ನಟಿ ಅಮೂಲ್ಯ ಕನ್ನಡ ಚಿತ್ರರಂಗದ ಉತ್ತಮ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಅದ್ಭುತ ಹಾಗೂ ಅಮೋಘ ನಟನೆಯ ಜೊತೆಗೆ ತಮ್ಮ ಮುದ್ದು ಮುಖದ ಮೂಲಕ ಅದೆಷ್ಟೋ ಜನರ ಮನ ಗೆದ್ದಿದ್ದಾರೆ ನಟಿ ಅಮೂಲ್ಯ. ಇಂದಿಗೂ ಸಹ ನಟಿ ಅಮೂಲ್ಯ ಅವರ ಬೇಡಿಕೆ ಚಿತ್ರರಂಗದಲ್ಲಿ ಕಡಿಮೆ ಆಗಿಲ್ಲ.
ನಟಿ ಅಮೂಲ್ಯ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು ನಂತರ ತಮ್ಮ ಅದ್ಭುತ ಅಭಿನಯದ ಮೂಲಕ ನಟಿ ಅಮೂಲ್ಯ ಪೂರ್ಣ ಪ್ರಮಾಣದ ನಾಯಕಿಯಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಗುರುತಿಸಿಕೊಂಡರು.
ಈ ಸಿನಿಮಾದಲ್ಲಿ ಗಣೇಶ್ ಅಮೂಲ್ಯ ಅವರನ್ನು ಐಸು ಎಂದು ಕರೆಯುವ ದೃಶ್ಯ ಅದೆಷ್ಟೋ ಜನರ ಫೇವರೇಟ್ ಇಂದಿಗೂ ಸಹ ಅಮೂಲ್ಯ ಆ ಅವರನ್ನು ಅವರ ಅಭಿಮಾನಿಗಳು ಐಸು ಎಂದು ಪ್ರೀತಿಯಿಂದ ಕರೆಯುತ್ತಾರೆ. ಅಷ್ಟರ ಮಟ್ಟಿಗೆ ನಟಿ ಅಮೂಲ್ಯ ಹಾಗೂ ಗಣೇಶ್ ನಟಿಸಿದ್ದರು.
ಇನ್ನು ಚೆಲುವಿನ ಚಿತ್ತಾರ ಸಿನಿಮಾದ ನಂತರ ನಟಿ ಅಮೂಲ್ಯ ತಿರುಗಿ ನೋಡಲೇ ಇಲ್ಲ ಒಂದಾದ ಮೇಲೆ ಒಂದು ಬ್ಲಾಕ್ ಬಾಸ್ಟರ್ ಸಿನಿಮಾಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ನಟಿಸುವ ಮೂಲಕ ಚಿತ್ರರಂಗದ ಉತ್ತಮ ನಟಿಯಾಗಿ ಹೆಸರು ಮಾಡಿದ್ದಾರೆ.
ಇನ್ನು ನಟಿ ಅಮೂಲ್ಯ ಜಗದೀಶ್ ಎಂಬುವವರನ್ನು ಮದುವೆಯಾದ ಬಳಿಕ ನಟಿ ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದು ಬಿಟ್ಟಿದ್ದಾರೆ. ಇನ್ನು ನಟಿ ಅಮೂಲ್ಯ ಇತ್ತೀಚೆಗೆ ಎರಡು ಮುದ್ದಾದ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಇನ್ನು ಈ ವಿಷಯವನ್ನು ನಟಿ ಸೋಷಿಯಲ್ ಮಿಡಿಯಾದ ಮುಖಾಂತರ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು.
ನಟಿ ಅಮೂಲ್ಯ ಅವರು ಕೆಲವು ದಿನಗಳ ಹಿಂದೆ ತಮ್ಮ ಅವಳಿ ಮಕ್ಕಳ ಫೋಟೋವನ್ನು ಸೋಷಿಯಲ್ ಮಿಡಿಯಾದಲ್ಲಿ ರಿವೀಲ್ ಮಾಡಿದ್ದರು. ಇನ್ನು ಫೋಟೋದಲ್ಲಿನ ಮುದ್ದಾದ ಮಕ್ಕಳನ್ನು ನೋಡಿ ಎಲ್ಲರೂ ಫಿದಾ ಆಗಿದ್ದರು. ಸದ್ಯ ಈ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.
ಇನ್ನು ನಟಿ ಅಮೂಲ್ಯ ಹಾಗೂ ಜಗದೀಶ್ ಅವರ ಜೊತೆಗಿನ ಒಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಲವಾರು ಜನರು ಲೈಕ್ ಮತ್ತು ಶೇರ್ ಮಾಡುತ್ತಿದ್ದಾರೆ.ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…