ಸ್ಯಾಂಡಲ್ ವುಡ್ ನ ಸೆಂಟ್ರಲ್ ಆರ್ ರಾಧಿಕಾ ಪಂಡಿತ್ ಅವರು ಮಗಳು ಐರ ಜೊತೆ ನಟ ಧೃವ ಸರ್ಜಾ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಧಿಕಾ ಪಂಡಿತ್ ಅವರಿಗೂ ಮತ್ತು ಸರ್ಜಾ ಕುಟುಂಬಕ್ಕೂ ತುಂಬಾ ಹತ್ತಿರದ ನಂಟಿದೆ.
ಇನ್ನು ಧ್ರುವ ಸರ್ಜಾ ಅವರ ಮೊದಲ ಸಿನಿಮಾವಾದ ಅದ್ದೂರಿಯಲ್ಲಿ ಜೋಡಿಯಾಗಿ ನಟಿಸಿದ ರಾಧಿಕಾ ಪಂಡಿತ್ ಅವರು ಧ್ರುವ ಸರ್ಜಾ ಅವರ ಕುಟುಂಬಕ್ಕೆ ಅಚ್ಚುಮೆಚ್ಚು. ಇನ್ನು ಮೇಘನಾ ರಾಜ್ ಅವರು ಕೂಡ ಯಶ್ ಜೊತೆ ರಾಜಾಹುಲಿ ಸಿನಿಮಾದ ಮೂಲಕ ಜೋಡಿಯಾಗಿದ್ದರು.
ಸಿನಿಮಾ ಸಿಕ್ಕಾಪಟ್ಟೆ ಹಿಟ್ ಕೂಡ ಆಗಿತ್ತು. ಇನ್ನು ಈ ಸಿನಿಮಾದ ನಂತರ ಮೇಘನಾ ರಾಜ್ ಅವರ ಬೇಡಿಕೆ ಇನ್ನಷ್ಟು ಹೆಚ್ಚಾಯಿತು ಎಂದರೆ ತಪ್ಪಾಗುವುದಿಲ್ಲ. ಇನ್ನು ಯಶ್ ಮತ್ತು ಚಿರಂಜೀವಿ ಸರ್ಜಾ ಎಷ್ಟು ಸ್ನೇಹಿತರೋ, ಇನ್ನು ರಾಧಿಕಾ ಪಂಡಿತ್ ಮತ್ತು ಧ್ರುವ ಸರ್ಜಾ ಅವರು ಕೂಡ ಅಷ್ಟೇ ಒಳ್ಳೆಯ ಸ್ನೇಹಿತರು.
ಇನ್ನು ಚಿರಂಜೀವಿ ಸರ್ಜಾ ಅವರು ತೀರಿಕೊಂಡು ಬೇಸರವಾಗಿದ್ದ ಧ್ರುವ ಸರ್ಜಾ ಮತ್ತು ಮೇಘನಾ ರಾಜ್ ಅವರಿಗೆ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಆಗಾಗ ಕರೆ ಮಾಡಿ ಧೈರ್ಯ ಹೇಳುತ್ತಿದ್ದರು. ಇದೀಗ ರಾಧಿಕಾ ಪಂಡಿತ್ ಅವರ ಪುತ್ರಿಯ ಮತ್ತು ಅವರ ಮಗನೊಂದಿಗೆ ಧ್ರುವ ಸರ್ಜಾ ಅವರ ಮನೆಗೆ ಭೇಟಿ ನೀಡಿದ್ದಾರೆ.
ಮನೆಗೆ ಬಂದ ರಾಧಿಕಾ ತುಂಬು ಗರ್ಭಿಣಿಯಾದ ಧ್ರುವ ಸರ್ಜಾ ಹೆಂಡತಿ ಪ್ರೇರಣ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಇನ್ನೂ ತನಗೆ ಗೊತ್ತಿರುವ ತಾಯಿತನದ ಸಲಹೆಗಳನ್ನು ನೀಡಿದ್ದಾರೆ. ರಾಧಿಕಾ ಪಂಡಿತ್ ಇನ್ನು ಪ್ರೇರಣ ಮತ್ತು ಧ್ರುವ ಸರ್ಜಾ ಅವರಿಗೆ ವಿಶೇಷವಾದ ಶುಭಾಶಯಗಳನ್ನು ತಿಳಿಸಿದ್ದಾರೆ ರಾಧಿಕಾ.
ಇನ್ನು ಜೂನಿಯರ್ ಚಿರುವನ ನೋಡಿ ರಾಧಿಕಾ ಪಂಡಿತ್ ರಾಯನ್ ಸೇಮ್ ಚಿರುವಿನ ಹಾಗೆ ಇದ್ದಾನೆ ಇನ್ನು ಇವನನ್ನು ನೋಡಿದರೆ ಚಿರುವನ್ನು ನೋಡಿದ ಹಾಗೆ ಆಗುತ್ತದೆ ಬಹಳ ಮುದ್ದಾಗಿದ್ದಾನೆ ಎಂದು ಹೇಳಿದ್ದಾರೆ ರಾಧಿಕಾ ಪಂಡಿತ್. ಇನ್ನು ಐರಾ ಮತ್ತು ಯಥರ್ವ್ ರಾಯನ್ ಜೊತೆಗೆ ಕೆಲ ಸಮಯ ಆಟವಾಡಿದ್ದಾರೆ.
ಅಷ್ಟೇ ಅಲ್ಲದೆ ಧ್ರುವ ಸರ್ಜಾ ಮತ್ತು ರಾಧಿಕಾ ಪಂಡಿತ್ ಅವರು ಮತ್ತೆ ಒಟ್ಟಾಗಿ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಡುತ್ತಿದೆ. ಇನ್ನು ನಿಮಗೂ ಕೂಡ ಧ್ರುವ ಸರ್ಜಾ ಮತ್ತು ರಾಧಿಕಾ ಪಂಡಿತ್ ಅವರು ಇಬ್ಬರು ಮತ್ತೆ ಒಟ್ಟಾಗಿ ನಟಿಸಬೇಕಾ ಎಂದು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.