ಬಂಧುಗಳೇ ನಮಸ್ಕಾರ ಇವತ್ತಿನ ಈ ಷ್ಟೋರಿ ಯಲ್ಲಿ ನೀವೆಲ್ಲರೂ ಕೂಡ ಮರೆತು ಬಿಟ್ಟಿರುವ ಅಂತಹ ಹಳೆಯ ನಟಿಯೊಬ್ಬರನ್ನು ಮತ್ತೊಮ್ಮೆ ನಾನು ನಿಮಗೆ ನೆನಪು ಮಾಡಿಕೊಳ್ಳುತ್ತೇನೆ. ಆ ನಟಿ ಬೇರಾರು ಅಲ್ಲ ಪದ್ಮಪ್ರಿಯ. ಪದ್ಮಪ್ರಿಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪದ್ಮಪ್ರಿಯ ಅಂತಿದ್ದ ಹಾಗೆ ನಮಗೆ ಥಟ್ಟಂತ ನೆನಪಾಗುವುದು. ನಟ ವಿಷ್ಣುವರ್ಧನ್. ಕಾರಣ 70ರಿಂದ 80 ರ ದಶಕದಲ್ಲಿ ವಿಷ್ಣುವರ್ಧನ್ ಮತ್ತು ಪದ್ಮಪ್ರಿಯ ಜೋಡಿ ಹಿಟ್ ಜೋಡಿ ಅಂತ ಕರೆಸಿಕೊಂಡಿತ್ತು.
ಇವರಿಬ್ಬರು ಸಾಕಷ್ಟು ಸಿನಿಮಾಗಳನ್ನು ಕೂಡ ಒಟ್ಟಿಗೆ ನಟಿಸಿದ್ದಾರೆ. ಮತ್ತೊಂದು ಕಡೆಯಿಂದ ಅಣ್ಣಾವ್ರ ಜೊತೆಗೂ ಕೂಡ ಸಾಲು ಸಾಲು ಸಿನಿಮಾಗಳನ್ನು ಮಾಡುವ ಮೂಲಕ ಪದ್ಮಪ್ರಿಯ ಹೆಸರನ್ನು ಮಾಡಿದ್ದರು. ಮೂಲತಹ ನಮ್ಮ ಕರ್ನಾಟಕದವರೇ ಆದರೂ ಕೂಡ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರನ್ನು ಮಾಡಿದಂತಹ ವರು ಪದ್ಮಪ್ರಿಯಾ. ಆದರೆ ನಮ್ಮ ಕರ್ನಾಟಕದವರು ಕನ್ನಡದವರು ಅನ್ನುವುದು ನಮಗೆ ಹೆಮ್ಮೆಯ ವಿಚಾರ.
ಕನ್ನಡವನ್ನ ಬಹಳ ಪ್ರೀತಿಸುತ್ತಿದ್ದರು ಕನ್ನಡವನ್ನು ಬಹಳ ಪ್ರೀತಿಯಿಂದ ಅಪ್ಪಿ ಕೊಂಡಿದ್ದರು. ಸಾಕಷ್ಟು ಸಿನಿಮಾಗಳನ್ನು ಕನ್ನಡದಲ್ಲಿಯೇ ಮಾಡಿದ್ದರು. ಪದ್ಮಪ್ರಿಯ ಹೀಗಾಗಿ ಪದ್ಮಪ್ರಿಯ ಅವರನ್ನು ಸೌತ್ ಸಿನಿಮಾ ಇಂಡಸ್ಟ್ರಿ ಯ ಹೇಮಮಾಲಿನಿ ಅಂತಲೂ ಕೂಡ ಕರೆಯಲಾಗುತ್ತಿತ್ತು. ಆದರೆ ಪದ್ಮಪ್ರಿಯಾ ಅವರ ಬದುಕು ಮಾತ್ರ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಸಿನಿಮಾ ಲೋಕದಲ್ಲಿ ಮಿಂಚಿದ್ದರು ಕೂಡ ಸಿನಿಮಾ ಲೋಕದಲ್ಲಿ ದೊಡ್ಡ ಹೆಸರನ್ನು ಮಾಡಿದ್ದರು ಕೂಡ ಪದ್ಮಪ್ರಿಯಾ ಅವರ ವೈಯಕ್ತಿಕ ಬದುಕು ಇ ದೀಯಲ್ಲ ಸಾಕಷ್ಟು ಏಳುಬೀಳುಗಳನ್ನ ಕಾಣಬೇಕಾಗಿತ್ತು.
