ ಸೋನು ಶ್ರೀನಿವಾಸ್ ಗೌಡ ಅವರು ಗುರೂಜಿ ಅವರಿಗೆ ಡವ್ ರಾಜ್ ಎಂದು ಹೇಳಿದ್ದಾರೆ. ಇದಕ್ಕೆ ಗುರೂಜಿ ಈ ರೀತಿ ಮಾತನಾಡಬೇಡ ಎಂದ್ದಿದ್ದಾರೆ.
ಇದಕ್ಕೆ ಸೋನು ಶ್ರೀನಿವಾಸ್ ಗೌಡ ಇನ್ನೇನು ಕಳ್ಳ ಸ್ವಾಮೀಜಿ ಎಂದು ಕರಿಬೇಕಾ ಎಂದಿದ್ದಾರೆ. ಈ ವೇಳೆ ಅಲ್ಲೇ ಹಿಂದೆ ಕುಳಿತಿದ್ದ ಸಾನಿಯಾ ಅವರು ದೊಡ್ಡವರು ಈ ರೀತಿ ಎಲ್ಲ ಮಾತನಾಡಬಾರದು ಎಂದಿದ್ದಾರೆ. ಇದಕ್ಕೆ ಸೋನು ನೀನು ಮದ್ಯ ಮಾತನಾಡಬೇಡ ಎಂದು ಗದರಿಸಿದ್ದಾರೆ.
ಇನ್ನು ಸೋನು ಮಾತಿಗೆ ಸಾನಿಯಾ ಕೂಡ ಖಡಕ್ ಆಗಿ ಉತ್ತರಿಸಿದ್ದಾರೆ. ನಾನು ನಿನ್ನ ಮನೆ ನಾಯಿನಾ ಹೊಗೆಲೆ ಎಂದಿದ್ದಾರೆ ಸಾನಿಯಾ. ನೀನು ಆಡಿದ ಮಾತು ಸರಿ ಇಲ್ಲ, ಅವರನ್ನು ಫಾಲೋ ಮಾಡುವ ಸಾಕಷ್ಟು ಜನ ಇದ್ದಾರೆ. ಅವರಿಗೂ ಬೇಸರವಾಗುತ್ತದೆ ಎಂದು ಜಯಶ್ರೀ ಕೂಡ ಈ ವೇಳೆ ಧ್ವನಿ ಗೂಡಿಸಿದ್ದಾರೆ.
ಬಳಿಕ ಗುರೂಜಿ ಬಳಿ ಸೋನು ಕ್ಷಮೆ ಕೇಳಿದ್ದಾರೆ. ಮೊದಲಿಗೆ ತಮಾಷೆಯಿಂದ ಆಡಿದ ಮಾತು ನಂತರ ಗಲಾಟೆಯಲ್ಲಿ ಮುಕ್ತಾಯಗೊಂಡಿದೆ. ಸೋನು ಮಾತಿಗೆ ಗುರೂಜಿ ಕೂಡ ಬೇಸರಗೊಂಡಿದ್ದಾರೆ.ತಮ್ಮ ವೃತ್ತಿಯ ಬಗ್ಗೆ ಸೋನು ಮಾತನಾಡಿದ್ದು ತಪ್ಪು ಎಂದು ಹೇಳಿದ್ದಾರೆ.
ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ ಮತ್ತು ಈ ಬಾರಿಯ ಬಿಗ್ ಬಾಸ್ ಓಟಿಟಿ ಸೀಸನ್ ಯಾರು ಗೆಲ್ಲಬೇಕು ಹಾಗೂ ಈ ಮನೆಯಿಂದ ದೊಡ್ಮನೆಗೆ ಯಾರೆಲ್ಲಾ ಹೋಗಬೇಕು ಎನ್ನುವುದನ್ನು ಕಾಮೆಂಟ್ ಮಾಡಿ ತಿಳಿಸಿ..