ಸಿನಿಮಾರಂಗದಲ್ಲಿ ಅನೇಕರು ಅನೇಕ ವಿಷಯಗಳಿಗೆ ಸುದ್ದಿಯಾಗುತ್ತಿರುತ್ತಾರೆ. ಇನ್ನು ಕೆಲವರು ತಮ್ಮಗೆ ನಡೆದ ಅವಮಾನ ನೋವುಗಳ ಬಗ್ಗೆ ಮಾತನಾಡಿದರೆ, ಇನ್ನು ಕೆಲವರು ಸಿನಿಮಾರಂಗದಲ್ಲಿ ನಡೆಯುವ ದೌರ್ಜನ್ಯಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಸಖತ್ ಸುದ್ದಿಯಾಗುತ್ತಿರುತ್ತಾರೆ.
ಇತ್ತೀಚೆಗೆ ಕನ್ನಡದ ನಟಿಯೊಬ್ಬರು ಸಿನಿಮಾರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಪದ್ಧತಿಯ ಬಗ್ಗೆ ಮಾತನಾಡಿದ್ದರು. ಹೌದು ಕನ್ನಡದ ನಟಿ ಆಶಿತಾ ಇತ್ತೀಚೆಗೆ ಬೇರೆ ಸಿನಿಮಾರಂಗಗಳಲ್ಲಿ ಅಲ್ಲ ನಮ್ಮ ಸಿನಿಮಾರಂಗದಲ್ಲೇ ಕ್ಯಾಸ್ಟಿಂಗ್ ಕೌಚ್ ಎನ್ನುವ ಹೀನಾ ಪದ್ದತಿ ಇದೆ. ಈ ಕಾರಣದಿಂದ ನಾನು 15 ವರ್ಷಗಳ ಕಾಲ ಸಿನಿಮಾರಂಗದಿಂದ ದೂರ ಉಳಿದಿದ್ದೆ ಎಂದಿದ್ದರು.
ಇನ್ನು ಇದೀಗ ಮತ್ತೊಬ್ಬ ನಟಿ ಈ ವಿಷಯದ ಬಗ್ಗೆ ಮಾತನಾಡಿದ್ದು, ಈ ವಿಷಯ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ತೆಲುಗು ಚಿತ್ರರಂಗದ ನಟಿ ನಿರೂಪಕಿ ವಿಷ್ಣುಪ್ರಿಯಾ ಚಿತ್ರರಂಗದಲ್ಲಿ ಈ ರೀತಿಯ ಒಂದು ಹೀನ ಪದ್ದತಿ ಇದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
ನಟಿ ವಿಷ್ಣುಪ್ರಿಯಾ ತೆಲುಗು ಚಿತ್ರರಂಗದ ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವುದರ ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇವರು ವರ್ಷಗಳಿಂದ ನಟಿಯಾಗಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ, ಆದರೆ ಆ ಅವಕಾಶ ಇವರಿಗೆ ದೊರೆಯಲಿಲ್ಲ.
ಇನ್ನು ನಟಿ ವಿಷ್ಣುಪ್ರಿಯಾ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ನಟಿ, ಆಗಾಗ ತಮ್ಮ ಹಾಟ್ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಕಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇನ್ನು ನಟಿ ವಿಷ್ಣುಪ್ರಿಯಾ ಇತ್ತೀಚೆಗೆ ಯೂಟ್ಯೂಬ್ ಸಂದರ್ಶನದಲ್ಲಿ ಚಿತ್ರರಂಗದ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.
ಕ್ಯಾಸ್ಟಿಂಗ್ ಕೌಚ್ ಪದ್ದತಿ ಕೇವಲ ಚಿತ್ರರಂಗದಲ್ಲಿ ಮಾತ್ರ ಇಲ್ಲ. ಬೇರೆ ಕ್ಷೇತ್ರಗಳಲ್ಲಿ ಸಹ ಈ ರೀತಿಯ ಪದ್ದತಿ ಇದೆ, ಆದರೆ ಚಿತ್ರರಂಗದಲ್ಲಿ ಸಾಕಷ್ಟು ಸೆಲೆಬ್ರೆಟಿಗಳು ಗೊತ್ತಿರುವ ಕಾರಣ ಇದು ಹೊರಗೆ ಬಂದಿದೆ. ಇನ್ನು ನಾನು ಕೂಡ ಈ ರೀತಿಯ ವಿಷಯಗಳನ್ನು ಸಾಕಷ್ಟು ನನ್ನ ಜೀವನದಲ್ಲಿ ಎದುರಿಸಿದ್ದೇನೆ.
ನನಗೂ ಕೂಡ ಹಲವಾರು ಜನ ತಮ್ಮ ಕೋರಿಕೆ ತೀರುಸುವಂತೆ ಬಯಕೆ ಇಟ್ಟಿದ್ದರು. ಇನ್ನು ಇದನ್ನು ಒಪ್ಪಿಕೊಳ್ಳುವುದು ಬಿಡುವುದು ಎಲ್ಲವೂ ನಮ್ಮ ಕೈಯಲ್ಲಿ ಇದೆ. ನನಗೆ ಸಾಕಷ್ಟು ಅವಕಾಶಗಳು ಬಂದ ಸಮಯದಲ್ಲಿ ಅವರ ಕೋರಿಕೆ ತೀರಿಸುವಂತೆ ಬೇಡಿಕೆ ಇಟ್ಟಿದ್ದರು, ಆದರೆ ನಾನು ಅದಕ್ಕೆ ಒಪ್ಪಿಕೊಂಡಿಲ್ಲ ಆ ಕಾರಣದಿಂದ ನಾನು ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡೆ. ಇನ್ನು ಇಂದು ನಾನು ನನ್ನ ಸ್ವತಃ ಕಷ್ಟದಿಂದ ಈ ಸ್ಥಾನದಲ್ಲಿದ್ದೇನೆ ಎಂದಿದ್ದಾರೆ.
ಇನ್ನು ಮಾತು ಮುಂದುವರೆಸಿದ ನಟಿ ವಿಷ್ಣುಪ್ರಿಯಾ ಪುರುಷರು ತಮ್ಮ ಹಾ,ರ್ಮೋನ್ಸ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ. ಇದಕ್ಕೆ ನಿರೂಪಕ ಇತ್ತೀಚೆಗೆ ಪುರುಷರು ಕೂಡ ಮಹಿಳೆಯರಿಂದ ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದಾಗ ಆಗ ಮಹಿಳೆಯರು ಕೂಡ ಕಂಟ್ರೋಲ್ ನಲ್ಲಿರಬೇಕು ಎಂದು ವಿಷ್ಣು ಪ್ರಿಯಾ ನಕ್ಕಿದ್ದಾರೆ.. ಇವರ ಮಾತಿಗೆ ನಿಮ್ಮ ಅಭಿಪ್ರಾಯ ಕಮೆಂಟನಲ್ಲಿ ತಿಳಿಸಿ.