ಸಿನಿಮಾದಲ್ಲಿ ಹೇಳಿಕೊಳ್ಳುವಂತಹ ಏಳುಬೀಳುಗಳು ಇರಲಿಲ್ಲ. ಎತ್ತರಕ್ಕೆ ಬೆಳೆದುಬಿಟ್ಟರೆ ಯಾವತ್ತೂ ಕೂಡ ಬಿದ್ದಿಲ್ಲ. ಆದರೆ ವೈಯಕ್ತಿಕ ಬದುಕಿನಲ್ಲಿ ಮಾತ್ರ ಸಂಪೂರ್ಣವಾಗಿ ಬಿದ್ದು ಹೋಗಿ ಬಿಟ್ಟರು. ಅದೇ ಕೊರಗಿನಲ್ಲಿ ಚಿಕ್ಕ ವಯಸ್ಸಿಗೆ ದುರಂತ ಅಂತ್ಯವನ್ನು ಕಾಣಬೇಕಾಗಿತ್ತು. ಹಾಗಾದರೆ ಪದ್ಮಪ್ರಿಯಾ ಅವರ ಬದುಕಿನಲ್ಲಿ ಏನಾಯಿತು. ಅವರು ಮಾಡಿಕೊಂಡ ತಪ್ಪಾ ಅಥವಾ ತನ್ನದಲ್ಲದ ತಪ್ಪಿಗಾಗಿ ಶಿಕ್ಷೆಯನ್ನು ಅನುಭವಿಸುವಂತಾಯಿತು. ಎಲ್ಲ ವಿಚಾರಗಳನ್ನು ನೋಡುತ್ತಾ ಹೋಗೋಣ.
ಅದಕ್ಕೂ ಮುನ್ನ ಪದ್ಮಪ್ರಿಯಾ ಅವರ ಸಿನಿಮಾ ಬದುಕಿನ ಬಗ್ಗೆ ಕೆಲವು ವಿಚಾರಗಳನ್ನು ನಾನು ಇವತ್ತು ನಿಮಗೆ ನೆನಪು ಮಾಡಿಕೊಳ್ಳುತ್ತೇನೆ. ಪದ್ಮಪ್ರಿಯ ಮೂಲ ಹೆಸರು ಪದ್ಮಲೋಚನ. ನಾನೀಗ ಹೇಳುತ್ತಿದ್ದ ಹಾಗೆ ಅಪ್ಪಟ ಕನ್ನಡ ಹುಡುಗಿ. ಹುಟ್ಟಿದ್ದು ಕರ್ನಾಟಕದಲ್ಲಿಯೇ. ನೋಡಲು ಸ್ವಲ್ಪ ಮಟ್ಟಿಗೆ ಹೇಮಾಮಾಲಿನಿ ಅವರ ತರ ಇದ್ದರೂ. ಅದರಲ್ಲೂ ಕೂಡ ಒಂದು ಪ್ರೊಫೈಲ್ ನಲ್ಲಂತೂ ಸೇಮ್ ಟು ಸೇಮ್ ಹೇಮಮಾಲಿನಿ ಅವರ ಥರಾನೇ ಕಾಣಿಸುತ್ತಿದ್ದರು.
