ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್.ಶಿವಣ್ಣ ಅವರ ನಟನೆಯ ಬಗ್ಗೆ ಹೇಳಲು ಒಂದು ಮಾತಿಲ್ಲ. ಏಕೆಂದರೆ ಶಿವಣ್ಣ ಅವರ ಮಾಸ್ ಲುಕ್ ಹಾಗೂ ಅವರ ಡೈಲಾಗ್ ಡಿಲಿವರಿ ಈ ಎರಡಕ್ಕೂ ವಿಶೇಷವಾದ ಫ್ಯಾನ್ಸ್ ಇದ್ದಾರೆ. ಇನ್ನು ಶಿವಣ್ಣ ಲಾಂಗ್ ಹಿಡಿದು ನಡೆದರೆ ಅದನ್ನು ನೋಡಿ ಕಣ್ತುಂಬಿಕೊಳ್ಳಲು ಅದೆಷ್ಟೋ ಜನ ಕಾತುರರಾಗಿರುತ್ತಾರೆ.
ಇನ್ನು ನಟ ಶಿವಣ್ಣ ಅವರ ಭಜರಂಗಿ ಸಿನಿಮಾ ಎಲ್ಲರಿಗೂ ಸಹ ಗೊತ್ತೇ ಇದೆ. ಈ ಮೊದಲು ಮಾಸ್ ಹೀರೋ ಆಗಿ ಮಿಂಚಿದ್ದ ಶಿವಣ್ಣ ಭಜರಂಗಿ ಸಿನಿಮಾದ ಮೂಲಕ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದರು. ಇನ್ನು ಈ ಸಿನಿಮಾದ ನಂತರ ಶಿವಣ್ಣ ಅವರ ಬೇಡಿಕೆ ಇನ್ನಷ್ಟು ಹೆಚ್ಚಾಯಿತು ಎಂದರೆ ತಲ್ಲಾಗುವುದಿಲ್ಲ.
ನಟ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಈ ಹರ್ಷ ಈ ಇಬ್ಬರ ಕಾಂಬಿನೇಷನ್ ನಲ್ಲಿ 2013ರಲ್ಲಿ ಮೂಡಿ ಬಂದ ಸಿನಿಮಾ ಭಜರಂಗಿ. ಈ ಸಿನಿಮಾ ಬಿಡುಗಡೆಯಾಗಿ ಬ್ಲಾಕ್ ಬಾಸ್ಟರ್ ಹಿಟ್ ನೀಡಿತ್ತು. ಮೊದಲ ಬಾರಿಗೆನೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಈ ಕಾಂಬಿನೇಷನ್ ವಜ್ರಕಾಯ ಎಂಬ ಸಿನಿಮಾದ ಮೂಲಕ ಮತ್ತೆ ತೆರೆ ಮೇಲೆ ಅಬ್ಬರಿಸಿತು.
ಇನ್ನು ಈ ಸಿನಿಮಾದ ನಂತರ ಇತ್ತೀಚೆಗೆ ಭಜರಂಗಿ 2 ಸಿನಿಮಾದ ಮೂಲಕ ಮತ್ತೆ ಹರ್ಷ ಹಾಗೂ ಶಿವಣ್ಣ ಜನರಿಗೆ ಮೋಡಿ ಮಾಡಿದ್ದರು. ಇನ್ನು ಇದೀಗ ಇದೆ ಕಾಂಬಿನೇಷನಲ್ಲಿ ಮತ್ತೊಂದು ಸಿನಿಮಾ ತಯಾರಾಗುತ್ತಿದ್ದು, ಈ ಸಿನಿಮಾ ಕೂಡ ಭಜರಂಗಿ ರೀತಿಯೇ ವಿಶೇಷವಾಗಿ ರೆಡಿಯಾಗಕಿದೆಯಂತೆ.
ನಾಲ್ಕನೇ ಬಾರಿಗೆ ಶಿವಣ್ಣ ಹಾಗೂ ನಿರ್ದೇಶಕ ಎ ಹರ್ಷ ಒಟ್ಟಾಗಿದ್ದು, ಈ ಬಾರಿ ಕೂಡ ಅಭಿಮಾನಿಗಳಿಗೆ ಈ ಜೋಡಿ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಇನ್ನು ಈ ಸಿನಿಮಾಗೆ ವೇದ ಎಂಬ ಶೇರ್ಷಿಕೆ ಕೂಡ ನೀಡಲಾಗಿದೆ. ಇನ್ನು ಈ ಸಿನಿಮಾಗಾಗಿ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ.
ಸದ್ಯ ಸಿನಿಮಾ ಪೋಸ್ಟರ್ ಸಕಟ್ ವೈರಲ್ ಆಗುತ್ತಿದೆ. ಇನ್ನು ಇದೀಗ ಈ ಸಿನಿಮಾದ ಪೋಸ್ಟರ್ ನೋಡಿ ಶಿವಣ್ಣ ಅವರ ಅತ್ತೆ, ಅಣ್ಣಾವ್ರ ತಂಗಿ ನಾಗಮ್ಮ ಫೋಟೋಗೆ ಮುತ್ತು ನೀಡುತ್ತಿರುವ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಾಗಮ್ಮ ಅವರು ವೇದಾ ಸಿನಿಮಾದ ಪೋಸ್ಟರ್ ನೋಡಿ ತೇಟ್ ನನ್ನ ಅಣ್ಣನ ರೀತಿಯೇ ಇದ್ದಾನೆ, ನನ್ನ ಅಣ್ಣನೆ ಎಂದು ಶಿವಣ್ಣ ಅವರ ಫೋಟೋಗೆ ಮುತ್ತು ನೀಡಿದ್ದಾರೆ. ಇನ್ನು ನಾಗಮ್ಮ ಅವರ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ.
ಇನ್ನು ನಾಗಮ್ಮ ಅವರಿಗೆ ಅಪ್ಪು ನಿ*ಧನರಾಗಿರುವ ವಿಷಯ ಇನ್ನು ಸಹ ತಿಳಿದಿಲ್ಲ. ಆ ಹಿರಿ ಜೀವ ಈ ವಿಷಯವನ್ನು ತಡೆದುಕೊಳ್ಳಲು ಆಗುವುದಿಲ್ಲ ಎಂದು ಅವರ ಮನೆಯವರು ಈ ವಿಷಯವನ್ನು ಅವರಿಂದ ಮಿಚ್ಚಿಟ್ಟಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..