ನಮಸ್ಕಾರ ವೀಕ್ಷಕರೇ, ರಾಧಿಕಾ ಪಂಡಿತ್ ಮತ್ತು ಯಶ್ ಬಗ್ಗೆ ನಮ್ಮೆಲ್ಲರಿಗೂ ಗೊತ್ತೇ ಇದೆ. ಇನ್ನು ಯಶವರು ರಾಕಿ ಬಾಯ್ ಎಂದು ಫೇಮಸ್ ಆದರು ರಾಧಿಕಾ ಪಂಡಿತ್ ಅವರು ಕೂಡ ಸಿನಿಮಾಗಳಲ್ಲಿ ನಟಿಸಿ ಬಹಳ ಹೆಸರು ಮಾಡಿ ಇದೀಗ ಸಿನಿಮಾಗಳಿಂದ ದೂರ ಉಳಿದಿದ್ಡಾರೆ ರಾಧಿಕಾ ಪಂಡಿತ್.
ರಾಧಿಕಾ ಪಂಡಿತ್ ಅವರು ಹಲವು ಸ್ಟಾರ್ ನಟರೊಂದಿಗೆ ತೆರೆಯನ್ನು ಹಂಚಿಕೊಂಡಂತಹ ನಟಿ . ಮತ್ತು ಬಹುಬೇಡಿಕೆಯ ನಟಿಯಾಗಿದ್ದರು ಕ್ಯೂಟ್ ಸಿಂಡ್ರೆಲಾ ಎಂದೆ ಇವರನ್ನು ಸ್ಯಾಂಡಲ್ ವುಡ್ ನಲ್ಲಿ ಕರೆಯಲಾಗುತ್ತದೆ. ಇನ್ನು ಯಶ್ ಮತ್ತು ರಾಧಿಕಾ ಪಂಡಿತ್ ಅವರ ಜೋಡಿ ಎಲ್ಲರಿಗೂ ಅಚ್ಚುಮೆಚ್ಚು.
ಇವರು ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ವರ್ಡ್, ಡ್ರಾಮಾ, ಹೀಗೆ ಹಲವು ಸಿನಿಮಾಗಳಲ್ಲಿ ಒಂದಾಗಿ ನಟಿಸಿದರು ನಂತರ ವಿವಾಹವಾಗಲು ಮುಂದಾದರು. ಮತ್ತು ಎಲ್ಲಾ ಅಭಿಮಾನಿಗಳು ಕೂಡ ಇವರಿಬ್ಬರು ವಿವಾಹವಾಗಬೇಕೆಂದು ಬಯಸಿದ್ದರು ಕೂಡ .
ಇನ್ನು ಯಶ್ ಮತ್ತು ರಾಧಿಕಾ ಪಂಡಿತ್ ಅವರು ಇಲ್ಲ ಗುರು ಹಿರಿಯ ಸಮ್ಮುಖದಲ್ಲಿ ಅವರ ಒಪ್ಪಿಗೆಯಂತೆ ಮದುವೆಯಾದರೂ. ರಾಧಿಕಾ ಪಂಡಿತ್ ಅವರು ಮದುವೆಯಾದ ಬಳಿಕ ಸಿನಿ ರಂಗದಿಂದ ದೂರ ಉಳಿದರು ಆದರು ಅಭಿಮಾನಿಗಳಿಂದ ದೂರ ಉಳಿದಿಲ್ಲ. ಇನ್ನು ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಇಬ್ಬರು ಕ್ಯೂಟ್ ಮಕ್ಕಳಿದ್ದಾರೆ.
ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುವ ಯಶ್ ಮತ್ತು ರಾಧಿಕಾ ಪಂಡಿತ್ ವೈವಾಹಿಕ ಜೀವನದಲ್ಲಿ ತುಂಬಾ ಖುಷಿಯಿಂದ ಇದ್ದಾರೆ.ಇನ್ನು ರಾಧಿಕಾ ಪಂಡಿತ್ ಅವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಆಗಿರುತ್ತಾರೆ.
ಸಿನಿರಂಗದಿಂದ ದೂರ ಉಳಿದರೇನಂತೆ ಅಭಿಮಾನಿಗಳೊಂದಿಗೆ ಯಾವಾಗಲೂ ಸೋಶಿಯಲ್ ಮೀಡಿಯಾದ ಮೂಲಕ ಟಚ್ ನಲ್ಲಿ ಇರುತ್ತಾರೆ ರಾಧಿಕಾ ಪಂಡಿತ್. ಆಗಾಗ ನಟಿ ರಾಧಿಕಾ ಪಂಡಿತ್ ತಮ್ಮ ಫೋಟೋಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ.
ಇತ್ತೀಚಿಗೆ ರಾಧಿಕಾ ಪಂಡಿತ್ ಮತ್ತು ಯಶ್ ಅವರು ವಿದೇಶ ಪ್ರವಾಸದಲ್ಲಿದ್ದು ಅಲ್ಲಿ ಮಾಡುತ್ತಿರುವ ವೇಳೆ ರಾಧಿಕಾ ಪಂಡಿತ್ ಅವರ ಒಂದು ಫೋಟೋವನ್ನು ಯಶ್ ಅವರು ತೆಗೆದಿದ್ದು ಆ ಫೋಟೋವನ್ನು ರಾಧಿಕಾ ಪಂಡಿತ್ ಅವರು ಪೋಸ್ಟ್ ಮಾಡಿದ್ದಾರೆ. ಇದೀಗ ಆ ಫೋಟೋ ವೈರಲ್ ಆಗಿದೆ. ಈ ಜೋಡಿ ಹೀಗೆ ಮುಂದುವರೆಯುತ್ತಾ ಸದಾ ಖುಷಿಯಾಗಿರಲಿ ಎಂದು ಅಭಿಮಾನಿಗಳು ಬಯಸಿದ್ದಾರೆ.