ಹೇಮಾಮಾಲಿನಿ ಆ ಕಾಲದಲ್ಲಿ ಬಹಳ ಪ್ರಸಿದ್ಧವಾದ ಅಂತಹ ನಟಿ. ಹೀಗಾಗಿ ಹೇಮಮಾಲಿನಿ ರೀತಿಯಲ್ಲಿ ಇದ್ದಾರೆ ಎನ್ನುವ ಕಾರಣಕ್ಕಾಗಿ ತುಂಬಾ ಜನ ಇವರನ್ನು ಕುತೂಹಲದಿಂದ ನೋಡುತ್ತಿದ್ದರು. ಅದಕ್ಕೆ ತಕ್ಕ ಹಾಗೆ ಪದ್ಮಪ್ರಿಯ ಅಥವಾ ಪದ್ಮಲೋಚನ ಅವರಿಗೂ ಕೂಡ ಸಿನಿಮಾ ಬದುಕಿನ ಬಗ್ಗೆ ಬಹಳ ಆಸಕ್ತಿ ಇತ್ತು. ನೋಡ್ ಅದಕ್ಕೂ ಕೂಡ ಮುದ್ದು ಮುದ್ದಾಗಿದ್ದರಲ್ಲ. ಹೀಗಾಗಿಯೇ ನೃತ್ಯಾಭ್ಯಾಸವನ್ನು ಕೂಡ ಮಾಡಿಕೊಂಡಿದ್ದರು. ಆಕಸ್ಮಿಕವಾಗಿ ತೆಲುಗು ನಿರ್ದೇಶನ ಅವರೊಬ್ಬರ ಕಣ್ಣಿಗೆ ಪದ್ಮಪ್ರಿಯಾ ಅವರು ಆಗ ಬೀಳುತ್ತಾರೆ.
ಆಗ ತೆಲುಗು ತಮಿಳು ಕನ್ನಡ ಎನ್ನುವಂತಹ ಹಾರಿ ಡಿಫರೆನ್ಸ್ ಏನು ಇರಲಿಲ್ಲ. ತೆಲುಗು ಅವರು ತಮಿಳಿನಲ್ಲಿ ತಮಿಳು ಅವರು ತೆಲುಗುವಿನಲ್ಲಿ ಮತ್ತೊಬ್ಬರು ಕನ್ನಡದಲ್ಲಿ ಹೀಗೆ ಎಲ್ಲಾ ಭಾಷೆಗಳಲ್ಲೂ ಕೂಡ ಮಾಡುತ್ತಿದ್ದರು. ನಿರ್ದೇಶಕರು ಕೂಡ ಎಲ್ಲ ಕಡೆಯಲ್ಲೂ ಕೂಡ ಓಡಾಡುತ್ತಿದ್ದರು. ಹಾಗೆ ಬಹುತೇಕ ಎಲ್ಲರೂ ಕೂಡ ಚೆನ್ನೈನಲ್ಲಿ ಇರುತ್ತಾ ಇದ್ದರು. ಸಿನಿಮಾದ ತಕ್ಷಣ ಚೆನ್ನಯ್ ಅಂತ ನೆನಪಾಗುತ್ತಿತ್ತು. ಇವರು ಕೂಡ ಚೆನ್ನಾಗಿ ಹೋಗಿಬರುತ್ತಿದ್ದರು.
ಆ ಸಂದರ್ಭದಲ್ಲಿ ತೆಲುಗು ನಿರ್ದೇಶಕರೊಬ್ಬರ ಕಣ್ಣಿಗೆ ಬೀಳುತ್ತಾರೆ. ಅದರ ಜೊತೆಗೆ ಪದ್ಮಪ್ರಿಯಾ ಅವರ ಸೌಂದರ್ಯದ ಬಗ್ಗೆ ಎಲ್ಲರೂ ಕೂಡ ಮಾತನಾಡುವುದಕ್ಕೆ ಶುರುಮಾಡುತ್ತಾರೆ. ಎಂಥ ಅದ್ಭುತವಾದ ನಟಿ ನೋಡುವುದಕ್ಕೆ ಎಷ್ಟು ಮುದ್ದು ಮುದ್ದು ಆಗಿದ್ದಾರೆ ಅಂತ ಅಂತ ಹೇಳಿ ಪ್ರತಿಯೊಬ್ಬರು ಹೇಳುವುದಕ್ಕೆ ಶುರುಮಾಡುತ್ತಾರೆ ಆನಂತರ ಕನ್ನಡದ ಕ್ಕು ಕೂಡ ಅವರನ್ನು ಕರೆತರಲಾಗುತ್ತದೆ. 19 76ರಲ್ಲಿ ಬಂಗಾರದ ಗುಡಿ ಎನ್ನುವಂತಹ ಸಿನಿಮಾದಲ್ಲಿ.
