ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮ ಗೆದ್ದ ಬಳಿಕ ವಂಶಿಕಾ ಹಾಗೂ ಶಿವು ಅವರ ಮೊದಲ ರಿಯಾಕ್ಷನ್ ಹೇಗಿದೆ ನೋಡಿ…

ಸ್ಯಾಂಡಲವುಡ್

ವಂಶಿಕಾ ಅಂಜಲಿ ಕಶ್ಯಪ ಈ ಹೆಸರು ಇದೀಗ ಕಿರುತೆರೆಯಲ್ಲಿ ಬಹಳನೇ ಫೇಮಸ್. ವಂಶಿಕಾ ಅಂಜಲಿ ಕಶ್ಯಪ ಮಾಸ್ಟರ್ ಆನಂದ ಪುತ್ರಿ, ಮಾಸ್ಟರ್ ಆನಂದ್ ಹೇಗೆ ಚಿಕ್ಕ ವಯಸ್ಸಿನಲ್ಲಿ ಬಾಲ ಕಲಾವಿದನಾಗಿದ್ದರು, ಅದೇ ರೀತಿ ಅಥವಾ ಅದಕ್ಕಿಂತ ಹೆಚ್ಚಾಗಿ ಆನಂದ್ ಅವರ ಮಗಳು ವಂಶಿಕಾ ಚುರುಕು ಮತ್ತು ವಯಸ್ಸಿಗೂ ಮೀರಿದ ಪ್ರತಿಭೆಯನ್ನು ಹೊಂದಿದ್ದಾರೆ.

ಇನ್ನು ವಂಶಿಕಾ ಪುಟಾಣಿಗೆ ಸಿನಿಮಾಗಳಲ್ಲಿಯೂ ಕೂಡ ಬಹಳ ಡಿಮ್ಯಾಂಡ್ ಹೆಚ್ಚಾಗಿದೆ. ಇನ್ನು ವಯಸ್ಸಿಗೂ ಮೀರಿದಂತಹ ಅವಕಾಶಗಳನ್ನು ಗುರುತಿಸಿಕೊಳ್ಳುತ್ತಿರುವ ವಂಶಿಕಾ ಸಖತ್ ಫೇಮಸ್ ಆಗಿದ್ದಾರೆ. ಮೊದಲು ನನ್ನಮ್ಮ ಸೂಪರ್ ಸ್ಟಾರ್ ಎಂಬ ಶೋನ ಮೂಲಕ ಪರಿಚಯವಾದ ವಂಶಿಕ ಅಶೋನಲ್ಲಿ ಕೂಡ ಗೆದ್ದು ಬಹಳವೇ ಫೇಮಸ್ ಆಗಿದ್ದರು.

ನಂತರ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ 20 ಕಂಟೆಸ್ಟ್ ಗಳು 10 ಜೋಡಿಗಳಾಗಿ ಇದ್ದ ಪೈಕಿಯಲ್ಲಿ ವಂಶಿಕಾ ಅಂಜಲಿ ಕಶ್ಯಪ ಮತ್ತು ಶಿವು ಇಬ್ಬರು ಜೋಡಿ ಆಗಿದ್ದರು. ಸುಮಾರು 5 ತಿಂಗಳುಗಳ ಕಾಲ ನಡೆದಂತಹ ಈ ಶೋನಲ್ಲಿ ವಂಶಿಕಾ ಮಾಡುವ ತರಲೆ ಮತ್ತು ಅವಳ ಮಾತು ಎಲ್ಲವೂ ಜಡ್ಜಸ್ ಗಳ ಮತ್ತು ಅಲ್ಲಿದ್ದವರ ಗಮನ ಸೆಳೆದಿತ್ತು.

