ಬಿಗ್ ಬಾಸ್ ಓಟಿಟಿ ಕನ್ನಡ ಇದೀಗ ಮುಕ್ತಾಯಗೊಂಡು ತನ್ನ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಒಂದು ಅಧ್ಯಾಯ ಮುಗಿದರೆ ಇನ್ನೊಂದು ಶುರುವಾಗುತ್ತದೆ ಎನ್ನುವುದು ನಿಜ, ಇದೀಗ ಬಿಗ್ ಬಾಸ್ ಓಟಿಟಿ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 9 ಶೀಘ್ರದಲ್ಲೇ ಶುರುವಾದಲಿದೆ.
ಇನ್ನು ಈ ಬಾರಿಯ ಬಿಗ್ ಬಾಸ್ ಸೀಸನ್9 ಕ್ಕೆ ಬಿಗ್ ಬಾಸ್ ಓಟಿಟಿಯ ಸ್ಪರ್ಧಿಗಳಾದ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನಿಯಾ ಅಯ್ಯರ್ ಮಿಕ್ಕ ಸ್ಪರ್ಧಿಗಳ ಜೊತೆ ಎಂಟ್ರಿ ನೀಡಲಿದ್ದಾರೆ. ಇನ್ನು ಈ ಬಾರಿಯ ಸೀಸನ್ ಬೇರೆ ಎಲ್ಲಾ ಸೀಸನ್ ಗಳಿಗಿಂತ ವಿಭಿನ್ನವಾಗಲಿದೆಯಂತೆ.
ಇನ್ನು ಬಿಗ್ ಬಾಸ್ ಓಟಿಟಿಯಲ್ಲಿ ತನ್ನ ಚಟ ಪಟ ಮಾತಿನ ಮೂಲಕ ಎಲ್ಲರ ಘಮನ ಸೆಳೆದಿದ್ದ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ. ಸೋಷಿಯಲ್ ಮಿಡಿಯಾದಲ್ಲಿ ಟಿಕ್ ಟಾಕ್ ಹಾಗೂ ರೀಲ್ಸ್ ಮಾಡಿಕೊಂಡು ಜನಪ್ರಿಯತೆ ಪಡೆದುಕೊಂಡಿದ್ದ ಸೋನು ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸ್ಟಾರ್ ಆಗಿದ್ದಾರೆ.
ಇನ್ನು ಸೋಷಿಯಲ್ ಮಿಡಿಯಾದಲ್ಲಿ ಸಕತ್ ಟ್ರೋಲ್ ಆಗುತ್ತಾ ಕೇವಲ ನೆಗಟಿವ್ ಕಾಮೆಂಟ್ಸ್ ಪಡೆಯುತ್ತಿದ್ದ ಸೋನು, ಬಿಗ್ ಬಾಸ್ ಓಟಿಟಿ ಮನೆಯಲ್ಲಿ ತಮ್ಮನ್ನು ತಾವು ನಿರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ತಮ್ಮ ಬಗ್ಗೆ ಇದ್ದ ಎಲ್ಲಾ ಅನಿಸಿಕೆಗಳನ್ನು ಸೋನು ಬದಲಾಯಿಸಿದ್ದಾರೆ ಎನ್ನಬಹುದು.
ಇನ್ನು ಆಟದ ಜೊತೆಗೆ ಜನರನ್ನು ರಂಜಿಸುವಲ್ಲಿ ಸಹ ಸೋನು ಶ್ರೀನಿವಾಸ್ ಗೌಡ ಮೊದಲ ಸಾಲಿನಲ್ಲಿದ್ದರು. ಒಂದು ರೀತಿ ಸೋನು ಏನೇ ಹೇಳಿದರೂ ಕೂಡ ಅದು ಜನರಿಗೆ ಬಹಳ ಖುಷಿ ಕೊಡುತ್ತಿತ್ತು. ಇನ್ನು ತಮ್ಮ ಆಟದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡ ಸೋನು ಟಾಪ್ 5 ನೆ ಸ್ಥಾನಕ್ಕೆ ತಮ್ಮ ಆತ ಮುಗಿಸಿದರು.
ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಸೋನು ಶ್ರೀನುವಾಸ್ ಸಾಕಷ್ಟು ಮಾದ್ಯಮದರ ಜೊತೆಗೆ ಸಂಭಾಷಣೆಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇನ್ನು ಇದೀಗ ಸೋನು ಶ್ರೀನಿವಾಸ್ ಗೌಡ ಹೆಣ್ಣು ಮಕ್ಕಳಿಗೆ ವಿಶೇಷ ಸಲಹೆ ನೀಡಿದ್ದು, ಸದ್ಯ ಸೋನು ಅವರ ಮಾತುಗಳು ಸಕತ್ ವೈರಲ್ ಆಗುತ್ತಿದೆ.
ಪ್ರೀತಿ ಎನ್ನುವುದು ಎಂತಹವರನ್ನು ಸಹ ಕುರುಡು ಮಾಡಿ ಬಿಡುತ್ತದೆ, ನೀವು ಏನೇ ಮಾಡಿದರು ಅದನ್ನು ಯೋಚನೆ ಮಾಡಿ ಮುಂದಿನ ಹೆಜ್ಜೆ ಇಡೀ. ಯಾರನ್ನು ಕುರುಡಾಗಿ ನಂಬಬಾರದು ಎನ್ನುವುದಕ್ಕೆ ನಾನೇ ಸರಿಯಾದ ಉದಾಹರಣೆ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ. ಇನ್ನು ಸೋನು ಅವರ ಈ ಮಾತುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.