ಈಗ ತುಂಬಾ ನಟಿಯರನ್ನು ನಾವು ನೋಡುತ್ತಿದ್ದೇವೆ. ಕನ್ನಡದಲ್ಲಿ ಹಿಟ್ ಆದ ತಕ್ಷಣ ಅವರು ಬೇರೆ ಭಾಷೆ ಗೆ ಸೆಟ್ಲ್ ಆಗುತ್ತಾರೆ. ವಾಪಸ್ ಅವರು ಕನ್ನಡಕ್ಕೆ ಬರುವುದಿಲ್ಲ. ಆದರೆ ಪದ್ಮಪ್ರಿಯಾ ಅವರ ವಿಚಾರದಲ್ಲಿ ಹಾಗೆ ಆಗುವುದಿಲ್ಲ. ಅವರು ತೆಲುಗು ಹಾಗೂ ಆಗಾಗ ತಮಿಳಿಗೆ ಸಿನಿಮಾಗಳು ಮಾಡಿ ಆಗಿರುತ್ತೆ. ಎರಡು ಭಾಷೆಗಳಲ್ಲೂ ಕೂಡ ಆಗಾಗ ತುಂಬಾ ಪ್ರಸಿದ್ಧವಾದ ನಟಿ ಯಾಗಿರುತ್ತಾರೆ. ತುಂಬಾ ಡಿಮ್ಯಾಂಡ್ ಇದ್ದಂತಹ ನಟಿಯಾಗಿ ರುತಾರೆ. ಕನ್ನಡದಲ್ಲಿ ಅವರು ಹೆಚ್ಚಾಗಿ ನೆಲೆ ನಿಲ್ಲುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ.
ತಮಿಳಿನಲ್ಲೂ ಕೂಡ ಒಂದು ಹೆಚ್ಚುಕಮ್ಮಿ 20 ಸಿನಿಮಾಗಳಲ್ಲಿ ಮತ್ತು ತೆಲುಗುವಿನಲ್ಲಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಕನ್ನಡದಲ್ಲಿ ಅವರು ನೆಲೆ ನಿಲ್ಲುವುದಕ್ಕೆ ಪ್ರಯತ್ನವನ್ನು ಪಡುತ್ತಾರೆ ಅದರ ಪರಿಣಾಮವಾಗಿ ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧ ನಟಿ ಅಂತ ಅನಿಸಿಕೊಳ್ಳುತ್ತಾರೆ. ಅದರಲ್ಲೂ ಕೂಡ ಅವರ ಬದುಕು ಬದಲಾಗಿದ್ದು ಅಣ್ಣ ಅವರ ಜೊತೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸಿದಾಗ. ಯಾವುದು ಒಂದು ಆಪರೇಷನ್ ಡೈಮಂಡ್ ರಾಕೆಟ್.
ಆ ಕಾಲದ ಸಿನಿಮಾ ಬಿಗ್ ಹಿಟ್ ಆಗುತ್ತದೆ. ಡೈಮಂಡ್ ರಾಕೆಟ್. ಎಲ್ಲರಿಗೂ ಕೂಡ ದೊಡ್ಡ ಹೆಸರು ತಂದು ಕೊಡುತ್ತೆ. ಸಹಜವಾಗಿ ಪದ್ಮಪ್ರಿಯ ಅವರಿಗೂ ಕೂಡ ದೊಡ್ಡ ಹೆಸರು ತಂದು ಕೊಡುತ್ತೆ. ಆ ಸಿನಿಮಾ ಹಿಟ್ ಆದಂತಹ ಕಾರಣಕ್ಕಾಗಿ ಮತ್ತೊಮ್ಮೆ ರಾಜಕುಮಾರ್ ಹಾಗೆ ಪದ್ಮಪ್ರಿಯ ಜೋಡಿ ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಆ ತಾಯಿಗೆ ತಕ್ಕ ಮಗ ಸಿನಿಮಾ ರಾಜಕುಮಾರ್ ಅವರಿಗೆ ಎಷ್ಟು ಹೆಸರನ್ನು ತಂದುಕೊಡು ತ್ತೋ ಪದ್ಮಪ್ರಿಯ ಅವರಿಗೂ ಕೂಡ ಅಷ್ಟೇ ಹೆಸರನ್ನು ತಂದು ಕೊಡುತ್ತೆ.
