ಸಾನಿಯಾ ಅಯ್ಯರ್ ಗೆ ಸಾನಿಯಾ ಶೆಟ್ಟಿ ಎಂದು ಕರೆದರೆ ಇಷ್ಟ ಅಂತೆ! ಯಾಕೆ ಗೊತ್ತಾ ನೋಡಿ??..

Bigboss News

ಬಿಗ್ ಬಾಸ್ ಮನೆಯಲ್ಲಿ ನಾವು ಹಲವಾರು ಬಾರಿ ಜಗಳಗಳು, ಮನಸ್ತಾಪಗಳ ಜೊತೆಗೆ ಪ್ರೀತಿ ಹಾಗೂ ಸ್ನೇಹವನ್ನು ಸಹ ನೋಡಿದ್ದೇವೆ. ಇನ್ನು ಈ ಬಾರಿಯ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ನಾವು ಸಾನಿಯಾ ಐಯರ್ ಹಾಗೂ ರೂಪೇಶ್ ಶೆಟ್ಟಿ ನಡುವಿನ ಉತ್ತಮ ಸ್ನೇಹವನ್ನು ನೋಡಿದ್ದೆವು.

ಸಾನಿಯಾ ಹಾಗೂ ರೂಪೇಶ್ ಇಬ್ಬರೂ ಬಿಗ್ ಬಾಸ್ ಓಟಿಟಿ ಮನೆಯಲ್ಲಿ ಸ್ನೇಹಿತರಾಗಿ ತುಂಬಾ ಆತ್ಮೀಯದಿಂದ ಇದ್ದರು. ಇನ್ನು ಈ ಇಬ್ಬರ ಬಗ್ಗೆ ಮನೆಯಲ್ಲಿ ಸಾಕಷ್ಟು ಮಾತುಗಳು ಬಂದರೂ ಕೂಡ ಅದ್ಯಾವುದಕ್ಕೂ ಈ ಇಬ್ಬರೂ ತಲೆ ಕೆಡಿಸಿಕೊಳ್ಳದೆ ತಮ್ಮ ಆಟದ ಬಗ್ಗೆ ಘಮನ ಹರಿಸುತ್ತಿದ್ದರು.

ಇನ್ನು ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ಈ ಇಬ್ಬರ ನಡುವಿನ ಸ್ನೇಹ ಮನೆಯ ಹೊರಗಿನ ಜನಗಳಿಗೂ ಸಹ ತುಂಬಾ ಇಷ್ಟವಾಗಿತ್ತು. ಇನ್ನು ಈ ಇಬ್ಬರ ಹೆಸರಿನಲ್ಲಿ ಹಲವಾರು ಫ್ಯಾನ್ ಪೇಜ್ ಗಳು ಕೂಡ ಹುಟ್ಟಿಕೊಂಡಿದೆ. ಇನ್ನು ಇದೀಗ ಸಾನಿಯಾ ತಮ್ಮನ್ನು ಸಾನಿಯಾ ಶೆಟ್ಟಿ ಎಂದು ಕರೆದರೆ ಇಷ್ಟವಾಗುತ್ತದೆ ಎಂದು ಹೇಳಿದ ಮಾತು ಸಖತ್ ವೈರಲ್ ಆಗುತ್ತಿದೆ.

ಇನ್ನು ಬಿಗ್ ಬಾಸ್ ಓಟಿಟಿ ಗ್ರಾಂಡ್ ಫಿನಾಲೆ ವೇದಿಕೆ ಮೇಲೆ ಸಾನಿಯಾ ಅವರಿಗೆ ಕಿಚ್ಚ ಸುದೀಪ್ ನೆನ್ನೆ ರಾತ್ರಿ ನಿಮಗೆ ಸರಿಯಾಗಿ ನಿದ್ದೆ ಬಂತ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಸಾನಿಯಾ ಹೌದು ಸರ್ ನಾನು ಮತ್ತೆ ರೂಪಿ ರಾತ್ರಿ ಪೂರ್ತಿ ಮಾತನಾಡಿ ಕೊನೆಯಲ್ಲಿ ಮಲ್ಗಿದ್ವಿ ಎಂದಿದ್ದಾರೆ. ಇದಕ್ಕೆ ಸುದೀಪ್ ರೂಪಿ ಯಾರು ಎಂದು ಪ್ರಶ್ನಿಸಿದ್ದಾರೆ.

ರೂಪಿ ಎಂದರೆ ರೂಪೇಶ್ ಸರ್ ಎಂದು ಸಾನಿಯಾ ಉತ್ತರಿಸಿದ್ದಾರೆ. ಮಾತು ಮುಂದುವರೆಸಿದ ಸುದೀಪ್, ರೂಪಿ ನಿಮಗೆ ಏನೆಂದು ಕರೆದರೆ ಇಷ್ಟ ಆಗುತ್ತೆ ಎಂದಾಗ ಸಾನಿಯಾ ಒಂದು ಸಲ ಅವನು ಸಾನಿಯಾ ಶೆಟ್ಟಿ ಅಂದಿದ್ದ ಅದು ನನಗೆ ತುಂಬಾ ಇಷ್ಟ ಆಗಿತ್ತು ಎಂದಿದ್ದಾರೆ.

ಇನ್ನು ಇಬ್ಬರ ಕಾಲೆಳೆಯುತ್ತಾ ಸುದೀಪ್ ನಾನು ಇಲ್ಲಿ ಬೇರೆ ಪ್ರೋಫ್ಹೇಶನ್ ಶುರು ಮಾಡಿದ್ದೇನೆ ಎನಿಸುತ್ತಿದೆ ಎಂದಿದ್ದಾರೆ. ಇದಕ್ಕೆ ಮಿಕ್ಕ ಎಲ್ಲಾ ಸ್ಪರ್ಧಿಗಳು ಕೂಡ ನಕ್ಕಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ಓಟಿಟಿಯನ್ನು ರೂಪೇಶ್ ಶೆಟ್ಟಿ ಗೆದಿದ್ದಾರೆ.

ಇನ್ನು ಬಿಗ್ ಬಾಸ್ ಕನ್ನಡ ಓಟಿಟಿ ಶುರುವಾಗಿ ಇದೀಗ ಮುಕ್ತಾಯ ಕೂಡ ಗೊಂಡಿದೆ. ಬಿಗ್ ಬಾಸ್ ಕನ್ನಡ ಓಟಿಟಿ ಕಾರ್ಯಕ್ರಮದಿಂದ ಇದೀಗ ಸಾನಿಯಾ ಐಯರ್, ರೂಪೇಶ್ ಶೆಟ್ಟಿ, ರಾಕೇಶ್ ಹಾಗೂ ಸಂಖ್ಯಾ ಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಅವರು ಬಿಗ್ ಮನೆಗೆ ಎಂಟ್ರಿ ನೀಡಿದ್ದಾರೆ. ಇನ್ನು ಈ ನಾಲ್ಕು ಜನ ದೊಡ್ಮನೆಯಲ್ಲಿ ಮಿಕ್ಕ ಸ್ಪರ್ಧಿಗಳಿಗೆ ಯಾವ ರೀತಿ ಟಕ್ಕರ್ ಕೊಡುತ್ತಾರೆ ಎಂದು ಕಾದು ನೋಡಬೇಕು.

Leave a Reply

Your email address will not be published. Required fields are marked *