ಕನ್ನಡ ಚಿತ್ರರಂಗದ ಅದ್ಭುತ ಹಾಗೂ ಅಮೋಘ ನಟಿಯರ ಪೈಕಿ ಹಿರಿಯ ನಟಿ ಶ್ರುತಿ ಕೂಡ ಒಬ್ಬರು. ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ಸಹ ನಟಿ ಶ್ರುತಿ ಅದ್ಭುತವಾಗಿ ಅಭಿನಯಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ನಟಿ ಶ್ರುತಿ ಇಂದಿಗೂ ಸಹ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವಂತಹ ನಟಿ.
ಕನ್ನಡ ಚಿತ್ರರಂಗದಲ್ಲಿ 90ರ ದಶಕದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ನಟಿ ಶೃತಿ ಅದೆಷ್ಟೋ ಜನರ ಮನಗೆದ್ದಿದ್ದರು. ಯಾವುದೇ ಎಮೋಷನಲ್ ಪಾತ್ರ ಇದ್ದರೂ ಅದನ್ನು ನಟಿ ಶ್ರುತಿ ಹೊರತು ಪಡಿಸಿ ಬೇರೆ ಯಾರು ಮಾಡಲು ಸಾಧ್ಯವಿಲ್ಲ ಎನ್ನುವಷ್ಟು ಅದ್ಭುತವಾಗಿ ನಟಿಸುತ್ತಿದ್ದರು.
ಎಮೋಷನಲ್ ಪಾತ್ರವಾಗಲಿ, ಅಥವಾ ಹಾಸ್ಯ ಪಾತ್ರವಾಗಲಿ, ಅಥವಾ ಇನ್ಯಾವುದೇ ಪಾತ್ರವಾದರೂ ಸಹ ಆ ಪಾತ್ರಕ್ಕೆ ತಕ್ಕಂತೆ ನಟಿಸುತ್ತಿದ್ದರು. ಕೆಲವರು ಅವರಿಗೆ ಕೊಟ್ಟ ಪಾತ್ರಗಳನ್ನು ನಟಿಸುತ್ತಾರೆ, ಇನ್ನು ಕೆಲವರು ಆ ಪಾತ್ರದಲ್ಲಿ ಜೀವಿಸುತ್ತಾರೆ ಅಂತಹ ನಟಿಯರಲ್ಲಿ ನಟಿ ಶೃತಿ ಕೂಡ ಒಬ್ಬರು.
ಜೀವನದಲ್ಲಿ ಅದೆಷ್ಟೋ ಸವಾಲುಗಳು ಬಂದರು ಅದನ್ನೆಲ್ಲಾ ಎದುರಿಸಿ ನಟಿ ಶೃತಿ ಚಿತ್ರರಂಗದ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ನಟಿ ಶ್ರುತಿ ಹಿರಿತೆರೆಯ ಜೊತೆಗೆ ಕಿರುತೆರೆಯಲ್ಲಿ ಸಹ ಹಲವು ಕಾರ್ಯಕ್ರಮಗಳಿಗೆ ತೀರ್ಪುಗಾರ್ತಿಯಾಗಿ ಎಂಟ್ರಿ ಕೊಡುವ ಮೂಲಕ ಅಲ್ಲಿಯೂ ಸಹ ಸಕ್ರಿಯರಾಗಿದ್ದಾರೆ.
ಸಿನಿಮಾರಂಗದ ಜೊತೆಗೆ ನಟಿ ಶೃತಿ ರಾಜಕೀಯ ಕ್ಷೇತ್ರದಲ್ಲಿ ಸಹ ಸಕ್ರಿಯರಾಗಿದ್ದಾರೆ. ಇನ್ನು ರಾಮ್ ಕುಮಾರ್, ದೇವರಾಜ್, ಸುನೀಲ್ ಕುಮಾರ್ ಸೇರಿದಂತೆ ಇನ್ನು ಹಲವಾರು ಸ್ಟಾರ್ ಕಲಾವಿದರ ಜೊತೆಗೆ ನಟಿ ಶೃತಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಅಲ್ಲದೆ ನಟಿ ಇಂದಿಗೂ ಸಹ ಪೋಷಕ ಪಾತ್ರಗಳಲ್ಲಿ ಅದೆಷ್ಟೋ ಸಿನಿಮಾಗಳಲ್ಲಿ ಮಿಂಚಿದ್ದಾರೆ.
ಇನ್ನು ನಟಿ ಶೃತಿ ಅವರಿಗೆ ಒಬ್ಬ ಮಗಳಿದ್ದು, ಅವರ ಹೆಸರು ಗೌರಿ ಶೃತಿ. ಇನ್ನು ಶೃತಿ ಅವರ ಮಗಳು ಅದ್ಭುತವಾಗಿ ಹಾಡುತ್ತಾರೆ. ಇನ್ನು ನಟಿ ಶೃತಿ ತಮ್ಮ ಮಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆಗಾಗ ಅಮ್ಮ ಮಗಳ ಕೆಲ ಫೋಟೋಗಳು ಮತ್ತು ರೀಲ್ಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ.
ಇನ್ನು ಇದೀಗ ನಟಿ ಶೃತಿ ತಮ್ಮ ಮಗಳು ಗೌರಿ ಜೊತೆಗೆ ಪ್ರವಾಸಕ್ಕೆ ತೆರಲಿದ್ದಾರೆ. ಹೌದು ನಟಿ ಶೃತಿ ತಮ್ಮ ಮಗಳು ಗೌರಿ ಜೊತೆಗೆ ಮಾಲ್ಡೀವ್ಸ್ ಗೆ ಹೋಗಿದ್ದು, ಅಲ್ಲಿ ಸಕತ್ ಮಜಾ ಮಾಡುತ್ತಿದ್ದಾರೆ. ಅಲ್ಲಿನ ಕೆಲವು ಫೋಟೋಗಳು ಮತ್ತು ವಿಡಿಯೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.