ಆನಂತರ ಬಂದಿದ್ದು ಶಂಕರ್ ಗುರು. ರಾಜಕುಮಾರ್ ಅವರು ತ್ರಿಪಾತ್ರದಲ್ಲಿ ಕಾಣಿಸಿಕೊಂಡ ಅಂತಹ ಸಿನಿಮಾ. ಅದರಲ್ಲಿ ಒಂದು ಪಾತ್ರಕ್ಕೆ ಪದ್ಮಪ್ರಿಯ ಅವರೆ ಹೀರೋಯಿನ್ ಆಗಿರುತ್ತಾರೆ. ಅದು ಕೂಡ ಬಿಗ್ ಹಿಟ್ ಆಗುತ್ತೆ. ಈ ರೀತಿ ಅಣ್ಣಾವ್ರ ಜೊತೆಗೆ ಮೂರು ಮೂರು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ ಅವರಿಗೆ ಅದ್ಭುತವಾದಂತಹ ಅವಕಾಶಗಳು ಬರಲು ಶುರುವಾಗುತ್ತದೆ. ಆನಂತರ ನಾರದ ವಿಜಯ. ಬಿಗ್ ಹಿಟ್ ಆದಂತಹ ಸಿನಿಮಾ.
ಇನ್ನು ಅವರು ಬಹಳ ಪ್ರಸಿದ್ಧಿಯನ್ನು ಪಡೆದಿದ್ದು ವಿಷ್ಣುವರ್ಧನ್ ಅವರ ಜೋಡಿಯಾಗಿ. ಹೆಚ್ಚುಕಡಿಮೆ ಒಂದು ಐದರಿಂದ ಆರು ಸಿನಿಮಾಗಳಲ್ಲಿ ನಟ ವಿಷ್ಣುವರ್ಧನ್ ಹಾಗೆ ಪದ್ಮಪ್ರಿಯ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಆ ಕಾಲದಲ್ಲಿ ಹಿಟ್ ಪೇರ್ ಅಂತಾನೆ ಕಳುಹಿಸಿ ಕೊಳ್ಳುತ್ತಾರೆ. ವಿಷ್ಣುವರ್ಧನ್ ಮತ್ತು ಪದ್ಮಪ್ರಿಯಾ. ಆಗ ವಿಷ್ಣುವರ್ಧನ್ ಸಿನಿಮಾ ಅಂತ ಹೇಳಿದರೆ ತಕ್ಷಣ ನೆನಪಾಗುತ್ತಿದ್ದು ಪದ್ಮಪ್ರಿಯ. ಅಷ್ಟು ಅದ್ಭುತವಾಗಿ ಯೂ ಕೂಡ ಇಬ್ಬರು ನಟನೆಯನ್ನು ಮಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ತಮಿಳಿನಲ್ಲೂ ಕೂಡ ಅವರು ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತಾರೆ. ಅದೇ ಸಂದರ್ಭದಲ್ಲಿ ತೆಲುಗುವಿನಲ್ಲಿ ಕೂಡ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿರುತ್ತಾರೆ. ಹೀಗೆ ಸಿನಿಮಾ ಬದುಕು ಸಾಗುವಂತಹ ಸಂದರ್ಭದಲ್ಲಿ 19 83 ರಲ್ಲಿ ಅವರ ಮನೆಯವರು ನೋಡಿ ಮದುವೆ ಮಾಡುತ್ತಾರೆ. ಅರೆಂಜ್ ಮ್ಯಾರೇಜ್. ಲವ್ ಮ್ಯಾರೇಜ್ ಅಂತ ಏನು ಇಲ್ಲ. 19 76ರಲ್ಲಿ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದು. 74 ಅವರು ತೆಲುಗುವಿನಲ್ಲಿ ಎಂಟ್ರಿಕೊಟ್ಟಿದ್ದು. 83 ಅಂದರೆ ಹೆಚ್ಚುಕಮ್ಮಿ ಒಂದು ಹತ್ತು ವರ್ಷ 10 ವರ್ಷದಲ್ಲಿ ಸಾಕಷ್ಟು ಸಿನಿಮಾಗಳನ್ನ ಮಾಡುತ್ತಾರೆ.