ಇನ್ನು ಇದರಿಂದ ಅವಳಿಗೆ ಫ್ಯಾನ್ ಫಾಲೋಯಿಂಗ್ಸ್ ಕೂಡ ಹೆಚ್ಚಾಗಿತ್ತು. ಅದು ಮಾತ್ರವಲ್ಲದೆ ಅವಳು ಎಲ್ಲರಿಗೂ ಅಚ್ಚು ಮೆಚ್ಚು. ಮತ್ತು ಆಕೆಯ ಚುರುಕುತನ ಎಲ್ಲರನ್ನು ಬೆರಗಾಗಿಸುತ್ತಿತ್ತು. ತನ್ನ ವಯಸ್ಸಿಗೂ ಮೀರಿದಂತಹ ಪಾತ್ರಗಳಲ್ಲಿ ಬೇರೆ ಕಲಾವಿದರಿಂದ ಮಾಡಲಾಗದಂತಹ ಅನೇಕ ಪಾತ್ರಗಳನ್ನು ಕೂಡ ನಿರ್ವಹಿಸಿರುವ ವಂಶಿಕ ಕೊನೆಗೂ ಕೂಡ ಗಿಚ್ ಗಿಲಿ ಗಿಲಿ ಕಾರ್ಯಕ್ರಮದ ವಿನ್ನರ್ ಆಗಿ ಮುಂಚಿದ್ದಾಳೆ.

ಇನ್ನು ವಂಶಿಕ ಮತ್ತು ಶಿವು ಅವರು ವಿನ್ನರ್ ಆಗಿದ್ದು ಆ ಶೋನಲ್ಲಿ ಸೃಜನ್ ಲೋಕೇಶ್ ಸಾಧುಕೋಕಿಲ್ ಮತ್ತು ಶೃತಿ ಅವರು ಜಡ್ಜಸ್ ಆಗಿ ವಂಶಿಕ ಮತ್ತು ಶಿವು ಅವರು ವಿನ್ನರ್ ಎಂದು ಪ್ರಕಟಿಸಿದ್ದಾರೆ. ಮತ್ತು ಇದಕ್ಕೆ ಎಲ್ಲರೂ ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ವಂಶಿಕ ಇದರಿಂದ ಡಬಲ್ ಖುಷಿ ಆಗಿದ್ದಾಳೆ ಮತ್ತು ಅವಳು ಭಗವಹಿಸಿರುವ ಎರಡನೇ ಶೋನಲ್ಲೂ ಕೂಡ ತಾನೆ ವಿನ್ನರಾಗಿ ಹೊರಹೊಮ್ಮಿದ್ದಾಳೆ.

ಇನ್ನು ಗಿಜಿ ಗಿಲಿ ಗಿಲಿ ಕಾರ್ಯಕ್ರಮದ ರನ್ನರಾಗಿ ನಿವೇದಿತಾ ಗೌಡ ಅವರು ಹೊರಹೊಮ್ಮಿದ್ದಾರೆ. ಮತ್ತು ಇತ್ತೀಚಿಗಷ್ಟೇ ಲೈವ್ ಬಂದಿದ್ದ ವಂಶಿಕ ಮತ್ತು ಶಿವು ಅವರು ತಾವು ವಿನ್ನರ್ ಆಗಿದ್ದಕ್ಕೆ ಜನತೆಗೆ ಥ್ಯಾಂಕ್ಸ್ ಹೇಳಿದ್ದಾರೆ ಮತ್ತು ವಂಶಿಕ ಕುಣಿದಾಡಿದ್ದಾಳೆ, ಮತ್ತು ಕ್ಯೂಟಾಗಿ ಲವ್ ಯು ಎಂದು ಹೇಳುತ್ತಾ ಫ್ಲೈಯಿಂಗ್ ಕಿಸ್ ಕೊಟ್ಟು ನಕ್ಕಿದ್ದಾಳೆ.

ಇನ್ನು ವಂಶಿಕ ಎಷ್ಟು ತರಲೆ ಮಾಡುತ್ತಿದ್ದಳು ಎಂಬುದನ್ನು ಕೂಡ ಶಿವು ಅವರು ಹಂಚಿಕೊಂಡಿದ್ದಾರೆ .ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಈ ಬಗ್ಗೆ ಇಬ್ಬರು ಮಾತನಾಡಿದ್ದಾರೆ. ಮುಂದುವರೆಯುತ್ತಾ ಇವರಿಗೆ ಇದೇ ರೀತಿಯಾಗಿ ಅವಕಾಶಗಳು ಮತ್ತು ವಂಶಿಕ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ

Leave a Reply

Your email address will not be published. Required fields are marked *